ರಾಯಲ್ ಎನ್‌ಫೀಲ್ಡ್ ನೀಡಿ ಹಾರ್ಲೆ ಡೇವಿಡ್ಸನ್ ಖರೀದಿಸಿ - ಭರ್ಜರಿ ಎಕ್ಸ್‌ಚೇಂಜ್ ಆಫರ್!

By Web Desk  |  First Published Mar 13, 2019, 8:57 PM IST

ಹಾರ್ಲೆ ಡೇವಿಡ್ಸನ್ ಭರ್ಜರಿ ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ. ನೂತನ ಆಫರ್ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್ ಎಕ್ಸ್‌ಚೇಂಜ್ ಮಾಡಿ ನೂತನ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸಬಹುದು. ಈ ಎಕ್ಸ್‌ಚೇಂಜ್ ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ಪುಣೆ(ಮಾ.13): ಭಾರತದ ಹಾರ್ಲೆ ಡೇವಿಡ್ಸನ್ ಬೈಕ್ ಮಾರಾಟ ಏರಿಕೆ ಮಾಡಲು ಹೊಸ ಆಫರ್ ನೀಡಲಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್ ಎಕ್ಸ್‌ಚೇಂಜ್ ಮಾಡಿ ನೂತನ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಆಫರ್ ಕೆಲ ದಿನಗಳು ಮಾತ್ರ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಆಲೋಯ್ ವೀಲ್ಹ್ ಹಾಕಿದ್ರೆ ಎಚ್ಚರ!

Tap to resize

Latest Videos

undefined

ಪುಣೆ ಹಾಗೂ ಕೊಲ್ಹಾಪುರದಲ್ಲಿರುವ ಹಾರ್ಲೆ ಡೇವಿಡ್ಸನ್ ಅಧಿಕೃತ ಡೀಲರ್ಸ್ ಇದೀಗ ಈ ಆಫರ್ ನೀಡಿದ್ದಾರೆ. ಆದರೆ ಎರಡು ಷರತ್ತುಗಳನ್ನು ಹೇಳಲಾಗಿದೆ. ಎಕ್ಸ್‌ಚೇಂಜ್ ಮಾಡುವ ರಾಯಲ್ ಎನ್‌ಫೀಲ್ಡ್ ಬೈಕ್ 2 ವರ್ಷಕ್ಕಿಂತ ಹಳೆಯದಾಗಿರಬಾರದು. ಇನ್ನು 500cc ಅಥವಾ ಅದಕ್ಕಿಂತ ಹೆಚ್ಚಿನ ಸಿಸಿ ಎಂಜಿನ್ ಹೊಂದಿರಬೇಕು.

ಇದನ್ನೂ ಓದಿ: ಪ್ರಿಯಾಂಕ ಚೋಪ್ರಾಗೆ 3 ಕೋಟಿ ಕಾರು ಗಿಫ್ಟ್ ನೀಡಿ ನಿಕ್ ಜೋನಸ್!

ರಾಯಲ್ ಎನ್‌ಫೀಲ್ಡ್ ಬುಲೆಟ್ 500, ಕ್ಲಾಸಿಕ್ 500, ಕಾಂಟಿನೆಂಟಲ್ 650, ಇಂಟರ್‌ಸೆಪ್ಟರ್, ಥಂಡರ್‌ಬರ್ಡ್ 500, ಹಾಗೂ ಥಂಡರ್‌ಬರ್ಡ್ 500X ಮಾಲೀಕರು ಎಕ್ಸ್‌ಚೇಂಜ್ ಮೂಲಕ ಹಾರ್ಲೆಡೇವಿಡ್ಸನ್ ಬೈಕ್ ಖರೀದಿಸಬಹುದು.  ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಆರಂಭಿಕ ಬೆಲೆ 5.31 ಲಕ್ಷ ರೂಪಾಯಿ. ಹಾರ್ಲೆ ಡೇವಿಡ್ಸನ್ ಬೈಕ್‌ಗೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಬೆಲೆ ಕಡಿಮೆ. 

click me!