ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕೆ, ಸುರಕ್ಷಿತವಾಗಿ ಮನೆ ತಲುಪಿದ್ದೆ ಅದೃಷ್ಠ. 3 ಬಾರಿ ಅಪಘಾತದಿಂದ ಕೂದಲೆಳೆಯುವ ಅಂತರಿಂದ ಪಾರಾಗಿದ್ದಾನೆ. ಪ್ರಯಾಣಿಕನ ದೂರಿನ ಬೆನ್ನಲ್ಲೇ ಚಾಲಕ ಅಮಾನತು. ಆದರೆ ಚಾಲಕನ ಕಣ್ಣೀರಿನ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದಾನೆ.
ಮುಂಬೈ(ಡಿ.25): ನಗರಗಳಲ್ಲಿ ಬಹುತೇಕರು ಪ್ರಯಾಣಕ್ಕಾಗಿ ಕ್ಯಾಬ್ ನೆಚ್ಚಿಕೊಂಡಿದ್ದಾರೆ. ಆ್ಯಪ್ ಆಧಾರಿತ ಓಲಾ ಹಾಗೂ ಉಬರ್ ಜನರ ಬದುಕಿನಲ್ಲಿ ಹಾಸುಹೊಕ್ಕಿದೆ. ಹೀಗೆ ರಾತ್ರಿಯಲ್ಲಿ ಓಲಾ ಕ್ಯಾಬ್ ಬುಕ್ ಮಾಡಿ ಮನೆಗೆ ತೆರಳಿದ ಪ್ರಯಾಣಿಕ ಜೀವ ಕೈಯಲ್ಲಿ ಹಿಡಿದು ಮನೆ ತಲುಪಿದ ಘಟನೆ ನಡೆದಿದೆ. ಇಷ್ಟೇ ಪ್ರಯಾಣಿಕನ ದೂರಿನ ಬೆನ್ನಲ್ಲೇ ಚಾಲಕ ಅಮಾನತ್ತಾಗಿದ್ದಾನೆ.
ಇದನ್ನೂ ಓದಿ: ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರು ಸೇವೆ
ಮುಂಬೈನ ಥಾಣೆ ನಿವಾಸಿ ಪ್ರಶಾಂತ್ ರಾವ್ ಮನೆಗೆ ತೆರಳಲು ಅಂಧೇರಿಯ ಲೊಕಂಡವಾಲದಿಂದ ರಾತ್ರಿ ಓಲಾ ಕ್ಯಾಬ್ ಬುಕ್ ಮಾಡಿದ್ದಾನೆ. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಓಲಾ ಸ್ಥಳಕ್ಕ ಆಗಮಿಸಿದೆ. ಹತ್ತಿ ಕುಳಿತ ಪ್ರಶಾಂತ್ ರಾವ್‌ಗೆ ತಾನು ಮನೆ ತಲುಪುವ ಅನುಮಾನಗಳು ಕಾಡತೊಡಗಿದೆ. ಇದಕ್ಕೆ ಕಾರಣ ಓಲಾ ಚಾಲಕ ನಿದ್ದೆಗಣ್ಣಿನಲ್ಲಿನ ಡ್ರೈವಿಂಗ್.
ಇದನ್ನೂ ಓದಿ: ಇಂಗ್ಲೆಂಡ್ ರಸ್ತೆಯಲ್ಲಿ ಭಾರತದ ಬಜಾಜ್ ಅಟೋ ಹಾಗೂ ಓಲಾ!.
ನಿದ್ದೆ ಗಣ್ಣಿನಲ್ಲಿ ಚಾಲನೆ ಮಾಡುತ್ತಾ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯಲು ಹೋಗಿದ್ದಾನೆ. ಪ್ರಶಾಂತ್ ರಾವ್ ಕಿರುಚಿದ ಕಾರಣ ನಿದ್ದೆಯಿಂದ ಎಚ್ಚೆತ್ತ ಚಾಲಕ, ತಕ್ಷಣವೇ ಎಡಕ್ಕೆ ತಿರುಗಿಸಿ ಭಾರಿ ಅಪಘಾತದಿಂದ ತಪ್ಪಿಸಿದ್ದಾನೆ. ಹೀಗೆ ನಾಲ್ಕೈದು ಬಾರಿ ನಿದ್ದೆಗಣ್ಣಿಲ್ಲೇ ರಸ್ತೆಯ ಡಿವೈಡರ್, ಲೈಟ್ ಪೋಸ್ಟ್ ಸೇರಿದಂತೆ ಹಲವು ಸ್ಥಳಗಳಲ್ಲಿ ಕೂದಲೆಳೆಯುವ ಅಂತರದಿಂದ ಪಾರಾಗಿದ್ದಾನೆ.
ಹಲವು ಬಾರಿ ಎಚ್ಚರಿಸಿದ ಪ್ರಶಾಂತ್ ಮರುದಿನ ಓಲಾಗೆ ದೂರು ನೀಡಿದ್ದಾನೆ. ಚಾಲಕನನ್ನು ಗುರಿತಿಸಿದ ಒಲಾ ಅಮಾನತು ಮಾಡಿದೆ. ಒಲಾ ಹಾಗೂ ಉಬರ್ ಕ್ಯಾಬ್ ಸರ್ವೀಸ್ ದಿನದ ಲೀಸ್ ಮೊತ್ತವನ್ನು ಹೆಚ್ಚಿಸಿದೆ. ಲೀಸ್ ಮೊತ್ತ ಹಾಗೂ ತಮ್ಮ ಜೀವನ ನಿರ್ವಹಣೆಗೆ ಚಾಲಕರು ಹೆಚ್ಚಿನ ಅವದಿ ದುಡಿಯುವಂತಾಗಿದೆ. ಕುಟುಂಬದ ನಿರ್ವಹಣೆ ಹಾಗೂ ಇತರ ಕಾರಣದಿಂದ ನಿದ್ದೆ ಮಾಡದೆ ಚಾಲನೆ ಮಾಡುತ್ತಿದ್ದೆ ಎಂದು ಅಮಾನತುಗೊಂಡಿರುವ ಚಾಲಕ ಕಣ್ಣೀರಿಟ್ಟಿದ್ದಾನೆ.