ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!

By Web DeskFirst Published Dec 11, 2019, 6:43 PM IST
Highlights

ಸಾಧಿಸುವ ಛಲವಿದ್ದರೆ ಯಾವ ಅಡೆ ತಡೆಗಳು ಸಾಧನೆಗೆ ಅಡ್ಡಿಯಾಗಲ್ಲ. ಕರ್ನಾಟಕದಲ್ಲಿ ಇಂತಹ ಅನೇಕ ಉದಾಹರಣೆಗಳಿವೆ. ಇದೇ ರೀತಿ ಟಿ ಸಪ್ಲೈ ಮಾಡುತ್ತಾ ಬದುಕು ಕಟ್ಟಿಕೊಂಡ ಬೆಂಗಳೂರಿಗೆ ಇದೀಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಕಾರು ಡೀಲರ್ ಆಗಿದ್ದಾರೆ. ಬೆಂಗಳೂರಿಗನ ಸಾಧನೆಯ  ಹಾದಿ ಇಲ್ಲಿದೆ.

ಬೆಂಗಳೂರು(ಡಿ.11): ಟಿ ಮಾರಾಟ, ಟಿ ಸಪ್ಲೈ ಸೇರಿದಂತೆ ಟಿ ಜೊತೆ ಬದುಕು ಕಟ್ಟಿಕೊಂಡವರಲ್ಲಿ ಅಸಾಮಾನ್ಯ ಸಾಮರ್ಥ್ಯವಿರುತ್ತೆ. ಬೀದಿ ಬದಿಯಲ್ಲಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಟಿ ಮಾರುತ್ತಿದ್ದರು, ನಾಳೆ ಅದೇ ಜಾಗದಲ್ಲಿ ಟಿ ಮಾರುತ್ತಾ ಇರುತ್ತಾರೆ ಎಂದುಕೊಂಡರೆ ತಪ್ಪು. ಯಾಕೆಂದರೆ ವಡ್ನಗರ್ ರೈಲು ನಿಲ್ದಾಣದಲ್ಲಿ ಟಿ ಮಾರುತ್ತಿದ್ದ ನರೇಂದ್ರ ಮೋದಿ, ಈಗ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದಾರೆ. ಇದೇ ರೀತಿ ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ, ಇದೀಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಕಾರು ಡೀಲರ್ ಆದ ಕತೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ.

ಇದನ್ನೂ ಓದಿ: 10 ಕೋಟಿ ರೂ ಬೆಂಟ್ಲಿ ಮಸ್ಲೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

ಬೆಂಗಳೂರಿನ 48ರ ಹರೆಯದ ಟಿಎಸ್ ಸತೀಶ್  ಸಾಧನೆಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು. 13ನೇ ವಯಸ್ಸಿನಲ್ಲಿ ಅಕ್ಕ ಹಾಗೂ ಭಾವನ ಜೊತೆ ಬೆಂಗಳೂರಿಗೆ ಬಂದ ಸತೀಶ್, ಮಲ್ಲೇಶ್ವರಂನ ಚಿಕ್ಕ ರೂಂನಲ್ಲಿ ವಾಸವಾಗಿದ್ದರು. ಬಡತನದಲ್ಲೂ ಶಿಕ್ಷಣ ಮುಂದುವರಿಸಿದ ಸತೀಶ್, 16ನೇ ವಯಸ್ಸಿಗೆ ಲಾಯರ್ ಕಚೇರಿಯಲ್ಲಿ ಟಿ ಸಪ್ಲೇ ಮಾಡುವ ಕೆಲಸಕ್ಕೆ ಸೇರಿಕೊಂಡರು.

ಇದನ್ನೂ ಓದಿ: ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!

ಟಿ ಸಪ್ಲೈ ಮಾಡುತ್ತಾ ಪಿಯುಸಿ, ಹಾಗೂ ಪದವಿ ಶಿಕ್ಷಣವನ್ನು ಮುಗಿಸಿದ  ಸತೀಶ್, 1987ರಲ್ಲಿ ಟೈಟಾನ್ ವಾಚ್ ಕಂಪನಿಯಲ್ಲಿ ಟೈಪಿಸ್ಟ್ ಆಗಿ ಸೇರಿಕೊಂಡರು. 3 ವರ್ಷಗಳ ಬಳಿಕ hp(Hewlett Packard) ಕಂಪನಿಯಲ್ಲಿ 1,200 ರೂಪಾಯಿಗೆ ಸಂಬಳದ ಕೆಲಸಕ್ಕೆ ಸೇರಿಕೊಂಡರು. hp ಕಂಪನಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸ್ಟೋರ್, ರಫ್ತು, ಮಾರ್ಕೆಟಿಂಗ್ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡಿದರು. 

 

1999ರಲ್ಲಿ hp ಕೆಲಸಕ್ಕೆ ಗುಡ್  ಬೈ ಹೇಳಿದ ಸತೀಶ್, ಖಾಸಗಿ ಕಂಪನಿಯಲ್ಲಿ ಲಾಜಿಸ್ಟಿಕ್ ಮ್ಯಾನೇಜರ್ ಆಗಿ ಸೇರಿಕೊಂಡರು. ಸತೀಶ್ ವೇತನ ತಿಂಗಳಿಗೆ 1.5 ಲಕ್ಷ ರೂಪಾಯಿ. 10 ವರ್ಷದಲ್ಲಿ 9 ಬಾರಿ ಪ್ರಮೋಶನ್ ಹಾಗೂ ವೇತನ ಹೆಚ್ಚಳ ಪಡೆದ ಸತೀಶ್ ತುಡಿತ ಸಂಬಳಕ್ಕೆ ಸೀಮಿತವಾಗಿರಲಿಲ್ಲ. ಈ ಹತ್ತು ವರ್ಷದಲ್ಲಿ ರಿಯಲ್ ಎಸ್ಟೇಸ್ ಉದ್ಯಮಕ್ಕೆ ಕೈಹಾಕಿದರು.

ಇದನ್ನೂ ಓದಿ: ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್‌ ರೈಡ್‌!

ದೇಶದಲ್ಲಿನ ಆರ್ಥಿಕ ಹಿಂಜರಿತ  ಹಾಗೂ ಜಮೀನು ಸಂಬಂಧಿಸಿದ ಕೇಸ್‌ಗಳಿಂದ ಸತೀಶ್ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಹಳೇ ಕಂಪನಿಗಳ ಉದ್ಯೋಗಿಗಳು ಸತೀಶ್ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೈ ಜೋಡಿಸಿದರು. ಹೀಗಾಗಿ  ಚೇತರಿಸಿಕೊಂಡರು. ಆರಂಭಿಕ 5 ವರ್ಷ ಸತೀಶ್ ಇನ್ನಿಲ್ಲದ ಸಂಕಷ್ಟ ಅನುಭವಿಸಿದರು. ಆದರೆ 2008ರ ವೇಳೆಗೆ ಸತೀಶ್ ಬೆಂಗಳೂರು, ಕೇರಳದಲ್ಲಿ ಅಪಾರ್ಟ್‌ಮೆಂಟ್, ವಿಲ್ಲಾಗಳನ್ನು ಕಟ್ಟಿ ಮಾರಾಟ ಮಾಡೋ ಹಂತಕ್ಕೆ ಬೆಳೆದು ನಿಂತರು. 2013ರಕ್ಕೆ ಸತೀಶ್ ಅವರ ಹೊಯ್ಸಳ ಪ್ರಾಜೆಕ್ಟ್ ಕಂಪನಿ ವಹಿವಾಟು 400 ಕೋಟಿ ಗಡಿ ದಾಟಿತು.

ಇದನ್ನೂ ಓದಿ: ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

ಸತೀಶ್ ಪೊರ್ಶೆ ಕಾರು ಖರೀದಿಸಲು ಮುಂದಾದರು. ಆದರೆ ಪೊರ್ಶೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿತ್ತು. ಹೀಗಾಗಿ ದಿಡೀರ್ ನಿರ್ಧಾರ ಬದಲಿಸಿ ಬೆಂಗಳೂರಿನಲ್ಲಿ ಲ್ಯಾಂಬೋರ್ಗನಿ ಕಾರು ಡೀಲರ್‌ಶಿಪ್ ಆರಂಭಿಸಲು ನಿರ್ಧರಿಸಿದರು. ಕೆಲವೇ ದಿನಗಳಲ್ಲಿ ತಮ್ಮ ಕನಸು ಸಾಕಾರಗೊಳಿಸಿದರು. ಸತೀಶ್ ಆರಂಭಿಸಿದ ಲ್ಯಾಂಬೋರ್ಗಿನಿ ಡೀಲರ್‍‌ಶಿಪ್ ದಕ್ಷಿಣ ಭಾರತದ ಮೊದಲ ಲ್ಯಾಂಬೋರ್ಗಿನಿ ಡೀಲರ್ ಅನ್ನೋ ಹೆಗ್ಗಳಿಗೆಗೆ ಪಾತ್ರವಾಯಿತು.

 

ತಮ್ಮ ಓಡಾಟಕ್ಕೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗನಿ ಅವೆಂಟಡೊರ್ ಕಾರು ಖರೀದಿಸಿದ್ದಾರೆ. ಸದ್ಯ ಸತೀಶ್ ಬಳಿಕ 5 ವಿವಿದ ಮಾಡೆಲ್ BMW, 2 ಆಡಿ ಕಾರು, ವೋಕ್ಸ್‌ವ್ಯಾಗನ್ ಪಸಟ್, ಹ್ಯುಂಡೈ ವರ್ನಾ ಕಾರುಗಳಿವೆ.  ಯುವ  ಉದ್ಯಮಿಗಳು, ಕೆಲಸ ಅರಸಿ ಬೆಂಗಳೂರು ಹಾಗೂ ದೇಶದ ಇತರ ಭಾಗಗಳಿಗೆ ತೆರಳುವ ಯುವಕರು ತಮ್ಮ ಕೆಲಸಕ್ಕೆ ಸೀಮಿತವಾಗಬೇಡಿ. ಕಠಿಣ ಪರಿಶ್ರಮ ನಿಮ್ಮನ್ನು ಹೊಸ ಜಗತ್ತಿಗೆ ಕೊಂಡೊಯ್ಯಲಿದೆ ಎಂದು ಸತೀಶ್ ಹೇಳುತ್ತಾರೆ.

click me!