ರಸ್ತೆ ನಿಯಮ ಉಲ್ಲಂಘನೆ: ಸಣ್ಣ ತಪ್ಪಿಗೂ ಇಲ್ಲ ಕ್ಷಮೆ!

By Web DeskFirst Published Jul 7, 2019, 3:36 PM IST
Highlights

ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, 5 ನಿಮಿಷದ ಕೆಲಸ ಇದಕ್ಕಾಗಿ 100 ರೂ, 200 ರೂಪಾಯಿ ಪಾರ್ಕಿಂಗ್‌ಗೆ ಕೊಡುವ ಬದಲು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದರೆ ಸಾಕು ಅನ್ನೋ ಲೆಕ್ಕಾಚಾರ ನಿಮ್ಮದಾಗಿದ್ದರೆ ತಕ್ಷಣ ಬದಲಾಯಿಸಿ. ಇನ್ಮುಂದೆ ನೋ ಪಾರ್ಕಿಂಗ್  ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ ಕೊನೆಗೆ ವಾಹನ ಮಾರಾಟ ಮಾಡಿ ದಂಡ ಕಟ್ಟಬೇಕಾಗಬಹುದು.

ಮುಂಬೈ(ಜು.07): ಭಾರತದಲ್ಲಿ ಹೆಚ್ಚುತ್ತಿರುವ ವಾಹನಗಳಿಂದಾಗಿ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಕೂಡ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ರಸ್ತೆ ನಿಯಮ ಉಲ್ಲಂಘನೆ ಕೂಡ ಹೆಚ್ಚಾಗುತ್ತಿದೆ. ಇದೀಗ ಎಲ್ಲೆಡೆ ಪಾರ್ಕಿ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡುವವರಿಗೆ ಪಾಠ ಕಲಿಸಲು ವಾಣಿಜ್ಯ ನಗರಿ ಟ್ರಾಫಿಕ್ ಪೊಲೀಸರು ಮುಂದಾಗಿದೆ. 

ಇದನ್ನೂ ಓದಿ: ರೈಡಿಂಗ್‌ನಲ್ಲಿ ಮ್ಯೂಸಿಕ್ ಕೇಳಿದರೆ ಕಟ್ಟಲೇ ಬೇಕು ದಂಡ!

ಮುಂಬೈ ನಗರದಲ್ಲಿ ನೋ ಪಾರ್ಕಿಂಗ್ ದಂಡ ಹೆಚ್ಚಿಸಲಾಗಿದೆ. ಮುಂಬೈ ಮಹಾನಗರ ಪಾಲಿಕೆ ಹಾಗೂ ಟ್ರಾಫಿಕ್ ಪೊಲೀಸ್ ವಿಭಾಗ ಹೊಸ ನಿಯಮ ಜಾರಿಗೆ ತಂದಿದೆ. ನೋ ಪಾರ್ಕಿಂಗ್ ಮಾಡೋ ವಾಹನ ಮಾಲೀಕರಿಗೆ ಗರಿಷ್ಠ 23,000 ರೂಪಾಯಿ ದಂಡ ಹಾಕಲು ನಿಯಮ ರೂಪಿಸಲಾಗಿದೆ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ : ಬೀಳುತ್ತೆ ಭಾರಿ ದಂಡ

ಭಾರಿ ವಾಹನಗಳ ನೋ ಪಾರ್ಕಿಂಗ್ ದಂಡ 23,000 ರೂಪಾಯಿ. ಇನ್ನು ಲಘು ವಾಹನಗಳಿಗೆ   15,100 ರೂಪಾಯಿ,  ಆಟೋ ರಿಕ್ಷಾ ಸೇರಿದಂತೆ ಮೂರು ಚಕ್ರದ ವಾಹನಗಳಿಗೆ 12,200  ರೂಪಾಯಿ ದಂಡ ಹಾಗೂ ಬೈಕ್, ಸ್ಕೂಟರ್‌ಗಳಿಗೆ  8,300 ರೂಪಾಯಿ ದಂಡ ಏರಿಕೆ ಮಾಡಲಾಗಿದೆ. ಹೀಗಾಗಿ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದರೆ ಕೊನೆಗೆ ದಂಡ ಕಟ್ಟಲು ವಾಹನ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಬಹುದು. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. 

click me!