ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್!

By Suvarna NewsFirst Published Dec 27, 2019, 1:59 PM IST
Highlights

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹೆಚ್ಚು ತೂಕ ಹೊಂದಿದೆ. ಹೀಗಾಗಿ ಮಹಿಳೆಯರಿಗೆ ಸುಲಭವಾಗಿ ನಿಭಾಯಿಸುವುದು ಕಷ್ಟ. ಇದೀಗ ಮಹಿಳೆಯರಿಗಾಗಿ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ನೂತನ ಬೈಕ್ ವಿಶೇಷತೆ ಇಲ್ಲಿದೆ. 

ಚೆನ್ನೈ(ಡಿ.27): ರಾಯಲ್ ಎನ್‌ಫೀಲ್ಡ್ ಬೈಕ್ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಜಾವಾ ಮೋಟಾರ್ ಬೈಕ್ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್‌ಗೆ ತೀವ್ರ ಪೈಪೋಟಿ ಎದುರಾಗಿದೆ. ಹೀಗಾಗಿ ಹೊಸ ಹೊಸ ಬೈಕ್ ಬಿಡುಗಡೆ ಮೂಲಕ ಅಗ್ರಸ್ಥಾನದಲ್ಲಿ ಮುಂದುವರಿಯಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಇದೀಗ ಮಹಿಳೆಯರಿಗಾಗಿ ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ 350X ಬೈಕ್ ಬಿಡುಗಡೆ!

ಮಹಿಳೆಯರಿಗಾಗಿ ಬಿಡುಗಡೆ ಮಾಡುತ್ತಿರುವ ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ತೂಕ, ಮಹಿಳೆಯರಿಗೆ ಕಾಲೆಟುಕುವ ವಿನ್ಯಾಸದಲ್ಲಿ ಸೀಟ್ ಸೇರಿದಂತೆ ಹಲವು ಬದಲಾವಣೆ ನೂತನ ಬೈಕ್‌ನಲ್ಲಿ ಇರಲಿದೆ. ಕಡಿಮೆ ತೂಕದ ಬೈಕ್ ಇಚ್ಚಿಸುವ ಪುರುಷರಿಗೂ ಈ ಬೈಕ್ ಇಷ್ಟವಾಗಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಮಹಿಳೆಯರು ರೈಡ್ ಮಾಡುತ್ತಿದ್ದಾರೆ. ಆದರೆ ಹಲವು  ಮಹಿಳೆಯರು ರಾಯಲ್ ಎನ್‌ಫೀಲ್ಡ್ ಹೆಚ್ಚಿನ ತೂಕವಿರುವದರಿಂದ ನಿಭಾಯಿಸುವುದು ಕಷ್ಟ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಮಹಿಳೆಯರ ಅಭಿಪ್ರಾಯ ಕ್ರೋಡಿಕರಿಸಿ ಮಹಿಳೆಯರಿಗಾಗಿ ಹೊಸ ಬೈಕ್ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ರೈಡರ್ ಮೇನಿಯಾದಲ್ಲಿ ಮಿಂಚಿದ ರಾಯಲ್ ಎನ್‌ಫೀಲ್ಡ್ ಬಾಬ್ಬರ್

ಜನವರಿ ಮಧ್ಯಬಾಗದಲ್ಲಿ ನೂತನ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. 250cc ಎಂಜಿನ್ ಹೊಂದಿರುವ ನೂತನ ಬೈಕ್ ನಿರ್ಮಾಣಕ್ಕೆ ರಾಯಲ್ ಎನ್‌ಫೀಲ್ಡ್ ಮುಂದಾಗಿದೆ. 1980-1990ರ ದಶಕದಲ್ಲಿ ರಾಯಲ್ ಎನ್‌ಫೀಲ್ಡ್ 250cc ಬೈಕ್ ಬಿಡುಗಡೆ ಮಾಡಿತ್ತು. ಆದರೆ ಬಳಿಕ ಈ ಬೈಕ ನಿರ್ಮಾಣವನ್ನು ರಾಯಲ್ ಎನ್‌ಫೀಲ್ಡ್ ಸ್ಥಗಿತಗೊಳಿಸಿತ್ತು. 

ಮಹಿಳೆಯರಿಗಾಗಿ ಬಿಡುಗಡೆ ಮಾಡುತ್ತಿರುವ ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಬಹಿರಂಗವಾಗಿಲ್ಲ.

click me!