ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಶೋರೂಂ; ದಕ್ಷಿಣ ಭಾರತದಲ್ಲೇ ಮೊದಲು!

Suvarna News   | stockphoto
Published : Jan 12, 2020, 05:40 PM IST
ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಶೋರೂಂ; ದಕ್ಷಿಣ ಭಾರತದಲ್ಲೇ ಮೊದಲು!

ಸಾರಾಂಶ

ಜಗತ್ತಿನ ದುಬಾರಿ ಕಾರುಗಳಲ್ಲಿ ಒಂದಾದ ಲ್ಯಾಂಬೋರ್ಗಿನಿ ಬೆಂಗಳೂರಿನಲ್ಲಿ ಹೊಸ ಶೋರೂಮ್‌ ತೆರೆದಿದೆ. ಲ್ಯಾಂಬೋರ್ಗಿನಿ ಕಾರು ನಮ್ಮ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವುದು ಬೆಂಗಳೂರಿನಲ್ಲಿ. ಹೀಗಾಗಿ  ಬೆಂಗಳೂರಲ್ಲಿ ಶೋರೂಮು ತೆರೆದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಜ.12): ಲ್ಯಾಂಬೋರ್ಗಿನಿ ಕಾರಿಗೂ ಬೆಂಗಳೂರಿಗೂ ಅತ್ಯುತ್ತಮ ನಂಟಿದೆ. ಕಾರಣ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ಲ್ಯಾಂಬೋರ್ಗಿನಿ ಹೆಚ್ಚು ಮಾರಾಟವಾಗುವುದು ಬೆಂಗಳೂರಿನಲ್ಲಿ. ಹೀಗಾಗಿ ಲ್ಯಾಂಬೋರ್ಗಿನಿ ದಕ್ಷಿಣ ಭಾರತದ ಮೊತ್ತ ಮೊದಲ ಲ್ಯಾಂಬೋರ್ಗಿನಿ ಶೋ ರೂಂ ತೆರೆದಿದೆ. ಇದು ನಮ್ಮ ಬೆಂಗಳೂರಿನಲ್ಲಿ ಅನ್ನೋದು ವಿಶೇಷ.

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ದಕ್ಷಿಣ ಭಾರತದ ಮೊದಲ ಲ್ಯಾಂಬೋರ್ಗಿನಿ ಶೋ ರೂಂ ಉದ್ಘಾಟನೆಗೊಂಡಿದೆ. ನಗರದ ಲ್ಯಾವಲ್ಲೇ ರಸ್ತೆಯಲ್ಲಿ ಶೋ ರೂಂ ತೆರೆಯಲಾಗಿದೆ. ಭಾರತದಲ್ಲಿ ಲ್ಯಾಂಬೋರ್ಗಿನಿ ಶೋ ರೂಂ ಸಂಖ್ಯೆ ಕೇವಲ 3. ದೆಹಲಿ, ಮುಂಬೈ ಹಾಗೂ ಇದೀಗ ಬೆಂಗಳೂರಿನಲ್ಲಿ ಮಾತ್ರ ಶೋ ರೂಂ ಹೊಂದಿದೆ.

ಬೆಂಗಳೂರಲ್ಲಿ ಹೊಸ ಶೋ ರೂಂ ಉದ್ಘಾಟನೆಯಾದ ಬಳಿಕ ಲ್ಯಾಂಬೋರ್ಗಿನಿಯ ನೂತನ ಹುರಕಾನ್ ಇವೋ ಕಾರನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಇದರ ಗರಿಷ್ಠ ವೇಗೆ ಗಂಟೆಗೆ 325 ಕಿ.ಮೀ. 100 ಕಿ.ಮೀ ವೇಗ ತಲುಪಲು ಈ ಕಾರು ತೆಗೆದುಕೊಳ್ಳುವ ಸಮಯ ಕೇವಲ 3.1 ಸೆಕೆಂಡ್ ಮಾತ್ರ. 

ಇದನ್ನೂ ಓದಿ: ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!..

ದೂರದಿಂದ ನೋಡಿದರೆ ಈ ಕಾರು ನಮ್ಮ ಮೈಸೂರು, ಹಾಸನ ರಸ್ತೆಗಳಿಗೆ ಕಿಸ್ ಕೊಡುವುದು ಖಂಡಿತಾ ಎಂದು ಅನಿಸದಿರದು. ಆದರೆ ಹಂಪ್ ಬಂದ ತಕ್ಷಣ ಬಟನ್ ಒತ್ತಿದರೆ ಹನುಮಂತನಂತೆ ಎತ್ತರ ಹಿಗ್ಗಿಸಿಕೊಳ್ಳುತ್ತದೆ.  ನೂತನ ಲ್ಯಾಂಬೋರ್ಗಿನಿ ಹುರಕಾನ್ ಇವೋ ಕಾರಿನ ಬೆಲೆ 4.1 ಕೋಟಿ ರೂಪಾಯಿ(ಎಕ್ಸ್  ಶೋ ರೂಂ)

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ