ಗುಡ್ ಬೈ 2019: ಆಟೋ ಕ್ಷೇತ್ರದಲ್ಲಿ ಅಚ್ಚರಿ ನೀಡಿದ ಟಾಪ್ 10 ಸುದ್ದಿ!

By Suvarna NewsFirst Published Dec 27, 2019, 12:49 PM IST
Highlights

2019ಕ್ಕೆ ಗುಡ್ ಬೈ ಹೇಳಿ 2020ನ್ನು ಆಹ್ವಾನಿಸಲು ಸಜ್ಜಾಗಿದ್ದೇವೆ. 2019ರಲ್ಲಿ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಅಷ್ಟೇ ಹಿನ್ನಡೆಯನ್ನು ಅನುಭವಿಸಿದೆ. 2019ರಲ್ಲಿ ಹಲವು ಕಾರು ಕಂಪನಿಗಳು ಭಾರತಕ್ಕೆ ಎಂಟ್ರಿ ಕೊಟ್ಟು ಯಶಸ್ವಿಯಾಗಿದೆ. ಆದರೆ ವರ್ಷಾಂತ್ಯದಲ್ಲಿ ವಾಹನ ಮಾರಾಟ ಕುಸಿತ ಸೇರಿದಂತೆ ಹಲವು ಸಂಕಷ್ಟಗಳನ್ನೂ ಅಟೋ ಕ್ಷೇತ್ರ ಕಂಡಿದೆ. ಈ ವರ್ಷ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ವಿವರ ಇಲ್ಲಿದೆ. 

ಬೆಂಗಳೂರು(ಡಿ.24): ಭಾರತದ ಅಟೋಮೊಬೈಲ್ ಕ್ಷೇತ್ರ ಪ್ರತಿ ದಿನ ಬದಲಾವಣೆ ಕಾಣುತ್ತಿದೆ. ತಂತ್ರಜ್ಞಾನ, ನಿಯಮ ಸೇರಿದಂತೆ ಹಲವು ವಿಭಾಗದಲ್ಲಿ ಆಟೋ ಕ್ಷೇತ್ರ ಮಿಂಚಿನ ವೇಗದಲ್ಲಿ ಮುನ್ನಡೆಯುತ್ತಿದೆ. 2019ರಕ್ಕೆ ಗುಡ್ ಬೈ ಹೇಳೋ ಸಂದರ್ಭದಲ್ಲಿ, ಈ ವರ್ಷವನ್ನು ಮೆಲುಕು ಹಾಕಿದರೆ ಹಲವು ಅಚ್ಚರಿಗಳು ಕಣ್ಣ ಮುಂದೆ ಹಾದು ಹೋಗುತ್ತೆ. ಹೀಗೆ 2019ರ ಕ್ಯಾಲೆಂಡರ್ ವರ್ಷದಲ್ಲಿ ಆಟೋಮೊಬೈಲ್ ಕ್ಷೇತ್ರ ನೀಡಿದ ಟಾಪ್ 10 ಬ್ರೇಕಿಂಗ್ ನ್ಯೂಸ್ ವಿವರ ಈ ಕೆಳಗಿನಂತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ 10 ಸಾವಿರ ಕೋಟಿ ಮೀಸಲಿಟ್ಟ ಕೇಂದ್ರ ಸರ್ಕಾರ! (ಎಪ್ರಿಲ್ 2019)


2019ರಲ್ಲಿ ವಿಶ್ವವೇ ಎಲೆಕ್ಟ್ರಿಕ್ ವಾಹನ ಬಳಕಗೆ ಉತ್ತೇಜನ ನೀಡಿದೆ. ಭಾರತ ಕೂಡ ಹೊರತಾಗಿರಲಿಲ್ಲ. 2019ರ ಎಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ FAME II ಯೋಜನೆಯಡಿ ಬರೋಬ್ಬರಿ 10,000 ಕೋಟಿ ರೂಪಾಯಿನ್ನು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಮೀಸಲಿಟ್ಟಿತು. 2030ರ ವೇಳೆ ಸಂಪೂರ್ಣ ವಾಹನ ಎಲೆಕ್ಟ್ರಿಕ್ ವಾಹನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 

ಡೀಸೆಲ್ ವಾಹನ ಉತ್ಪಾದನೆ ನಿಲ್ಲಿಸಿದ ಮಾರುತಿ ಸುಜುಕಿ(ಎಪ್ರಿಲ್ 2019)


ಕಾರು ಉತ್ಪಾದನೆ ಹಾಗೂ ಮಾರಾಟದಲ್ಲಿ ಭಾರತೀಯ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಡೀಸೆಲ್ ವಾಹನ ಸ್ಥಗಿತ ಘೋಷಣೆ ಹಲವರಿಗೆ ಶಾಕ್ ನೀಡಿತ್ತು. 2019-20ರ ಸಾಲಿನ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ 1.3 ಲೀಟರ್ ಡೀಸೆಲ್ ವಾಹನ ಅಂತ್ಯಗೊಳ್ಳಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 1.5 ಲೀಟರ್ ಡೀಸೆಲ್ ಎಂಜಿನ್ ಮಾತ್ರ ಉತ್ಪಾದಿಸಲಿದ್ದೇವೆ ಎಂದು ಮಾರುತಿ ಹೇಳಿದೆ. 

MG ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಕಾರು ಬಿಡುಗಡೆ(ಜೂನ್, 2019)


2019ರಲ್ಲಿ ಚೀನಾ ಮಾಲೀಕತ್ವದ ಬ್ರಿಟೀಷ್ ಕಾರು ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿತು. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ ಮಿಡ್ ಸೈಝ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಯಿತು. 

ಪೆಟ್ರೋಲ್, ಡೀಸೆಲ್ ಕಾರು ನಿಷೇಧ ಇಲ್ಲ; ಕೇಂದ್ರ ಸ್ಪಷ್ಟನೆ!(ಜುಲೈ,2019)


ಕಂದ್ರ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಕಾರಿಗೆ ಹೆಚ್ಚಿನ ಉತ್ತೇಜನ ನೀಡಲಾಯಿತು. ಜಿಎಸ್‌ಟಿ ದರ ಇಳಿಸಲಾಯಿತು. ಇದರ ಬೆನ್ನಲ್ಲೇ ಭಾರತದಲ್ಲಿ ಪೆಟ್ರೋಲ್ ಕಾರು ಡೀಸೆಲ್ ನಿಷೇಧಿಸಲಾಗುವುದು ಅನ್ನೋ ಮಾತುಗಳು ಬಲವಾಗಿ ಕೇಳಿ ಬಂದಿತ್ತು.ಇದಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ  ಪೆಟ್ರೋಲ್ ಡೀಸೆಲ್ ಕಾರು ನಿಷೇಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. 

ಭಾರತಕ್ಕೆ ಎಂಟ್ರಿ ಕೊಟ್ಟ ಕಿಯಾ, ದಾಖಲೆ(ಆಗಸ್ಟ್, 2019)


ಸೌತ್ ಕೊರಿಯಾದ 2ನೇ ಅತೀ ದೊಡ್ಡ ಕಾರು ಉತ್ಪಾದಕ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿತು. ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ ಕಿಯಾ ಮಾರಾಟದಲ್ಲಿ ದಾಖಲೆ ಬರೆಯಿತು. 

ಭಾರತೀಯ ವಾಹನ ಮಾರಾಟ ಕುಸಿತ, ಉತ್ಪಾದನೆ ಸ್ಥಗಿತ(ಸೆಪ್ಟೆಂಬರ್, 2019)


2019ರ ಆಗಸ್ಟ್ ತಿಂಗಳಿನಿಂದಲೇ ಭಾರತದ ವಾಹನ ಮಾರಾಟ ಕುಸಿತ ಕಾಣಲಾರಂಭಿಸಿತು. ಸೆಪ್ಟೆಂಬರ್ ವೇಳೆಗೆ ಕಳೆದೆರಡು ದಶಕದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಸಾಕ್ಷಿಯಾಯಿತು. ಬರೋಬ್ಬರಿ 41.09% ಕುಸಿತ  ಕಂಡಿತು. ಈ ಮೂಲಕ ಹಲವು ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿತು. ಡೀಲರ್‌, ಶೋ ರೂಂಗಳು ಬಾಗಿಲು ಹಾಕಿತು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು.

ಮಹೀಂದ್ರ -ಫೋರ್ಡ್ ಜೊತೆಯಾಗಿ ಕಾರು ನಿರ್ಮಾಣಕ್ಕೆ ಒಪ್ಪಂದ(ಅಕ್ಟೋಬರ್ 2019)


ಭಾರತದ ಮಹೀಂದ್ರ ಹಾಗೂ ಅಮೆರಿಕಾದ ಫೋರ್ಡ್ ಕಾರು ಕಂಪನಿ ಜೊತೆಯಾಗಿ ಭಾರತದಲ್ಲಿ ಕಾರು ನಿರ್ಮಾಣ ಹಾಗೂ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿತು. ಒಪ್ಪಂದದ ಪ್ರಕಾರ ಭಾರತದಲ್ಲಿ ಮಹೀಂದ್ರ 51% ಹಾಗೂ ಫೋರ್ಡ್ 49% ಪಾಲು ಹೊಂದಿದೆ. 

ಭಾರತದಲ್ಲಿ 10 SUV ಕಾರು ಬಿಡುಗಡೆ ಘೋಷಿಸಿದ ಫೋಕ್ಸ್‌ವ್ಯಾಗನ್(ಅಕ್ಟೋಬರ್ 2019)


ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಮುಂದಾಗ ಫೋಕ್ಸ್‌ವ್ಯಾಗನ್ 10 SUV ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಈ ಮೂಲಕ ಇತರ ಎಲ್ಲಾ ಕಾರುಗಳಿಗೆ ಪೈಪೋಟಿ ನೀಡಲು ಫೋಕ್ಸ್ ವ್ಯಾಗನ್ ಮುಂದಾಗಿದೆ. ನೂತನ ಕಾರುಗಳ ಬೆಲೆ ಕೂಡ ಇತರ ವಾಹನಗಳಿಗೆ ಪೈಪೋಟಿ ನೀಡಲಿದೆ ಎಂದು ಕಂಪನಿ ಹೇಳಿತು.

ಸ್ಕೂಟರ್ ಉತ್ಪಾದನೆಗೆ ಮರಳಿದ ಬಜಾಜ್(ನವೆಂಬರ್ 2019)


ಬರೋಬ್ಬರಿ 14 ವರ್ಷಗಳ ಬಳಿಕ ಬಜಾಜ್ ಮತ್ತೆ ಸ್ಕೂಟರ್ ಉತ್ಪಾದನೆಗೆ ಮರಳಿತು. ಬಜಾಜ್ ಚೇತಕ್ ಸ್ಕೂಟರ್ ಸ್ಥಗಿತಗೊಂಡ ಬಳಿಕ ಬೈಕ್ ಕಡೆ ಗಮನ ಕೇಂದ್ರೀಕರಿಸಿದ್ದ ಬಜಾಜ್, ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡೋ ಮೂಲಕ ಇತಿಹಾಸ ನಿರ್ಮಿಸಿತು.

ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!