ಮಹೀಂದ್ರ ಬೊಲೆರೊ ಹೊಸ ಫೀಚರ್ಸ್ ಅಪ್‌ಗ್ರೇಡ್‍ನೊಂದಿಗೆ ಬಿಡುಗಡೆಯಾಗಿದೆ. ನೂತನ ಬೊಲೆರೊ ವಿಶೇಷತೆ ಏನು? ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಜು.06): ಮಹೀಂದ್ರ ಬೊಲೆರೊ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಮಹೀಂದ್ರ ಬೊಲೆರೊ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಳವಡಿಸಲಾಗಿದೆ. ಜೊತೆಗೆ ಕೆಲ ಫೀಚರ್ಸ್ ಅಪ್‌ಗ್ರೇಡ್‌ನೊಂದಿಗೆ ಬೊಲೆರೊ ಬಿಡುಗಡೆಯಾಗಿದೆ. ಹೀಗಾಗಿ ಬೊಲೆರೊ ಬೆಲೆಯಲ್ಲೂ ಬದಲಾವಣೆಯಾಗಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್; ಹೇಗಿದೆ 7 ಕೋಟಿ ರೂಪಾಯಿ ವಾಹನ?
undefined
ನೂತನ ನಿಯಮದ ಪ್ರಕಾರ ಭಾರತದಲ್ಲಿ ಕನಿಷ್ಠ ಸುರಕ್ಷತೆ ಇಲ್ಲದೆ ವಾಹನಗಳನ್ನು ಮಾರಾಟ ಮಾಡುವಂತಿಲ್ಲ. ABS,ಡ್ಯುಯೆಲ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಸುರಕ್ಷಾ ಫೀಚರ್ಸ್ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಬೊಲೆರೊ ಈ ಎಲ್ಲಾ ಫೀಚರ್ಸ್ ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಟೊಯೊಟಾ ಫಾರ್ಚುನರ್ ಪ್ರತಿಸ್ಪರ್ಧಿ, ಬರುತ್ತಿದೆ ಜೀಪ್ ಕಂಪಾಸ್ 7 ಸೀಟರ್!
7 ಸೀಟರ್ ಬೊಲೆರೊ ಸ್ಥಗಿತಗೊಳಿಸಿ, 9 ಸೀಟಿನ ಬೊಲೆರೊ ಬಿಡುಗಡೆ ಮಾಡಲಾಗಿದೆ. SLE, SLX ಹಾಗೂ ZLX ಮೂರು ವೇರಿಯೆಂಟ್‌ಗಳಲ್ಲಿ ಬೊಲೆರೊ ಲಭ್ಯವಿದೆ. ಬೊಲೆರೊ SLE ಬೆಲೆ 7.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬೊಲೆರೊ SLX ಬೆಲೆ 8.33(ಎಕ್ಸ್ ಶೋ ರೂಂ) ಹಾಗೂ ಬೊಲೆರೊ ZLX ಬೆಲೆ 8.68(ಎಕ್ಸ್ ಶೋ ರೂಂ).