ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 156 ಕಿ.ಮೀ ಮೈಲೇಜ್ ನೀಡಲಿದೆ. ವಿಶೇಷ ಅಂದರೆ ಈ ಬೈಕ್ ಖರೀದಿ ಸುಲಭ. ಕೇವಲ 2999 ರೂಪಾಯಿ ಇದ್ದರೆ ಬೈಕ್ ಖರೀದಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಆ.29): ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಕಾರು ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಇದೀಗ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಎಲೆಕ್ಟ್ರಿಕ್ ಬೈಕ್ ಮಾರಾಟ ಉತ್ತೇಜಿಸಲು ರಿವೋಲ್ಟ್ RV 400 ಹೊಸ ಯೋಜನೆ ಜಾರಿ ಮಾಡಿದೆ. ಕೇವಲ 2999 ರೂಪಾಯಿ ಕಂತು ಪಾವತಿಸಿ ಬೈಕ್ ಖರೀದಿಸಬಹುದು.
ಇದನ್ನೂ ಓದಿ: 1 ಸಾವಿರ ರೂ.ಗೆ ಬುಕ್ ಮಾಡಿ EeVe ಎಲೆಕ್ಟ್ರಿಕ್ ಸ್ಕೂಟರ್!
ರಿವೋಲ್ಟ್ RV ಎಲೆಕ್ಟ್ರಿಕ್ ಬೈಕ್‌ನಲ್ಲಿ 3 ವೇರಿಯೆಂಟ್ ಬೈಕ್ ಲಭ್ಯವಿದೆ. ರಿವೋಲ್ಟ್ RV 300, ರಿವೋಲ್ಟ್ RV 400 ಹಾಗೂ ರಿವೋಲ್ಟ್ RV 400 ಪ್ರಿಮಿಯರ್ ಬೈಕ್ ಲಭ್ಯವಿದೆ. ಈ ಬೈಕ್ ಖರೀದಿಸಿ ಬಹಳ ಸುಲಭ. ರಿವೋಲ್ಟ್ RV 300 ಬೈಕ್ ಖರೀದಿಸಲು ಪ್ರತಿ ತಿಂಗಳು 2999 ರೂಪಾಯಿ ಪಾವತಿಸಿದರೆ ಸಾಕು. ಒಟ್ಟು 27 ತಿಂಗಳು ಕಂತು ಪಾವತಿಸಬೇಕು. ಇನ್ನು ರಿವೋಲ್ಟ್ RV 400 ಬೈಕ್ ಖರೀದಿಸಲು ಪ್ರತಿ ತಿಂಗಳು 3499 ರೂಪಾಯಿ(37 ತಿಂಗಳು) ಪಾವತಿಸಬೇಕು. ಇನ್ನು ರಿವೋಲ್ಟ್ RV 400 ಪ್ರಿಮಿಯರ್ ಬೈಕ್ 3,999 ರೂಪಾಯಿ(37 ತಿಂಗಳು).
ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಬೈಕ್ ಅನಾವರಣ; EV ಕಾರಿಗಿಂತ ದುಬಾರಿ!
ರಿವೋಲ್ಟ್ ಬೈಕ್ ಖರೀದಿಸುವ ಗ್ರಾಹಕರು ತಮ್ಮ ಆಧಾರ ಕಾರ್ಡ್ ಹಿಡಿದು ಹತ್ತಿರದ ಶೋ ರೂಂ ತೆರಳಿದರೆ ಸಾಕು. ನಿಮಗಿಷ್ಟವಾದ ವೇರಿಯೆಂಟ್ ಆಯ್ಕೆ ಮಾಡಿ ಮೊದಲ ಕಂತಿನ ಹಣ ಪಾವತಿಸಿದರೆ ಬೈಕ್ ನಿಮ್ಮದಾಗಲಿದೆ. ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 156 ಕಿ.ಮೀ ಮೈಲೇಜ್ ನೀಡಲಿದೆ. ಸಂಪೂರ್ಣ ಚಾರ್ಜ್‌ಗೆ 4 ಗಂಟೆ ಸಮಯ ತೆಗೆದಕೊಳ್ಳಲಿದೆ.
ಇದನ್ನೂ ಓದಿ: ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!
ರಿವೋಲ್ಟ್ ಬೈಕ್ ಬ್ಯಾಟರಿಯನ್ನು ತೆಗೆದು ಕೂಡ ಚಾರ್ಜ್ ಮಾಡಬಹುದು. ಮನೆಯಲ್ಲಿ ಅಥವಾ ಕಚೇರಿ ಒಳಗಡೆ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುವ ಆಯ್ಕೆ ಇದೆ. ಇಷ್ಟೇ ಅಲ್ಲ ರಿಚಾರ್ಜ್ ಮಾಡಿರುವ ಬ್ಯಾಟರಿಯನ್ನು ಆನ್‌ಲೈನ್ ಮೂಲಕವೂ ಆರ್ಡರ್ ಮಾಡಿಕೊಳ್ಳಬಹುದು. ಸದ್ಯ ದೆಹಲಿ ಹಾಗೂ ಪುಣೆಯಲ್ಲಿ ರಿವೋಲ್ಟ್ ಬೈಕ್ ಲಭ್ಯವಿದೆ. ಶೀಘ್ರದಲ್ಲೇ ಬೆಂಗಳೂರು, ಹೈದರಾಬಾದ್, ಅಹಮ್ಮದಾಬಾದ್ ಹಾಗೂ ಚೆನ್ನೈನಲ್ಲಿ ರಿವೋಲ್ಟ್ ಬೈಕ್ ಲಭ್ಯವಾಗಲಿದೆ.