ರೊವ್ವೆಟ್ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಬಿಡುಗಡೆ!

By Web Desk  |  First Published Nov 5, 2019, 9:09 PM IST

ಪುಣೆ ಮೂಲದ ರೊವ್ವೆಟ್ ಎಲೆಕ್ಟ್ರಿಕ್ ಮೊಬಿಲಿಟಿ ಒಟ್ಟು 5 ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ. 4 ಸ್ಕೂಟರ್ ಹಾಗೂ 1 ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಪುಣೆ(ನ.05): ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಮೋಟಾರು ಕಂಪನಿ ಮಾರಾಟ ಆರಂಭಿಸಿದೆ. ಪುಣೆ ಮೂಲದ ರೊವ್ವೆಟ್ ಮೊಬಿಲಿಟಿ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಬಿಡುಗಡೆ ಮಾಡಿದೆ. ಯುವಕರನ್ನು ಗಮನದಲ್ಲಿಟ್ಟು ರೊವ್ವೆಟ್ ಎಲೆಕ್ಟ್ರಿಕ್ ಬೈಕ್ ವಿನ್ಯಾಸಗೊಳಿಸಿದೆ. ಒಟ್ಟು 4 ಎಲೆಕ್ಟ್ರಿಕ್ ಸ್ಕೂಟರ್ ಹಾಗೂ 1 ಮೋಟಾರ್ ಬೈಕ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಇಂಡಿಯನ್ ಚಾಲೆಂಜರ್ ಬೈಕ್ ಅನಾವರಣ; ಬೆಲೆ 16 ಲಕ್ಷ ರೂ!

Tap to resize

Latest Videos

ನೂತನ ಸ್ಕೂಟರ್ ಬೆಲೆ 51,000 ರೂಪಾಯಿಂದ ಆರಂಭವಾಗಲಿದ್ದು, ಗರಿಷ್ಠ 1.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ವಿಶೇಷ ಅಂದರೆ ರೊವ್ವೆಟ್ ಮೋಬಿಲಿಟಿ ಸ್ಕೂಟರ್ ಹಾಗೂ ಬೈಕ್‌ನಲ್ಲಿ 3 ರೀತಿಯ ಬ್ಯಾಟರಿ ಆಯ್ಕೆಗಳು ಲಭ್ಯವಿದೆ. ಲೀಥಿಯಂ, ಲೀಡ್ ಆ್ಯಸಿಡ್ ಹಾಗೂ ಕ್ಲಿಕ್ ಬ್ಯಾಟರಿ ಮಾದರಿ ಲಭ್ಯವಿದೆ.

ಇದನ್ನೂ ಓದಿ: ಸುಜುಕಿ-ಟೊಯೊಟಾ ಬಿಡುಗಡೆ ಮಾಡುತ್ತಿದೆ ನೂತನ ಎಲೆಕ್ಟ್ರಿಕ್ ಕಾರು!

ಲೀಥಿಯಂ ಬ್ಯಾಟರಿ ಚಾಲಿತ ವಾಹನಗಳು ದುಬಾರಿಯಾಗಿವೆ. ಇನ್ನು ಅತೀ ವೇಗದಲ್ಲಿ ಚಾರ್ಜಿಂಗ್ ಬೇಕಾದಲ್ಲಿ ಗ್ರಾಹಕರು ಕ್ಲಿಕ್ ಬ್ಯಾಟರಿ ಆಯ್ಕೆ ಖರೀದಿಸಬಹುದು. ಕೇವಲ 12 ನಿಮಿಷದಲ್ಲಿ ಕ್ಲಿಕ್ ಮಾದರಿ ವಾಹನ ಚಾರ್ಜ್ ಆಗಲಿದೆ. ಝೆಪಾಪ್, ರೇಮ್, ಎಲೆಕ್ ಹಾಗೂ ವೆಗಾರ್ಟನ್ ಎಂಬ 4 ವೇರಿಯೆಂಟ್ ಸ್ಕೂಟರ್ ಲಭ್ಯವಿದೆ.

ಇದನ್ನೂ ಓದಿ: ಮೊದಲ ನೋಟದಲ್ಲೇ ಮನಸು ಕದ್ದ ಸುಂದರಿ, ಬಜಾಜ್ ಚಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಂತು ನೋಡ್ರಿ

ಇನ್ನು ಬೈಕ್‍‌ನಲ್ಲಿ ಟ್ರೊನೋ ವೇರಿಯೆಂಟ್ ಮಾತ್ರ ಲಭ್ಯವಿದೆ. ಈ ಎಲೆಕ್ಟ್ರಿಕ್ ಬೈಕ್ ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ. ಸದ್ಯ ರೊವ್ವೆಟ್ ಬೈಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಪುಣೆಯಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಮುಂಬೈಗೆ ವಿಸ್ತರಿಸಲಿರುವ ರೊವ್ವೆಟ್, ಬೆಂಗಳೂರಿನಲ್ಲೂ ಬಿಡುಗಡೆ ಮಾಡಲಿದೆ.
 

click me!