ಕಾರಿನಲ್ಲಿ ಮದ್ಯಪಾನ ಮಾಡಿ ಪೊಲೀಸರೊಂದಿಗೆ ಜಗಳ; ಮೂವರು ಯುವಕರು ಅರೆಸ್ಟ್!

By Web DeskFirst Published Nov 3, 2019, 9:19 PM IST
Highlights

ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಮದ್ಯ ಪಾನ ಮಾಡಿದ ಮೂವರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ವಿರುದ್ದ 151ರ ಕಲಂ ಆಡಿಯಲ್ಲಿ ಪ್ರಕರಣ ದಾಖಲಾಗಿದೆ. 

ನೋಯ್ಡಾ(ನ.03): ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ನಿಷೇಧ.  ಅದರಲ್ಲೂ ರಸ್ತೆ ಬದಿಗಳಲ್ಲಿ ಕಾರು ನಿಲ್ಲಿಸಿ ಮದ್ಯ ಸೇವಿಸಿದರೆ ಪ್ರಕರಣ ದಾಖಲಾಗುತ್ತೆ. ಇದೀಗ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿದ್ದಲ್ಲದೇ, ಪೊಲೀಸರೊಂದಿಗೆ ಜಗಳವಾಡಿದ ಮೂವರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪೀಕ್ ಟೈಮ್‌ನಲ್ಲಿ ಬೆಲೆ ಹೆಚ್ಚಳವಿಲ್ಲ; ಪ್ರಯಾಣಿಕರಿಗೆ ಒಲಾ ಕೊಡುಗೆ!

ಗ್ರೇಟರ್ ನೋಯ್ಡಾದ ನಾಲೇಜ್ ಪಾರ್ಕ್ ಬಳಿ ರಸ್ತೆಯಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ನಿಲ್ಲಿಸಿದ ಮೂವರು ಯುವಕರು ಮದ್ಯಪಾನಕ್ಕೆ ಮುಂದಾಗಿದ್ದಾರೆ. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಸಿದ ಪೊಲೀಸರು, ತಕ್ಷಣವೇ ಕಾರು ತೆಗೆಯಲು ಸೂಚಿಸಿದ್ದಾರೆ. ಆದರೆ ಕುಡಿದ ಮತ್ತಿನಲ್ಲಿದ್ದ ಯುವಕರು ಪೊಲೀಸರ ಕೊರಳ ಪಟ್ಟಿ ಹಿಡಿದು ಜಗಳಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್‌ ರೈಡ್‌!

ಇಬ್ಬರು ಕಾನ್ಸ್‌ಸ್ಟೇಬಲ್ ವಿರುದ್ದ ಜಗಳ ನಿಂತ ಮೂವರನ್ನು ನಾಲೇಜ್ ಪಾರ್ಕ್ ಪೊಲೀಸ್ ಠಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಪಂಕಜ್(22), ಅಮಿತ್ (23) ಹಾಗೂ ಅಭಯ್(22)ರಿಂದ ಎರಡು ಮದ್ಯದ ಬಾಟಲಿ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ 151 ಕಲಂ ಪ್ರಕಾರ ಪ್ರಕರಣ ದಾಖಲಾಗಿದೆ.
 

click me!