ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಇದರ ಬೆನ್ನಲ್ಲೇ ಕಾರು ಕಂಪನಿಗಳು ಪೇಟಿಂ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರಿ ಫಿಟ್ಟೆಡ್ ಫಾಸ್ಟ್ ಟ್ಯಾಗ್ ಅಳವಡಿಕೆಯಾಗಲಿದೆ.
ಬೆಂಗಳೂರು(ಡಿ.13): ಕೇಂದ್ರ ಸಾರಿಗೆ ಇಲಾಖೆಯ ಹೊಸ ನಿಯಮದ ಪ್ರಕಾರ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ 15, 2019 ರಿಂದ ನೂತನ ನಿಯಮ ಜಾರಿಯಾಗುತ್ತಿದೆ. ಈಗಾಗಲೇ ಟೋಲ್ ಗೇಟ್, ಕಾರು ಶೋ ರೂಂ ಸೇರಿದಂತೆ ವಿವಿದೆಡೆ ಫಾಸ್ಟ್ ಟ್ಯಾಗ್ ವಿತರಣೆ ನಡೆಯುತ್ತಿದೆ. ಇದೀಗ ಪೇ ಟಿಂ ಪ್ರಿ ಫಿಟ್ಟೆಡ್ ಫಾಸ್ಟ್ ಟ್ಯಾಗ್ ಅಳವಡಿಸಲು ಮುಂದಾಗಿದೆ.
ಇದನ್ನೂ ಓದಿ: ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್‌ನಿಂದ ಫಾಸ್ಟ್ ಟ್ಯಾಗ್ ಮಾರಾಟ
ವಾಹನವನ್ನು ಖರೀದಿ ಮಾಡಿದ ಸಂದರ್ಭದಲ್ಲೇ ಪ್ರೀ-ಫಿಟ್ಟೆಡ್ ಫಾಸ್ಟ್ ಟ್ಯಾಗ್ ಅಳವಡಿಕೆಗಾಗಿ ಮಾರುತಿ ಸುಜುಕಿ, ಹುಂಡೈ ಮೋಟರ್ ಇಂಡಿಯಾ, ಹೋಂಡಾ ಕಾರ್ಸ್ ಇಂಡಿಯಾ, ಕಿಯಾ ಮೋಟರ್ಸ್ ಇಂಡಿಯಾ, ಎಂಜಿ ಮೋಟರ್ಸ್ ಇಂಡಿಯಾ ಸೇರಿದಂತೆ ಮತ್ತಿತರ ಮುಂಚೂಣಿಯಲ್ಲಿರುವ ಆಟೋಮೊಬೈಲ್ ಸಂಸ್ಥೆಗಳ ಜೊತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ದುಬಾರಿ ಟೋಲ್ ಕಟ್ಟೋ ಬದಲು ಫಾಸ್ಟ್ಯಾಗ್ ಬಳಸಿ!.
ಈವರೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ವಾಹನಗಳು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಫಾಸ್ಟ್ ಟ್ಯಾಗ್ ಅನ್ನು ಬಳಸುತ್ತಿವೆ. ಡಿಸೆಂಬರ್ ಅಂತ್ಯಕ್ಕೆ ಹೆಚ್ಚುವರಿ 30 ಲಕ್ಷ ಫಾಸ್ಟ್ ಟ್ಯಾಗ್ ವಿತರಿಸುವ ಗುರಿ ಹೊಂದಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.