ಸ್ಕೋಡಾ ಇಂಡಿಯಾ ತನ್ನ ರ‍್ಯಾಪಿಡ್ ಅಟೋಮ್ಯಾಟಿಕ್ ಕಾರಿನ ಬುಕಿಂಗ್ ಆರಂಭಿಸಿದೆ. ಬುಕಿಂಗ್ ಹಣ ರಿಫೆಂಡೇಬಲ್ ಆಗಿದ್ದು, ಸೆಪ್ಟೆಂಬರ್ 18 ರಿಂದ ಬುಕ್ ಮಾಡಿದ ಗ್ರಾಹಕರಿಗೆ ಡೆಲಿವರಿ ಆರಂಭಗೊಳ್ಳಲಿದೆ. ನೂತನ ಕಾರಿನ ಬುಕಿಂಗ್ ಬೆಲೆ ಹಾಗೂ ಕಾರಿನ ಮಾಹಿತಿ ಇಲ್ಲಿದೆ.
ನವದೆಹಲಿ(ಆ.30): ಹೊಚ್ಚ ಹೊಸ ಹಾಗೂ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಬುಕಿಂಗ್ ಭಾರತದಲ್ಲಿ ಆರಂಭಗೊಂಡಿದೆ. 25,000 ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಿಕೊಳ್ಳಬಹುದು. 1.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿರುವ ನೂತನ Skoda rapid AT ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಕಂಪನಿ ಹೇಳಿದೆ.
ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!
undefined
ಸ್ಕೋಡಾ ರ‍್ಯಾಪಿಡ್ TSI ಕಾರಿಗೆ ಭಾರತದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ 1.0 ಟರ್ಬೋಚಾರ್ಜಡ್ ಎಂಜಿನ್, ಹೆಚ್ಚುವರಿ ಪವರ್ ಹಾಗೂ ಮೈಲೇಜ್ ಹೊಂದಿರುವ ನೂತನ ಸ್ಕೋಡಾ ರ‍್ಯಾಪಿಡ್ ಕಾರಿಗೆ ಈಗಾಗಲೇ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸ್ಕೋಡಾ ಗ್ರಾಹಕರು ನೂತನ ರ‍್ಯಾಪಿಡ್ ಆಟೋಮ್ಯಾಟಿಕ್ ಕಾರಿಗೆ ಎಕ್ಸ್‌ಚೇಂಜ್ ಮಾಡಲು ಬಯಸುತ್ತಿದ್ದಾರೆ. ಇನ್ನು ಹಲವರು ಸ್ಕೋಡಾ ರ‍್ಯಾಪಿಡ್ ಆಟೋಮ್ಯಾಟಿಕ್ ಕಾರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಸ್ಕೋಡಾ ಇಂಡಿಯಾ ಬ್ರಾಂಡ್ ಡೈರೆಕ್ಟರ್ ಜ್ಯಾಕ್ ಹೊಲಿಸ್ ಹೇಳಿದ್ದಾರೆ.
ಕರ್ನಾಟಕದಲ್ಲಿ PPS ಮೋಟಾರ್ಸ್ ಜೊತೆ ಸ್ಕೋಡಾ ಸಹಭಾಗಿತ್ವ; 50 ಹೊಸ ನಗರಕ್ಕೆ ಡೀಲರ್‌ಶಿಪ್ ವಿಸ್ತರಣೆ!
Skoda rapid AT ಕಾರು 999cc, 3 ಸಿಲಿಂಡರ್, TSI ಪೆಟ್ರೋಲ್ ಎಂಜಿನ್ ಹೊಂದಿದ್ದು, 110 PS ಪವರ್ ಹಾಗೂ 175NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್‍ಗೆ 16.24 ಕೀಲೋಮೀಟರ್ ಮೈಲೇಜ್ ನೀಡಲಿದೆ
ಸದ್ಯ ಮಾರುಕಟ್ಟೆಯಲ್ಲಿರುವ Skoda rapid ಕಾರಿಗಿಂತ ನೂತನ ಆಟೋಮ್ಯಾಟಿಕ್ ಕಾರು ಹೆಚ್ಚು ದಕ್ಷ ಎಂಜಿನ್ ಹಾಗೂ ಪವರ್ ಹೊಂದಿದೆ. ಕಾರು ಚಾಲನೆ ಮಾಡುವಾಗ ಗ್ರಾಹಕರಿಗೆ ಇದರ ಅನುಭವ ತಿಳಿಯಲಿದೆ. ಆರಾಮಾದಾಯಕ ಪ್ರಯಾಣ ನಿಮ್ಮದಾಗಲಿದೆ ಎಂದು ಸ್ಕೋಡಾ ಇಂಡಿಯಾ ಹೇಳಿದೆ.