ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗಲಿದೆ. ನಿಯಮ ತಿಳುದ ಕೊಳ್ಳದೇ ಹಳೇ ನಿಯಮ ಪಾಲಿಸಿ ದಂಡ ಪಾವತಿಸಬೇಕಾಗಬಹುದು. ಹೀಗಾಗಿ ಈ ವರ್ಷ ಜಾರಿಯಾಗಲಿರುವ ಹೊಸ ನಿಯಮ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ನವದೆಹಲಿ(ಜ.02): ಭಾರತದ ಆಟೋಮೊಬೈಲ್ ಕ್ಷೇತ್ರ ತ್ವರಿತಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಇದಕ್ಕೆ ತಕ್ಕಂತೆ ನಿಯಮಗಳು ಕೂಡ ಬದಲಾಗುತ್ತಿದೆ. ಇದೀಗ ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಈ ವರ್ಷ ಹಲವು ನಿಯಮಗಳು ಬದಲಾಗುತ್ತಿದೆ. ಕೆಲ ನಿಯಮಗಳು ಆಟೋ ಕಂಪೆನಿಗಳಿಗೆ ಅನ್ವಯವಾದರೆ, ಇನ್ನೂ ಕೆಲವೂ ವಾಹನ ಖರೀಜದಿಸುವ, ಚಲಾಯಿಸುವವರಿಗೆ ಅನ್ವಯವಾಗಲಿದೆ. ಹೀಗೆ ಈ ವರ್ಷ ಜಾರಿಯಾಗಲಿರುವ ನೂತನ ನಿಯಮಗಳು ಇಲ್ಲಿದೆ.
ಇದನ್ನೂ ಓದಿ: ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?
ಕಾರಿನ ಎಲ್ಲಾ ಪ್ರಯಾಣಿಕರಿಗೂ ಸೀಟ್ ಬೆಲ್ಟ್!
ಹಳೇ ನಿಯಮದ ಪ್ರಕಾರ ಕಾರು, ಅಥವಾ ಜೀಪ್ ವಾಹನ ಚಾಲಕ ಸೀಟ್ ಬೆಲ್ಟ್ ಖಡ್ಡಾಯವಾಗಿ ಧರಿಸಬೇಕಿತ್ತು. ಆದರೆ ನೂತನ ನಿಯಮದ ಪ್ರಕಾರ ಕಾರಿನ ಹಿಂಬದಿ ಸವಾರರು ಸೇರಿದಂತೆ ಎಲ್ಲರೂ ಕೂಡ ಸೀಟ್ ಬೆಲ್ಟ್ ಖಡ್ಡಾಯವಾಗಿ ಹಾಕಬೇಕು. ಶೀಘ್ರದಲ್ಲೇ ಈ ನಿಯಮ ಭಾರತದಾದ್ಯಂತ ಜಾರಿಯಾಗಲಿದೆ.
ಹೈ ಸೆಕ್ಯುರಿಟಿ ನಂಬರ್ ಪ್ಲೇಟ್
2019ರ ಎಪ್ರಿಲ್ 1 ರಿಂದ ಎಲ್ಲಾ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP)ಕಡ್ಡಾಯ ಮಾಡಲಾಗಿದೆ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ನಲ್ಲಿ ಕ್ರೋಮಿಯಮ್ ಹಾಲೋಗ್ರಾಮ್ ಸ್ಟಾಂಪ್ ಅಳವಡಿಸಲಾಗುತ್ತೆ. ಲೇಸರ್ ರೀಡರ್ ಮೂಲಕ ವಾಹನ ರಿಜಿಸ್ಟ್ರೇಶನ್, ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮೂಲಕ ತಿಳಿಯಲು ಸಾಧ್ಯವಿದೆ.
ಇದನ್ನೂ ಓದಿ: ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ!
ISI ರಹಿತ ಹೆಲ್ಮೆಟ್ ನಿಷೇಧ
ಬೈಕ್ ಹಾಗೂ ಸ್ಕೂಟರ್ ಸವಾರರ ಸುರಕ್ಷತೆ ದೃಷ್ಟಿಯಿಂದ ISI ಸರ್ಟಿಫೈಡ್ ಹೆಲ್ಮೆಟ್ ಮಾತ್ರ ಬಳಸಬೇಕು. ಜನವರಿ 15 ರಿಂದ ISI ರಹಿತ ಹೆಲ್ಮೆಟ್ ಮಾರಾಟ ಮಾಡುವುದನ್ನ ಕೇಂದ್ರ ಸಾರಿಗೆ ಇಲಾಖೆ ನಿಷೇಧಿಸಿದೆ. ಒಂದು ವೇಳೆ ISI ರಹಿತ ಹೆಲ್ಮೆಟ್ ಮಾರಾಟ ಮಾಡಿದರೆ 2 ವರ್ಷ ಜೈಲು ಅಥಲಾ 2 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತೆ.
ಇದನ್ನೂ ಓದಿ: ಜ.15 ರಿಂದ ISI ರಹಿತ ಹೆಲ್ಮೆಟ್ ಮಾರಾಟ ನಿಷೇಧ-ತಪ್ಪಿದರೆ 2 ವರ್ಷ ಜೈಲು!
ಲೊಕೇಶನ್ ಟ್ರ್ಯಾಕ್-ಪ್ಯಾನಿಕ್ ಬಟನ್
ಸಾರ್ವಜನಿಕ ವಾಹನಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾರ್ವಜನಿಕ ವಾಹನ ಬಳಕೆ ಮಾಡುವವರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಣ ವರದಿಯಾಗುತ್ತಿದೆ. ಇದಕ್ಕಾಗಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಹೊಸ ನಿಯಮ ಜಾರಿಯಾಗುತ್ತಿದೆ. ಟ್ಯಾಕ್ಸಿ, ಕ್ಯಾಬ್ ವಾಹನಗಳು ಲೊಕೇಶನ್ ಟ್ರ್ಯಾಕ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲೇಬೇಕು. ಇದರಿಂದ ಕಾರು ಎತ್ತ ಚಲಿಸುತ್ತಿದೆ, ವಾಹನ ಚಾಲಕ, ಮಾಲೀಕರ ಮಾಹಿತಿ ಲಭ್ಯವಾಗಲಿದೆ. ಇಷ್ಟೇ ಅಲ್ಲ ಪ್ಯಾನಿಕ್ ಬಟನ್ ಒತ್ತಿದ ತಕ್ಷಣ ಪ್ರಯಾಣಿಕ ಸಮಸ್ಯೆಯಲ್ಲಿರುವುದ ಪೊಲೀಸರಿಗೆ ಮಾಹಿತಿ ರವಾನೆಯಾಗಲಿದೆ.
ಇದನ್ನೂ ಓದಿ: ನಿಮ್ಮಲ್ಲಿ ಕಾರು ಅಥವಾ ಬೈಕ್ ಇದೆಯಾ? ನಿರ್ಲಕ್ಷ್ಯಿಸಿದರೆ ಜೈಲೇ ಗತಿ!
ಆಟೋ ರಿಕ್ಷಾಗೆ ಹೊಸ ನಿಯಮ
ಆಟೋ ರಿಕ್ಷಾ ಅಪಘಾತದಲ್ಲಿ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆಟೋ ರಿಕ್ಷಾಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಆಟೋ ಚಾಲಕನಿಗೆ ಸೀಟ್ ಬೆಲ್ಟ್, ಡೋರ್(ಬಾಗಿಲು), ಎರಡು ಹೆಡ್ ಲೈಟ್‌ಗಳು ಇರಲೇಬೇಕು
ಇದನ್ನೂ ಓದಿ: 2019 ರಿಂದ ಆಟೋ ರಿಕ್ಷಾಗೆ ಹೊಸ ನೀತಿ- ಸಂಕಷ್ಟದಲ್ಲಿ ಮಾಲೀಕರು!
ABS ಖಡ್ಡಾಯ!
125ಸಿಸಿ ಎಂಜಿನ್ ಹಾಗೂ ಇದಕ್ಕಿಂತ ಹೆಚ್ಚಿನ ಸಿಸಿ ಎಂಜಿನ್ ಹೊಂದಿರುವ ಬೈಕ್, ಸ್ಕೂಟರ್‌ಗಳು ABS(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಅಳವಡಿಸಿರಬೇಕು. ಈ ಮೂಲಕ ಹೆಚ್ಚಿನ ಸುರಕ್ಷತೆಗೆ ಆದ್ಯತೆ ನೀಡಲೇಬೇಕು.
ಇಜರ ಜೊತೆಗೆ ಡೀಸೆಲ್, ಪೆಟ್ರೋಲ್, ಹೈಬ್ರಿಡ್, ಎಲೆಕ್ಟ್ರಿಕ್ ಕಾರುಗಳನ್ನ ತಕ್ಷಣಕ್ಕೆ ಗುರುತಿಸಲು ಕಲರ್ ಕೋಡಿಂಗ್ ನಿಯಮ ಕೂಡ ಜಾರಿಗೆ ಬರಲಿದೆ. ಇನ್ನು ಏಕರೂಪದ ಡ್ರೈವಿಂಗ್ ಲೈಸೆನ್ಸ್ ಕೂಡ ಜಾರಿಯಾಗಲಿದೆ.