1984ರ ಮಾರುತಿ 800 ಕಾರಿಗೆ ಮರುಜೀವ; ಹಳೇ ಕಾರಿಗೆ ಹೊಸ ಟಚ್!

By Suvarna News  |  First Published Jan 12, 2020, 7:39 PM IST

ಹಳೇ ವಾಹನಗಳಿಗೆ ಹೊಸ ರೂಪ ನೀಡುವುದು ಸಾಮಾನ್ಯ. ಈಗಾಗಲೇ ಹಲವು ಕೆಟ್ಟು ಹೋಗಿದ್ದ ರೆಟ್ರೋ ವಾಹನಗಳು ಮತ್ತೆ ರಸ್ತೆ ಮೇಲೆ ಓಡಾಡಿವೆ. ಇದೀಗ 1984ರ ಮಾರುತಿ 800 ಕಾರನ್ನು ಮತ್ತೆ ರಸ್ತೆಗಿಳಿಸಲು ರೆಡಿಯಾಗಿದ್ದಾರೆ. ಕೆಟ್ಟು ಹೋಗಿದ್ದ ಕಾರಿಗೆ ಅದೇ ರೂಪ ನೀಡಿ, ಹೊಸ ಫೀಚರ್ಸ್ ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ. 


ನವದೆಹಲಿ(ಜ.12): ಭಾರತದಲ್ಲಿ ಮಾರುತಿ 800 ಕಾರಿಗೆ ವಿಶೇಷ ಸ್ಥಾನವಿದೆ. ಕಾರಣ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಕಾರು ಮಾರುತಿ 800. ಹೀಗೆ 1984ರ ಮಾರುತಿ ss800 ಕಾರು ಸಂಪೂರ್ಣ ಕೆಟ್ಟು ಹೋಗಿತ್ತು. ಇದೀಗ ಈ ಕಾರನ್ನು ಸಂಪೂರ್ಣಾಗಿ ಸರಿಪಡಿಸಲಾಗಿದ್ದು, ಹೊಚ್ಚ ಹೊಸ ಕಾರಿನಂತಿದೆ. ಇದೀಗ ಈ ಕಾರನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

Latest Videos

undefined

ಇದನ್ನೂ ಓದಿ: ಪಾಳು ಬಿದ್ದಿದ್ದ ಭಾರತದ ಮೊಟ್ಟ ಮೊದಲ ಮಾರುತಿ ಕಾರಿಗೆ ಮರು ಜೀವ!

ದೆಹಲಿಯ AGM ಟೆಕ್ನಾಲಜಿ ಕಂಪನಿ ಈ ಕಾರನ್ನು ಮತ್ತೆ ರಸ್ತೆಗಿಳಿಸುವ ಸಾಹಸಕ್ಕೆ ಕೈಹಾಕಿತು. ಬಳಿಕ ಕಾರಿನ ಮೂಲ ರೂಪಕ್ಕೆ ಯಾವುದೇ ದಕ್ಕೆ ಬರದ ರೀತಿಯಲ್ಲಿ ನವೀಕರಿಸಲು ಯೋಜನೆ ಸಿದ್ದಪಡಿಸಿದೆ. ಕಾರನ್ನು ಸಂಪೂರ್ಣಾಗಿ ಬಿಚ್ಚಿ ಹೊಸ ರೂಪ ನೀಡಲಾಗಿದೆ.

ಇದನ್ನೂ ಓದಿ: ಐತಿಹಾಸಿಕ ಮಾರುತಿ 800 ಕಾರಿಗೆ 35ನೇ ವರ್ಷದ ಸಂಭ್ರಮ!

1984ರಲ್ಲಿ ಕೆಂಪು ಬಣ್ಣದಲ್ಲಿ ಬಿಡುಗಡೆಯಾಗ ಈ ಕಾರನ್ನೂ ಅದೇ ಬಣ್ಣದಲ್ಲಿ ನವೀಕರಿಸಲಾಗಿದೆ. ನೂತನ ಅಲೋಯ್ ವೀಲ್ಹ್ ಹಾಕಲಾಗಿದ್ದು ಈ ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ. ಎಸಿ, ಇನ್ಸ್‌ಟ್ರುಮೆಂಟ್ ಕನ್ಸೋಲ್, ಮ್ಯೂಸಿಕ್ ಸಿಸ್ಟಮ್, ಟೆಕೋಮೀಟರ್ ಫೀಚರ್ಸ್ ಹೆಚ್ಚುವರಿ ಸೇರಿಸಲಾಗಿದೆ.

ಇದನ್ನೂ ಓದಿ: ಮಾರುತಿ 800 to BMW: ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು!

ಕಾರಿನ ಡ್ಯಾಶ್ಬೋರ್ಡ್, ಒ    ಳವಿನ್ಯಾಸ, ಹೊಸ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೈಜತೆಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ನವೀಕರಣ ಮಾಡಲಾಗಿದೆ.  1984 ಮಾರುತಿ 800 ಕಾರಿನಲ್ಲಿದ್ದ ಎಂಜಿನ್ ಬಳಸಲಾಗಿದೆ.  3-ಸಿಲಿಂಡರ್,  796cc ಎಂಜಿನ್ ಹೊಂದಿದ್ದು, ಸದ್ಯ 45hp ಪವರ್ ಹೊಂದಿದೆ. ಹಳೇ ಎಂಜಿನ್ 35hp ಪವರ್ ಹೊಂದಿತ್ತು. 

1984ರಲ್ಲಿ ಈ ಕಾರಿನ ಬೆಲೆ  52,500 ರೂಪಾಯಿ(ಎಕ್ಸ್ ಶೋ ರೂಂ).  AGM ಟೆಕ್ನಾಲಜಿ ಕಂಪನಿ ಈ ಕಾರಿನ ಬೆಲೆ, ಮಾರಟದ ವಿವರಗಳನ್ನು ಬಹಿರಂಗ ಪಡಿಸಿಲ್ಲ.

click me!