ನಗರ ಪ್ರದೇಶಗಳಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಸೇತುವೆ, ಅಂಡರ್ ಪಾಸ್ ಸೇರಿದಂತೆ ಹಲವು ಸೇತುಗಳನ್ನು ಮಾಡಲಾಗಿರುತ್ತದೆ. ಇತ್ತ ರಸ್ತೆ ಬದಿಯಲ್ಲಿ ಪಾದಾಚಾರಿ ರಸ್ತೆಗಳು ಇರುತ್ತವೆ. ಈ ರಸ್ತೆಗಳಲ್ಲಿ ಬೈಕ್ ಸವಾರರೇ ಹೆಚ್ಚು ಕಾಣಿಸುತ್ತಾರೆ. ಇಲ್ಲೊಬ್ಬ ಪಾದಾಚಾರಿ ರಸ್ತೆ ಮೇಲಲ್ಲ, ಅದಕ್ಕಿಂತಲೂ 10 ಹೆಜ್ಜೆ ಮುಂದೆ ಹೋಗಿರುವ ಈತ ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿದ್ದಾನೆ. ಸೇತುವೆಯಿಂದ ಇಳಿದಾಗ ಈತನ ಸಾಹಸಕ್ಕೆ ಅಚ್ಚರಿ ಕಾದಿತ್ತು.
ಚೀನಾ(ಏ.17): ರಸ್ತೆ ನಿಯಮ ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಅನ್ನೋ ಕಾರಣಕ್ಕೆ ಭಾರತದಲ್ಲಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ದುಬಾರಿ ದಂಡ ಹಾಕಲಾಗುತ್ತಿದೆ. ಆದರೂ ಜನರು ತಮ್ಮ ಬುದ್ದಿ ಬಿಟ್ಟಿಲ್ಲ. ಸದ್ಯ ಲಾಕ್‌ಡೌನ್ ಕಾರಣ ರಸ್ತೆಗಿಳೆಯುವಂತಿಲ್ಲ. ಅತ್ತ ಚೀನಾದಲ್ಲಿ ಕೊರೋನಾ ವೈರಸ್ ಹತೋಟಿಗೆ ಬರುತ್ತಿರುವ ಕಾರಣ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ರಸ್ತೆಗಳಲ್ಲಿ ಹೆಚ್ಚು ವಾಹನ ಓಡಾಟಗಳಿಲ್ಲ. ಇದೇ ವೇಳೆ ಸಾಹಸಿ ಡ್ರೈವರ್ ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿ ಸಾಹಸ ಮೆರೆದಿದ್ದಾನೆ.
ಲಾಕ್‌ಡೌನ್ ವೇಳೆ ನಿಮ್ಮ ಕಾರು ನಿರ್ವಹಣೆ ಹೇಗೆ? ಪಾಲಿಸಿ 5 ಸೂತ್ರ!.
undefined
ಮಾರುತಿ ಸುಜುಕಿ ಜಿಮ್ಮಿ ಜೀಪ್ ಮೂಲಕ ಆಗಮಿಸಿದ ವ್ಯಕ್ತಿಗೆ ಯು ಟರ್ನ್ ತೆಗೆದುಕೊಳ್ಳಬೇಕಿತ್ತು. ಆದರೆ ಯು ಟರ್ನ್ ತೆಗೆದುಕೊಳ್ಳಲು ಸಿಗ್ನಲ್ ಹಾಕಿದ ತಕ್ಷಣ ಪೊಲೀಸರು ಇಲ್ಲಿ ಯು ಟರ್ನ್ ಇಲ್ಲ ಎಂದು ಎಚ್ಚರಿಸಿದ್ದಾರೆ. ಇಷ್ಟೇ ಮುಂದೆ ಹೋಗಿ ಯು ಟರ್ನ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಸುಮಾರು 1 ಕಿ.ಮೀ ಅಂತರದಲ್ಲಿ ಯು ಟರ್ನ್ ವ್ಯವಸ್ಥೆ ಇತ್ತು. ಆದರೆ ಸಿಟ್ಟಿಗೆದ್ದ ಜಿಮ್ಮಿ ಮಾಲೀಕ ಕೊಂಚ ಮುಂದೆ ಸಾಗಿ ನೇರವಾಗಿ ಪಾದಾಚಾರಿಗಳ ಮೇಲ್ಸೇತುವೆ ಮೇಲೆ ಹತ್ತಿಸಿದ್ದಾನೆ.
3ನೇ ಪೀಳಿಗೆ ಸುಜುಕಿ ಜಿಮ್ಮಿ ಜೀಪ್ 1998ರಲ್ಲಿ ಬಿಡುಗಡೆಯಾದ ವಾಹನ. ಅತ್ಯಂತ ಬಲಿಷ್ಠ ಎಂಜಿನ್ ಹೊಂದಿದೆ ವಿದೇಶಗಳಲ್ಲಿ ಈ ಜಿಮ್ಮ ಜೀಪನ್ನು ಸೇನೆ ಹೆಚ್ಚಾಗಿ ಬಳಸಿದೆ. ಇದಾದ ಬಳಿಕ ಮುಂದಿನ ಪೀಳಿಗೆ ಜಿಮ್ಮಿ ವಾಹನ ಬಿಡುಗಡೆಯಾಗಿದೆ. ಹೆಚ್ಚು ಪವರ್‌ಫುಲ್ ಎಂಜಿನ್ ಹೊಂದಿರುವ ಕಾರಣ 3ನೇ ಪೀಳಿಗೆ ಸುಜುಕಿ ಜಿಮ್ಮಿ ಯಾವ ಬೆಡ್ಡ ಗುಡ್ಡವನ್ನು ಸಲೀಸಾಗಿ ಹತ್ತುತ್ತದೆ. ಹೀಗಾಗಿ ಮಾಲೀಕ ಮೆಟ್ಟಿಲುಗಳ ಮೇಲೆ ಹತ್ತಿಸಿ ಮೇಲ್ಸೇತುವೆ ಮೂಲಕ ಸಾಗಿ ಮತ್ತೆ ಮೆಟ್ಟಿಲುಗಳ ಮೂಲಕ ಜೀಪ್ ಇಳಿಸಿದ್ದಾನೆ.
ಸೇತುವೆಯಿಂದ ಇಳಿಯುತ್ತಿದ್ದಂತೆ ಪೊಲೀಸರು ಹಾಜರಾಗಿದ್ದಾರೆ. ಬಳಿಕ ದುಬಾರಿ ದಂಡ ಹಾಗೂ ಲೈಸೆನ್ಸ್ ರದ್ದು ಮಾಡಿದ್ದಾರೆ. ಸಾಹಸ ಮೆರೆದು ಜಿಮ್ಮಿ ಮಾಲೀಕ ತನ್ನ ಡ್ರೈವಿಂಗ್ ಹಾಗೂ ಜೀಪ್ ಕುರಿತ ಹೆಮ್ಮೆ ಪಟ್ಟುಕೊಂಡು ಸೇತುವೆಯಿಂದ ಕೆಳಗಿಳಿಯುತ್ತಿದ್ದ. ಆದರೆ ಪೊಲೀಸರ ಈ ರೀತಿ ಗಿಫ್ಟ್ ನೀಡುತ್ತಾರೆ ಎಂದು ಆತ ಯೋಚಿಸಿರಲಿಲ್ಲ.