ಹೊಸ ವಿನ್ಯಾಸದಲ್ಲಿ 2020ರ ಸುಜುಕಿ ಹಯಬುಸಾ ಬಿಡುಗಡೆ!

By Suvarna NewsFirst Published Dec 14, 2019, 2:00 PM IST
Highlights

ಭಾರತದಲ್ಲಿ ಸುಜುಕಿ ಹಯಬುಸಾ ಬೈಕ್ ಬಿಡುಗಡೆಯಾಗಿದೆ. ಎಂಜಿನ್ ಅಪ್‌ಗ್ರೇಡ್, ಡಿಸೈನ್ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ನೂತನ ಬೈಕ್ ಬಿಡುಗಡೆಯಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
 

ನವದೆಹಲಿ(ಡಿ.14): ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಭಾರತದಲ್ಲಿ 2020ರ ಹಯಬುಸಾ ಬೈಕ್ ಬಿಡುಗಡೆ ಮಾಡಿದೆ. ಎರಡು ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಮೆಟಾಲಿಕ್ ಥಂಡರ್ ಗ್ರೆ ಹಾಗೂ ಕ್ಯಾಂಡಿ ಡೇರಿಂಗ್ ರೆಡ್ ಕಲರ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎಂಜಿನ್ ಹಾಗೂ ತಾಂತ್ರಿಕ ವಿಭಾಗದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ; ರೈಡರ್ ಮೇನಿಯಾದಲ್ಲಿ ಮಿಂಚಿದ ರಾಯಲ್ ಎನ್‌ಫೀಲ್ಡ್ ಬಾಬ್ಬರ್!

Latest Videos

ನೂತನ ಸುಜುಕಿ ಹಯಬುಸಾ ಬೈಕ್ ಭಾರತ ಸ್ಟೇಜ್ 6(BSVI) ಎಂಜಿನ್ ಅಪ್‌ಗ್ರೇಡ್ ಹೊಂದಿದೆ. ನೂತನ ಗ್ರಾಫಿಕ್ಸ್ ಡಿಸೈನ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ನೂತನ ಬೈಕ್ ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಬೈಕ್ ಸಿಗಲಿದೆ.

ಇದನ್ನೂ ಓದಿ; ಆಧುನಿಕ ತಂತ್ರಜ್ಞಾನದೊಂದಿಗೆ TVS ಅಪಾಚೆ ಬೈಕ್ ಬಿಡುಗಡೆ!

ನೂತನ ಹಯಬುಸಾ ಬೈಕ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 2020ರ ಸುಜುಕಿ ಹಯಬುಸಾ ಬೈಕ್ ಬೆಲೆ 13.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಕಳೆದ 2 ದಶಕಗಳಿಂದ ಸೂಪರ್ ಬೈಕ್ ವಿಭಾಗದಲ್ಲಿ ಸುಜುಕಿ ಹಯಬುಸಾ ಮುಂಚೂಣಿಯಲ್ಲಿದೆ. ವಿಶೇಷ ಅಂದೆರ 2020ರ ಹಯಬುಸಾ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದೆ. ಹೀಗಾಗಿ ಇಂದು ಮೇಡ್ ಇನ್ ಇಂಡಿಯಾ ಬೈಕ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.

ನೂತನ ಸುಜುಕಿ ಹಯಬುಸಾ ಬೈಕ್ 1,340 cc,ಲಿಕ್ವಿಡ್ ಕೂಲ್ಡ್, ಇನ್ ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು,  197 bhp ಪವರ್ ಹಾಗೂ  155 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!