ಮಾರುತಿ ಜಿಪ್ಸಿಗೆ ರೋಲ್ಸ್ ರಾಯ್ಸ್ ಲುಕ್; ಹೊಸ ನಿಯಮದಿಂದ ಕಾರು ಮಾರಾಟಕ್ಕೆ!

By Web Desk  |  First Published Nov 5, 2019, 7:56 PM IST

ಯಾವ ಬದಿಯಿಂದ ನೋಡಿದರೂ ಇದು ರೋಲ್ಸ್ ರಾಯ್ಸ್ ಕಾರು ಅಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆ ಮಟ್ಟಿಗೆ ಈ ಕಾರನ್ನು ಮಾಡಿಫಿಕೇಶನ್ ಮಾಡಲಾಗಿದೆ. ಮಾರುತಿ ಜಿಪ್ಸಿ ಕಾರನ್ನು ಈ ಪಾಟಿ ಮಾಡಿಫಿಕೇಶನ್ ಮಾಡಿ ಇದೀಗ ಹೊಸ ಟ್ರಾಫಿಕ್ ನಿಯಮದಿಂದ ಮಾರಾಟಕ್ಕಿಡಲಾಗಿದೆ.


ಕೇರಳ(ನ.05): ಕಾರು ಮಾಡಿಫಿಕೇಶನ್‌ನಲ್ಲಿ ಕೇರಳ ಡಿಸೈನರ್‌ಗಳನ್ನು ಮೀರಿಸುವವರು ಭಾರತದಲ್ಲಿಲ್ಲ. ಗರಿಷ್ಠ ಮಾಡಿಫೇಕಶನ್ ನಡೆಯುತ್ತಿರುವುದು ಕೇರಳದಲ್ಲೇ. ಹಳೇ ಕಾರನ್ನು ಗುರುತೇ ಸಿಗದಂತೆ ಹೊಸದಾಗಿ, ಅಥವಾ ಯಾರಿಗೂ ಬೇಡವಾದ ಕಾರಿಗೆ  ಆಕರ್ಷಕ ಲುಕ್ ನೀಡುವುದರಲ್ಲಿ ಕೇರಳಿಗರು ಎತ್ತಿದ ಕೈ. ಆದರೆ ಹೊಸ ಟ್ರಾಫಿಕ್ ನಿಯಮದಿಂದ ಕೇರಳದಲ್ಲೀಗ ಮಾಡಿಫಿಕೇಶನ್‌ಗೆ ಫುಲ್ ಸ್ಟಾಪ್ ಬಿದ್ದಿದೆ. ಇಷ್ಟೇ ಅಲ್ಲ ಈಗಾಗಲೇ ಮಾಡಿಫಿಕೇಶ್ ಮಾಡಿದ ಕಾರುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.

ಇದನ್ನೂ ಓದಿ: 10 ಕೋಟಿ ರೂ ಬೆಂಟ್ಲಿ ಮಸ್ಲೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

Tap to resize

Latest Videos

undefined

ಹೀಗೆ ಹಳೇ ಮಾರುತಿ ಜಿಪ್ಸಿ ಕಾರನ್ನು ದುಬಾರಿ ಹಾಗೂ ಐಷಾರಾಮಿ ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತಿಸಲಾಗಿತ್ತು. ಆದರೆ ಮಾಡಿಫಿಕೇಶನ್ ನಿಯಮದಿಂದ ಇದೀಗ ಈ ಕಾರು ಮಾರಾಟಕ್ಕಿಡಲಾಗಿದೆ. ಆದರೆ ಜಿಪ್ಸಿ ಕಾರಿಗೆ ರೆಟ್ರೋ ಲುಕ್ ನೀಡಿದ ಡೈಸೈನರ್ ಕಾರ್ಯವನ್ನು ಮೆಚ್ಚಲೇ ಬೇಕು. 

ಇದನ್ನೂ ಓದಿ: 480 ಕಿ.ಮೀ ಮೈಲೇಜ್; ಬರುತ್ತಿದೆ ಫಿಸ್ಕರ್ ಒಶಿಯನ್ SUV ಕಾರು

ಮಾರುತಿ ಸುಜುಕಿ ಜಿಪ್ಸಿ ಕಾರು ನಿರ್ಮಾಣ ಸ್ಥಗಿತಗೊಂಡಿದೆ. ಸದ್ಯ ಹಳೇ ಕಾರುಗಳು ಮಾತ್ರ ರಸ್ತೆಯಲ್ಲಿ ಕಾಣಸಿಗುತ್ತವೆ. ಇದೇ ಕಾರನ್ನು ಖರೀದಿಸಿದ ಕೇರಳಿಗ, ರೋಲ್ಸ್ ರಾಯ್ಸ್ ರೆಟ್ರೋ ಕಾರಿನ ಲುಕ್ ನೀಡಿದ್ದಾನೆ. ಈ ಕಾರನ್ನು ಮದುವೆ ಸಮಾರಂಭಗಳಿಗೆ ಬಳಸುತ್ತಿದ್ದ. ಆದರೆ ಕಟ್ಟು ನಿಟ್ಟಿನ ನಿಯಮದಿಂದ ಇದೀಗ ಈ ಕಾರನ್ನು ಮಾರಾಟಕ್ಕಿಟ್ಟಿದ್ದಾನೆ.

ಕಾರನ್ನೂ ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಜಿಪ್ಸಿ ಕಾರು ಅನ್ನೋದಕ್ಕೆ ಯಾವ ಪುರಾವೆಯೂ ಕಾಣಸಿಗುವುದಿಲ್ಲ. ಇಷ್ಟೇ ಅಲ್ಲ ರೋಲ್ಸ್ ರಾಯ್ಸ್ ಕಂಪನಿಯೇ ನಾಚುವಂತೆ ಮಾಡಿಫಿಕೇಶನ್ ಮಾಡಲಾಗಿದೆ. 2002ರಲ್ಲಿ ಪಂಜಾಬ್‌ನಲ್ಲಿ ನೋಂದಾವಣಿಯಾಗಿರುವು ಈ ಕಾರಿಗೆ ಸದ್ಯ 17 ವರ್ಷ ವಯಸ್ಸು. ಉತ್ತಮ ಕಂಡೀಷನ್‌ನಲ್ಲಿರುವ ಈ ಕಾರು ಇದೀಗ ಎಲ್ಲರ ಗಮನಸೆಳೆಯುತ್ತಿದೆ.

ಮಾರುತಿ ಸುಜುಕಿ ಜಿಪ್ಸಿ ಕಾರಿನ ಸಾಂದರ್ಭಿಕ ಚಿತ್ರ
 

click me!