MG ಮೋಟಾರ್ಸ್ SUV ಕಾರಿನ ಬೆನ್ನಲ್ಲೇ, ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಬೆಲೆ ಪಟ್ಟಿ ಬಹಿರಂಗವಾಗಿದೆ. ಇತರ ಪೆಟ್ರೋಲ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ MG ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳು ಸಿಗಲಿದೆ.
ನವದೆಹಲಿ(ಏ.05): ಬ್ರಿಟೀಷ್ ಮೂಲದ MG ಮೋಟಾರ್ಸ್ ಈಗಾಗಲೇ ಭಾರತದಲ್ಲಿ ಮೊದಲ SUV ಕಾರು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. MG ಮೋಟಾರ್ಸ್ ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳನ್ನೊಳಗೊಂಡಿದೆ. ಇದೀಗ MG ಮೋಟಾರ್ಸ್ ನೂತನ ಕಾರಿನ ಬೆಲೆ ಪಟ್ಟಿಯನ್ನು ಬಹಿರಂಗ ಪಡಿಸಿದೆ.
ಇದನ್ನೂ ಓದಿ: CM ಕುಮಾರಸ್ವಾಮಿ ಕಾರು ನಿಲ್ಲಿಸಿದ ಎಲೆಕ್ಷನ್ ಕಮಿಶನ್!
undefined
MG ಮೋಟಾರ್ಸ್ ಎಲೆಕ್ಟ್ರಿಕ್ ಕಾರಿನ ಗರಿಷ್ಠ ಬೆಲೆ 10 ಲಕ್ಷ ರೂಪಾಯಿ ಎಂದು ಕಂಪನಿ ಹೇಳಿದೆ. ಸದ್ಯ 10 ಲಕ್ಷ ರೂಪಾಯಿ ಒಳಗಡೆ ಸಿಗೋ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಇದಾಗಿದ್ದು, ಮಹೀಂದ್ರ, ಟಾಟಾ ಸೇರಿದಂತೆ ಇತರ ಕಂಪನಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.
ಇದನ್ನೂ ಓದಿ: ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!
ನೂತನ ಎಲೆಕ್ಟ್ರಿಕ್ ಕಾರು 110 KW ಎಲೆಕ್ಟ್ರಿಕ್ ಕಾರು 150PS ಗರಿಷ್ಠ ಪವರ್ ಹಾಗೂ 350nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 0-50 KMH ತಲುಪಲು MG ಮೋಟಾರ್ಸ್ ಎಲೆಕ್ಟ್ರಿಕ್ ಕಾರು ತೆಗೆದುಕೊಳ್ಳುವ ಸಮಯ 3.1 ಸೆಕೆಂಡ್. ಕ್ವಿಕ್ ಚಾರ್ಜ್ ಮೂಲಕ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. ಇನ್ನು ಫುಲ್ ಚಾರ್ಜ್ ಮಾಡಲಲು 6.5 ಗಂಟೆ ತೆಗೆದುಕೊಳ್ಳಲಿದೆ. 2020ಕ್ಕೆ ಈ ಕಾರು ಬಿಡುಗಡೆಯಾಗಲಿದೆ.