ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!

Published : Jul 07, 2019, 09:29 AM IST
ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!

ಸಾರಾಂಶ

ನೋ ಪಾರ್ಕಿಂಗ್, ವಾಹನ ಪಾರ್ಕ್ ಮಾಡಿದ್ರೆ ಭರ್ಜರಿ 23000 ರು. ದಂಡ|  ನಿರ್ದಿಷ್ಟ ಸ್ಥಳದ ಹೊರಗೆ ವಾಹನ ನಿಲ್ಲಿಸಿದರೆ ಭಾರೀ ದಂಡ

 

ಮುಂಬೈ[ಜು.07]: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಭರ್ಜರಿ ದಂಡ ವಿಧಿಸಲು ಮುಂಬೈ ಮಹಾನಗರ ಪಾಲಿಕೆ ಮತ್ತು ಪೊಲೀಸರು ನಿರ್ಧರಿಸಿದ್ದಾರೆ. ಈ ದಂಡದ ಪ್ರಮಾಣ 5000 ರು.ನಿಂದ 23000 ರು.ವರೆಗೂ ಇರಲಿದೆ. ಮುಂದಿನ ಭಾನುವಾರದಿಂದ ಹೊಸ ಕಾನೂನು ಜಾರಿಗೆ ಬರಲಿದೆ.

ಮುಂಬೈ ನಗರದಾದ್ಯಂತ 26 ಅಧಿಕೃತ ವಾಹನ ಪಾರ್ಕಿಂಗ್‌ ಮತ್ತು ಸಾರಿಗೆ ಇಲಾಖೆಗೆ ಸೇರಿದ 20 ಪಾರ್ಕಿಂಗ್‌ ಸ್ಥಳಗಳಿವೆ. ಈ ಸ್ಥಳಗಳನ್ನು ಬಿಟ್ಟು, ಇವುಗಳಿಂದ 500 ಮೀಟರ್‌ ಸುತ್ತಳತೆಯ ಪ್ರದೇಶದಲ್ಲಿ ವಾಹನಗಳನ್ನು ಅಕ್ರಮವಾಗಿ ನಿಲ್ಲಿಸಿದರೆ ಅಲ್ಲಿ, ಭಾರೀ ದಂಡ ವಿಧಿಸಲಾಗುವುದು.ಅದರಂತೆ ಬೈಕ್‌ಗಳಿಗೆ .5000 ರಿಂದ 8,300, ಹಗುರ ವಾಹನಗಳಿಗೆ .10 ಸಾವಿರದಿಂದ .15100, ಮೂರು ಚಕ್ರದ ವಾಹನಕ್ಕೆ .8 ಸಾವಿರದಿಂದ . 12,200, ಮಧ್ಯಮ ವಾಹನಗಳಿಗೆ .11 ಸಾವಿರದಿಂದ .17,600, ಇತರೆ ಭಾರೀ ವಾಹನಗಳಿಗೆ .15ಸಾವಿರದಿಂದ 23,250ರವರೆಗೆ ದಂಡ ಮತ್ತು ಎಳೆದೊಯ್ಯುವ ಶುಲ್ಕ ವಿಧಿಸಲಾಗುವುದು.

ಮುಂಬೈನಲ್ಲಿ ಎಲ್ಲ ಬಗೆಯ ಒಟ್ಟು 30 ಲಕ್ಷ ವಾಹನಗಳಿವೆ ಎಂದು ಅಂದಾಜಿಸಲಾಗಿದ್ದು, ಟ್ರಾಫಿಕ್‌ ಪೊಲೀಸರಿಗೆ ಈ ಕಾರ್ಯಚರಣೆಗೆ ನೆರವು ಒದಗಿಸಲು ಪಾಲಿಕೆ ನಿವೃತ್ತ ಸಿಬ್ಬಂದಿ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಬಳಕೆಗೆ ಪೊಲೀಸರು ಮುಂದಾಗಿದ್ದಾರೆ.

PREV
click me!

Recommended Stories

ಹೊಸ ‘ಪಂಚ್‌’ ಕೊಟ್ಟ ಟಾಟಾ ‘ಕಮಾಂಡ್ ಮ್ಯಾಕ್ಸ್’!
ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್