ಸಣ್ಣ ಕಾರಿಗೆ ಭಾರತದಲ್ಲಿ ಬೇಡಿಕೆ ಹೆಚ್ಚು. ಇದೀಗ ಫೆಬ್ರವರಿಯಲ್ಲಿ ಸಣ್ಣ ಕಾರುಗಳು ಗರಿಷ್ಠ ಮಾರಾಟವಾಗಿದೆ. ಇದರಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಕಾರು ಯಾವುದು? ಇಲ್ಲಿದೆ ಫೆವ್ರಬರಿ ತಿಂಗಳ ಮಾರಾಟದ ಲಿಸ್ಟ್.
ದೆಹಲಿ(ಮಾ.14): ಭಾರತದಲ್ಲಿ ಸಣ್ಣ ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ನಗರ ಪ್ರದೇಶಗಳಲ್ಲಿ ಸಣ್ಣ ಕಾರು ಹೆಚ್ಚು ಸೂಕ್ತ. ಇಷ್ಟೇ ಅಲ್ಲ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸುವ ಕನಸು ನನಸಾಗಿಸಬಹುದು. ಇತ್ತೀಚೆಗೆ ಹಲವು ಸಣ್ಣ ಕಾರುಗಳು ಬಿಡುಗಡೆಯಾಗಿದೆ. ಇದರಲ್ಲಿ ಮಾರುತಿ ವ್ಯಾಗನ್ಆರ್ ಕಾರು ಇತರ ಎಲ್ಲಾ ಕಾರುಗಳನ್ನ ಹಿಂದಿಕ್ಕಿ ಮಾರಾಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: ಪ್ರಿಯಾಂಕ ಚೋಪ್ರಾಗೆ 3 ಕೋಟಿ ಕಾರು ಗಿಫ್ಟ್ ನೀಡಿ ನಿಕ್ ಜೋನಸ್!
undefined
ನೂತನ ಮಾರುತಿ ವ್ಯಾಗನ್ಆರ್ ಕಾರು ಜನವರಿಯಲ್ಲಿ ಬಿಡುಗಡೆಯಾಗಿದೆ. ಒಂದೇ ತಿಂಗಳಲ್ಲಿ ಇತರ ಎಲ್ಲಾ ಸಣ್ಣ ಕಾರುಗಳನ್ನ ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಜನವರಿಯಿಂದ ಫೆಬ್ರವರಿಗೆ ಶೇಕಡಾ 12 ರಷ್ಟು ಏರಿಕೆಯಾಗಿದೆ. ಫೆಬ್ರವರಿಯಲ್ಲಿ 15,661 ಕಾರುಗಳು ಮಾರಾಟವಾಗಿದೆ.
ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!
ಫೆಬ್ರವರಿಯಲ್ಲಿ ಮಾರಾಟವಾದ ಸಣ್ಣ ಕಾರು:
ಕಾರು | ಮಾರಾಟ |
ವ್ಯಾಗನ್ಆರ್ | 15,661 |
ಟಿಯಾಗೋ | 8,286 |
ಸ್ಯಾಂಟ್ರೋ | 6,875 |
ಸೆಲೆರಿಯೋ | 3,631 |
ಕ್ವಿಡ್ | 5,050 |
ದಾಟ್ಸನ್ ಗೋ | 343 |