ಮಾರ್ಚ್‌ನಲ್ಲಿ ದಾಖಲೆ ಬರೆದ ನೂತನ ಮಾರುತಿ ಎರ್ಟಿಗಾ ಕಾರು!

By Web DeskFirst Published Apr 5, 2019, 9:08 PM IST
Highlights

ಮಾರುತಿ ಸುಜುಕಿ ಸಂಮಸ್ಥೆಯ ನೂತನ  ಎರ್ಟಿಗಾ ಕಾರು ದಾಖಲೆ ಬರೆದಿದೆ. ಟೊಯೊಟ ಇನೋವಾ, ಮಹೀಂದ್ರ ಬೊಲೆರೋ, ಟಾಟಾ ಹೆಕ್ಸಾ ಸೇರಿದಂತೆ MPV ಕಾರುಗಳನ್ನು ಹಿಂದಿಕ್ಕಿದೆ. ಎರ್ಟಿಗಾ ನೂತನ ದಾಖಲೆ ವಿವರ ಇಲ್ಲಿದೆ.

ನವದೆಹಲಿ(ಏ.05): ಮಾರುತಿ  ಸುಜುಕಿ ನೂತನ ಎರ್ಟಿಗಾ ಕಾರು ಗ್ರಾಹಕರನ್ನು ಮೋಡಿ ಮಾಡುತ್ತಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾದ ನೂತನ ಎರ್ಟಿಗಾ ಕಾರು ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್ ಹಾಗೂ ಗಾತ್ರದಲ್ಲೂ ಬದಲಾವಣೆ ಮಾಡಿರುವ ನೂತನ ಎರ್ಟಿಗಾ ಮಾರ್ಚ್ ತಿಂಗಳಲ್ಲಿ ದಾಖಲೆ ಬರೆದಿದೆ. ಇನೋವಾ, ಬೊಲೆರೊ ಸೇರಿದಂತೆ MPV ವಾಹನಗಳನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

ಇದನ್ನೂ ಓದಿ: MG ಮೋಟಾರ್ಸ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- ಪೆಟ್ರೋಲ್ ಕಾರಿಗಿಂತ ಕಡಿಮೆ!

ಮಾರ್ಚ್ ತಿಂಗಳ ಮಾರಾಟದಲ್ಲಿ ಮಾರುತಿ ಎರ್ಟಿಗಾ ಕಾರು 8955 ಕಾರುಗಳು ಮಾರಾಟವಾಗಿದೆ. ಹಳೇ ಮಾರುತಿ ಎರ್ಟಿಗಾ ಕಾರು ಒಂದೇ ತಿಂಗಳಲ್ಲಿ 8000ಕ್ಕಿಂತ ಹೆಚ್ಚು ಮಾರಾಟವಾಗಿಲ್ಲ. ಇದೀಗ ನೂತನ ಎರ್ಟಿಗಾ ಕಾರು ಹೊಸ ದಾಖಲೆ ಬರೆದಿದೆ.  ನೂತನ ಎರ್ಟಿಗಾ ಕಾರಿನ ಬೆಲೆ  7.44 l ಲಕ್ಷ ರೂಪಾಯಿಂದ  10.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ನಾವಿಬ್ಬರು-ನಮಗಿಬ್ಬರು;ಕಾರಿಗೂ ಬರಲಿದೆ ಫ್ಯಾಮಿಲಿ ಪ್ಲಾನಿಂಗ್!

ಮಾರ್ಚ್ ತಿಂಗಳ ಮಾರಾಟದಲ್ಲಿ ಎರ್ಟಿಗಾ ಮೊದಲ ಸ್ಥಾನ ಅಲಂಕರಿಸಿದರೆ, ಮಹೀಂದ್ರ ಬೊಲೆರೊ 8019, ಟೊಯೊಟಾ ಇನೊವಾ 6984 , ಮಹೀಂದ್ರ ಮೊರಾಜೋ 2751 ಕಾರುಗಳು ಮಾರಾಟವಾಗಿದೆ. ಮಹೀಂದ್ರ ಕ್ಸೈಲೋ 402, ಟಾಟಾ ಹೆಕ್ಸಾ 366, ದಾಟ್ಸನ್ ಗೋ ಪ್ಲಸ್ 291, ಟಾಟಾ ಸುಮೊ 96, ರೆನಾಲ್ಟ್ ಲಾಡ್ಜಿ 54 ಕಾರುಗಳು ಮಾರ್ಚ್ ತಿಂಗಳಲ್ಲಿ ಮಾರಾಟವಾಗಿದೆ.

click me!