ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿಸ್ಪರ್ಧಿ ಜಾವಾ ಮೋಟಾರ್ ಸೈಕಲ್ ಭಾರಿ ಸದ್ದು ಮಾಡುತ್ತಿದೆ. ಸದ್ಯ ಬೈಕ್ ಗ್ರಾಹಕರ ಕೈಸೇರುತ್ತಿದೆ. ಇದರ ಬೆನ್ನಲ್ಲೇ ಜಾವಾ ಬೈಕ್ ಮೈಲೇಜ್ ಬಹಿರಂಗ ಗೊಂಡಿದೆ.
ನವದಹೆಲಿ(ಏ.05): ಕಳೆದ ವರ್ಷ ಬಿಡುಗಡೆಯಾದ ಜಾವಾ ಮೋಟಾರ್ ಸೈಕಲ್ ಇದೀಗ ಗ್ರಾಹಕರ ಕೈಸೇರುತ್ತಿದೆ. ಭಾರಿ ಬೇಡಿಕೆಯಿಂದ ಬೈಕ್ ಪೂರೈಕೆಯಲ್ಲಿ ವಿಳಂಭವಾಗುತ್ತಿದೆ. ಆರಂಭದಲ್ಲಿ ಬುಕ್ ಮಾಡಿದ್ದ ಗ್ರಾಹಕರಿಗೆ ಕಳೆದವಾರದಿಂದ ಬೈಕ್ ತಲುಪಿದೆ. ಇದರ ಬೆನ್ನಲ್ಲೇ ಜಾವಾ ಹಾಗೂ ಜಾವಾ 42 ಎರಡೂ ಬೈಕ್‌ಗಳ ಮೈಲೇಜ್ ಬಹಿರಂಗವಾಗಿದೆ.
undefined
ಇದನ್ನೂ ಓದಿ: ಸಾಹೋ ಚಿತ್ರಕ್ಕಾಗಿ 10 ಲಕ್ಷ ರೂ. ಬೈಕ್ ಬಳಸಿದ ಬಾಹುಬಲಿ ಪ್ರಭಾಸ್!
ಜಾವಾ ಹಾಗೂ ಜಾವಾ 42 ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 37.5 ಕಿ.ಮಿ ಮೈಲೇಜ್ ನೀಡುತ್ತಿದೆ ಎಂದು ARAI(ಆಟೋಮೊಟೀವ್ ರಿಸರ್ಚ್ ಆಸೋಸಿಯೇಶನ್ ಆಫ್ ಇಂಡಿಯಾ) ಪ್ರಮಾಣೀಕರಿಸಿದೆ. ಈ ಮೂಲಕ ಮೈಲೇಜ್‌ನಲ್ಲೂ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್ ಗೆ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬುಲೆಟ್ 350 ABS ಬೈಕ್ ಬೆಲೆ ಬಹಿರಂಗ!
ಜಾವಾ ಮೋಟಾರ್ ಬೈಕ್ 3 ವೇರಿಯೆಂಟ್‌ಗಳಲ್ಲಿ ಬೈಕ್ ಬಿಡುಗಡೆಯಾಗಿದೆ. ಜಾವಾ, ಜಾವ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾಡೆಲ್‌ಗಳಲ್ಲಿ ಬಿಡುಗಡೆಯಾಗಿದೆ. ಒಟ್ಟು 6 ಬಣ್ಣಗಳಲ್ಲಿ ಜಾವಾ ಬೈಕ್ ಮೋಟರ್‌ಬೈಕ್ ಲಭ್ಯವಿದೆ. ಜಾವಾ ಹಾಗೂ ಜಾವಾ 42 ಬೈಕ್ ಮೋಟರ್ ಬೈಕ್ 293 ಸಿಸಿ ಎಂಜಿನ್ ಹೊಂದಿದ್ದರೆ, ಜಾವಾ ಪೆರಾಕ್ 334 ಸಿಸಿ ಎಂಜಿನ್ ಹೊಂದಿದೆ. ಸದ್ಯ ಅನಾವರಣಗೊಂಡಿರುವ ಕಸ್ಟಮೈಸ್‌ಡ್ ಜಾವಾ ಬೊಬರ್(ಜಾವಾ ಪೆರಾಕ್) 2019ರಲ್ಲಿ ಮಾರುಕ್ಟಟೆ ಪ್ರವೇಶಿಸಲಿದೆ.