ಒಂದು ಬಾರಿ ಹೂಡಿಕೆ ಮಾಡಿದರೆ ಸಾಕು,ಇಂಧನ ಖರ್ಚಿಲ್ಲ, ಮಾಲಿನ್ಯವೂ ಇಲ್ಲ. ಇಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಇದು. ಇದೀಗ ಅವಾನ್ ಇಲೆಕ್ಟ್ರಿಕ್ ಸ್ಕೂಟರ್ ಮೂರು ಮಾದರಿಯ ಸ್ಕೂಟರ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ ಗರಿಷ್ಠ ರೇಂಜ್ ಹೊಂದಿರುವ ಈ ಸ್ಕೂಟರ್ ಹೆಚ್ಚಿನ ವಿವರ ಇಲ್ಲಿದೆ.
ದೆಹಲಿ(ಮಾ.14): ದುಬಾರಿಯಾಗುತ್ತಿರುವ ಪೆಟ್ರೋಲು ಮತ್ತು ಕಲುಷಿತಗೊಳ್ಳುತ್ತಿರುವ ಪರಿಸರಕ್ಕೆ ಏಕೈಕ ಪರಿಹಾರ ಎಂದರೆ ಇಲೆಕ್ಟ್ರಿಕ್ ವಾಹನಗಳು. ವಿದೇಶದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಇಲೆಕ್ಟ್ರಿಕ್ ಕಾರುಗಳು ಮತ್ತು ಸ್ಕೂಟರುಗಳು ನಗರವಾಸಿಗಳ ಪಾಲಿಗೆ ಒಳ್ಳೆಯ ಆಯ್ಕೆಯೇ. ಅದನ್ನು ಮನಗಂಡ ಅವಾನ್ ಮೋಟಾರ್ಸ್ ಇಂಡಿಯಾ ಇದೀಗ ಮೂರು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಜೊತೆ ಮಾರುಕಟ್ಟೆಗೆ ಕಾಲಿಟ್ಟಿದೆ.
ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!
undefined
ಅವಾನ್ ಇಲೆಕ್ಟ್ರಿಕ್ ಸ್ಕೂಟರ್‌ನ ಮೂರು ವೇರಿಯಂಟ್‌ಗಳು ಕ್ಸೀರೋ, ಕ್ಸೀರೋ ಪ್ಲಸ್ ಮತ್ತು ಟ್ರೆಂಡಿ. ಎರಡು ವರ್ಷದ ವಾರಂಟಿಯ ಜೊತೆಗೆ ಅನೇಕ ಹೊಸ ಅನುಕೂಲಗಳನ್ನೂ ಇದು ಹೊಂದಿದೆ. ಸಾಮಾನ್ಯವಾಗಿ ಇಲೆಕ್ಟ್ರಿಕ್ ಸ್ಕೂಟರುಗಳನ್ನು ಕೊಳ್ಳುವವರನ್ನು ಕಾಡುವ ಪ್ರಶ್ನೆ ಮೂರು; ಒಮ್ಮೆ ಚಾಜ್‌ರ್ ಮಾಡಿದರೆ ಎಷ್ಟುದೂರ ಹೋಗುತ್ತದೆ. ಅಪಾರ್ಟ್‌ಮೆಂಟುಗಳ ಮೇಲ್ಮಹಡಿಗಳಲ್ಲಿ ಇರುವವರು ಚಾಜ್‌ರ್ ಮಾಡುವುದು ಹೇಗೆ? ಇಂಥ ಸ್ಕೂಟರುಗಳಲ್ಲಿ ಎಷ್ಟುಮಂದಿ ಹೋಗಬಹುದು?
ಇದನ್ನೂ ಓದಿ: ರಾಜಧಾನಿಯಲ್ಲಿ 1000 ಎಲೆಕ್ಟ್ರಿಕ್ ಬಸ್ - ಬಿಲ್ ಪಾಸ್ ಮಾಡಿದ ಸರ್ಕಾರ!
ಈ ಪ್ರಶ್ನೆಗಳಿಗೆ ಉತ್ತರವಾಗಿ ಅವಾನ್ ಎರಡು ಮಾದರಿಯ ಸ್ಕೂಟರುಗಳನ್ನು ಬಿಡುಗಡೆ ಮಾಡಿದೆ. ಕ್ಸೀರೋ ಗಂಟೆಗೆ ಇಪ್ಪತ್ತೈದು ಕಿಲೋಮೀಟರ್ ವೇಗದಲ್ಲಿ ಚಲಿಸುವ, ಒಮ್ಮೆ ಚಾಜ್‌ರ್ ಮಾಡಿದರೆ 55 ಕಿಲೋಮೀಟರ್ ಹೋಗಬಲ್ಲ ಸ್ಕೂಟರ್. ಇದರಲ್ಲೇ ಪ್ಲಸ್ ಮಾಡೆಲ್ ಗಂಟೆಗೆ ನಲವತ್ತೈದು ಕಿಲೋಮೀಟರ್ ವೇಗ ಹೊಂದಿದೆ. 110 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಇದರ ಬ್ಯಾಟರಿಯನ್ನು ತೆಗೆದು, ಜೊತೆಗೇ ಒಯ್ದು ಮನೆಯೊಳಗೇ ಚಾಜ್‌ರ್ ಮಾಡಿಕೊಳ್ಳಬಹುದು. ಒಂದು ಬ್ಯಾಟರಿಯ ತೂಕ ಎಂಟು ಕೆಜಿ.
ದೊಡ್ಡ ಟೈರು, ಸುರಕ್ಷತೆ, ವೇಗ, ದಕ್ಷತೆ ಹೊಂದಿರುವ ಸ್ಕೂಟರ್ ಇದು ಅನ್ನುತ್ತದೆ ಕಂಪೆನಿ. ಲಿಥಿಯಮ್ ಅಯಾನ್ ಬ್ಯಾಟರಿ ಹೊಂದಿರುವ ಇದರಲ್ಲಿ ಮೊಬೈಲ್ ಚಾರ್ಚರ್ ಇದೆ. ಕಾಲಿಡುವುದಕ್ಕೆ ಸಾಕಷ್ಟುಜಾಗ, ಡಿಸ್ಕ್ ಬ್ರೇಕ್, ಡಿಜಿಟಲ್ ಪ್ಯಾನೆಲ್, ದೊಡ್ಡ ಯುಟಿಲಿಟಿ ಬಾಕ್ಸ್, ಮೂರು ಸ್ವಯಂಚಾಲಿತ ಗೇರ್, ಏಳು ಡಿಗ್ರಿ ಏರಬಲ್ಲ ಸಾಮರ್ಥ್ಯ ಇರುವ ಇದು ಸಿಟಿಬೈಕ್ ಎಂದೇ ಕರೆಸಿಕೊಳ್ಳುವ ಸ್ಕೂಟರ್. ಆದರೆ ಇದಕ್ಕೆ ಲೈಸೆನ್ಸ್, ರಿಜಿಸ್ಪ್ರೇಷನ್ ಬೇಕು.
ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿ ಗ್ರಾಹಕರಿಗೆ ಬಂಪರ್ ಕೊಡುಗೆ- 2.5 ಲಕ್ಷ ರೂ ಸಬ್ಸಡಿ!
ಇಬ್ಬರು ಆರಾಮಾಗಿ ಹೋಗುವಷ್ಟುಭಾರವನ್ನು ಇದು ಹೊರಬಲ್ಲದು. 159 ಕೇಜಿ ಭಾರ ಎಳೆಯುವ ಸಾಮರ್ಥ್ಯ ಹೊಂದಿದೆ. ಸರ್ಕಾರ ಇದಕ್ಕೆ ಸಬ್ಸಿಡಿ ಕೂಡ ನೀಡುವುದರಿಂದ ಗ್ರಾಹಕರಿಗೆ ಅನುಕೂಲವಿದೆ. ಬ್ಯಾಟರಿ ರೀಚಾಜ್‌ರ್ ಮಾಡುವುದಕ್ಕೆ ಎರಡರಿಂದ ನಾಲ್ಕುಗಂಟೆ ಬೇಕು.
ಇದರ ಆರಂಭಿಕ ಬೆಲೆ ಸುಮಾರು 60,000 ರುಪಾಯಿ. ಸರ್ಕಾರದ ಸಹಾಯಧನ ಕಳೆದರೆ ಇನ್ನೂ ಬೆಲೆ ಕಡಿಮೆಯಾಗುತ್ತದೆ ಎಂಬುದು ಕಂಪೆನಿಯ ಲೆಕ್ಕಾಚಾರ. ಬೆಂಗಳೂರಿನಲ್ಲಿ ಕೇವಲ 28 ಸ್ಕೂಟರುಗಳಷ್ಟೇ ಈವರೆಗೆ ಮಾರಾಟವಾಗಿವೆ. ಪುಣೆಯಲ್ಲಿ ಇದು ಅತ್ಯಂತ ಜನಪ್ರಿಯ ವಾಹನ. ಸದ್ಯದಲ್ಲೇ ಇಲ್ಲಿ ಇನ್ನಷ್ಟುಷೋರೂಮುಗಳ ಬರಲಿವೆ ಅನ್ನುತ್ತಾರೆ ಕಂಪೆನಿಯ ವಕ್ತಾರರು.