ಮಾರುತಿ ಸುಜುಕಿ ಡೀಸೆಲ್‌ ಕಾರಿಗೆ ಬಂಪರ್ ಆಫರ್!

Published : Aug 29, 2019, 02:52 PM IST
ಮಾರುತಿ ಸುಜುಕಿ ಡೀಸೆಲ್‌ ಕಾರಿಗೆ ಬಂಪರ್ ಆಫರ್!

ಸಾರಾಂಶ

ಕಾರು ಮಾರಾಟವನ್ನು ಉತ್ತೇಜಿಸಲು ಇದೀಗ ಕಂಪನಿಗಳು ಸ್ಪೆಷಲ್ ಆಫರ್, ರಿಯಾಯಿತಿ ನೀಡುತ್ತಿದೆ. ಮಾರುತಿ ಸುಜುಕಿ ಕೂಡ ಇದೀಗ ವಿಶೇಷ ಕೊಡುಗೆ ಘೋಷಿಸಿದೆ. ಮಾರುತಿ ಕಾರು ಖರೀದಿಸುವ ಗ್ರಾಹಕನಿಗೆ ಹಲವು ಆಫರ್ ನೀಡಲಾಗಿದೆ.    

ಮೈಸೂರು(ಆ.29): ಭಾರತದಲ್ಲಿ ಕಾರು ಮಾರಾಟ ಕುಸಿತ ಕಾಣುತ್ತಿದ್ದಂತೆ ಹಲವು ಕಂಪನಿಗಳು ವಿಶೇಷ ಆಫರ್ ಘೋಷಿಸಿದೆ. ಇದೀಗ ಮಾರುತಿ ಸುಜುಕಿ ಕೂಡ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಸದ್ಯ ಮಾರುತಿ ಸುಜುಕಿ ಡೀಸೆಲ್ ಕಾರು ಖರೀದಿಸುವ ಗ್ರಾಹಕನಿಗೆ 5 ವರ್ಷ ವಾರೆಂಟ್ ಆಫರ್ ಮಾರುತಿ ಸುಜುಕಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಘೋಷಿಸಿದೆ.

ಇದನ್ನೂ ಓದಿ: ಆರ್ಥಿಕ ಹಿಂಜರಿತ: ಮಾರುತಿ ಕಂಪೆನಿಯ 3000 ಸಿಬ್ಬಂದಿ ಮನೆಗೆ!

ಮಾರುತಿ ಸುಜುಕಿಯಿಂದ ಕಾರು ಮಾಲೀಕತ್ವದ ಅನುಭವಕ್ಕೆ 5 ವರ್ಷ ಹಾಗೂ 1 ಲಕ್ಷ ಕಿ.ಮೀ. ವಾರೆಂಟಿ ನೀಡುವುದಾಗಿ ಕಂಪನಿ ಹೇಳಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲ, ಈ ಆಫರ್ ಡೀಸೆಲ್‌ ಕಾರುಗಳಾದ ಮಾರುತಿ ಡಿಜೈರ್‌, ಎಸ್‌-ಕ್ರಾಸ್‌, ಸ್ವಿಫ್ಟ್‌ ಮತ್ತು ವಿಟರಾ ಬ್ರೆಜಾ ಕಾರುಗಳಿಗೆ ಮಾತ್ರ ಅನ್ವಯಿಸುತ್ತದೆ. 

ಇದನ್ನೂ ಓದಿ: 40 ಸಾವಿರ ವ್ಯಾಗನ್R ಕಾರು ಹಿಂಪಡೆದ ಮಾರುತಿ!

1,893 ಪಟ್ಟಣಗಳು ಮತ್ತು ನಗರಗಳಲ್ಲಿ ಪ್ರಕಟಿಸಿದೆ. ಈ ಕಾರುಗಳ ಹೊಸ ಕೊಳ್ಳುಗರಿಗೆ ಈ ಸ್ಕೀಂ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತಿದೆ. ಇವುಗಳಲ್ಲಿ ಹೈ-ಪ್ರೆಷರ್‌ ಪಂಪ್‌, ಕಂಪ್ರೆಷರ್‌, ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಮಾಡ್ಯೂಲ್‌(ಇಸಿಎಂ), ಟರ್ಬೊಚಾರ್ಜರ್‌ ಅಸೆಂಬ್ಲಿ, ಕ್ರಿಟಿಕಲ್‌ ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ ಭಾಗಗಳು ಒಳಗೊಂಡಿರುತ್ತವೆ ಎಂದು ಕಂಪನಿ ಹೇಳಿದೆ.

ಸೂಚನೆ: ಹತ್ತಿರದ ಡೀಲರ್‌ಗಳಲ್ಲಿ ಆಫರ್ ಕುರಿತು ವಿಚಾರಿಸಿ. ನಗರದಿಂದ ನಗರಕ್ಕೆ ರಿಯಾಯಿತಿ, ಕೊಡುಗೆ ಬದಲಾಗಲಿದೆ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ