ಉದ್ಯಮಿ ಪುತ್ರನಿಂದ ಕಾರು ಅಪಘಾತ; ಮಾಲೀಕ ಅರಸ್ಟ್!

By Suvarna News  |  First Published Aug 30, 2020, 2:37 PM IST

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧವಾಗಿದೆ. ಇದೀಗ ಉದ್ಯಮಿ ಪುತ್ರ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದಾನೆ. ಮಗನಿಂದ ಇದೀಗ ಅಪ್ಪ ಜೈಲು ಸೇರಿದ್ದಾನೆ.


ಗುರುಗಾಂವ್(ಆ.30): ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶವಿಲ್ಲ. ಇದು ಗಂಭೀರ ಅಪರಾಧ ಕೂಡ ಹೌದು. ಆದರೆ ಇದ್ಯಾವುದನ್ನು ಲೆಕ್ಕಿಸದೆ ಉದ್ಯಮಿ ಪುತ್ರ ಕಾರು ಚಲಾಯಿಸಿದ್ದಾನೆ. ಕಾರು ಚಾಯಿಸಿಕೊಂಡು ನೇರವಾಗಿ ಮನೆ ಸೇರಿದ್ದರೆ ಬಹುಷಃ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ಉದ್ಯಮಿಯ ಅಪ್ರಾಪ್ರ ವಯಸ್ಸಿನ ಪುತ್ರ ಕಾರು ಚಾಲನೆ ವೇಳೆ ಅಪಘಾತಕ್ಕೀಡಾಗಿದೆ. 

ಆ್ಯಂಬುಲೆನ್ಸ್‌ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!

Latest Videos

undefined

ಗುರುಗಾಂವ್ ಸೈಬರ್ ಸಿಟಿ ವಲಯದ ಬಳಿ 50 ವರ್ಷದ ಉದ್ಯಮಿಯ ಪುತ್ರ ಕಾರು ಡ್ರೈವಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ 49 ವರ್ಷದ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಗಂಭೀರ ಅಪಘಾತ ಮಾಡಿದ ಬೆನ್ನಲ್ಲೇ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರೀಶೀಲಿಸಿದಾಗ ಅಪಘಾತಕ್ಕೆ ಕಾರಣವೂ ಬಹಿರಂಗವಾಗಿದೆ. ಅಪ್ರಾಪ್ತ ಬಾಲಕ ಕಾರು ಚಲಾಯಿಸಿದ್ದಾನೆ. ಇದರಿಂದ ಅಪಘಾತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಲೈಸೆನ್ಸ್ ಸೇರಿದಂತೆ ಮೋಟಾರು ವಾಹನ ದಾಖಲೆ ಪತ್ರ ವ್ಯಾಲಿಡಿಟಿ ವಿಸ್ತರಿಸಿದ ಕೇಂದ್ರ!.

ಅಪ್ತಾಪ್ತ ಕಾರು ಚಲಾಯಿಸಿದ ಕಾರಣ ಉದ್ಯಮಿಯನ್ನು ಗುರುಗಾಂವ್ ಪೊಲೀಸರು ಬಂಧಿಸಿದ್ದಾರೆ. ಸೆಕ್ಷನ್ 184 ಹಾಗೂ ಸೆಕ್ಷನ್ 185 ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಜಾಮೀನಿನ ಮೇಲೆ ಹೊರಬಂದಿರುವ ಉದ್ಯಮಿ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತನಿಖೆಗೆ ಉದ್ಯಮಿ ಕುಟುಂಬ ಸಹಕರಿಸಿದ್ದಾರೆ. ಆದರೆ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದರೆ, ಕುಟುಂಬ ಸದಸ್ಯರನ್ನೂ ಅರೆಸ್ಟ್ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

click me!