ಹ್ಯುಂಡೈ ಶೀಘ್ರದಲ್ಲೇ 6 ಕಾರು ಬಿಡುಗಡೆ- ನಿರೀಕ್ಷೆ ಹುಟ್ಟುಹಾಕಿದ ಐ10

By Web Desk  |  First Published Jan 2, 2019, 11:16 AM IST

ಹ್ಯುಂಡೈ ಸಂಸ್ಥೆ ಈ ವರ್ಷ 6 ಕಾರುಗಳನ್ನ ಬಿಡುಗಡೆ ಮಾಡಲಿದೆ. ಇದರಲ್ಲಿ ಹ್ಯುಂಡೈ ಐ10 ಕಾರು ಜನರ ನಿರೀಕ್ಷೆ ಡಬಲ್ ಮಾಡಿದೆ. ಕಡಿಮೆ ಬೆಲೆ, ಹೊಸ ವಿನ್ಯಾಸದೊಂದಿಗೆ ಹ್ಯುಂಡೈ 6 ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. ನೂತನ ಕಾರುಗಳ ವಿವರ ಇಲ್ಲಿದೆ.


ಬೆಂಗಳೂರು(ಜ.02): ಹೊಸ ವರ್ಷದಲ್ಲಿ ಹ್ಯುಂಡೈ ಹೊಸ ನಿರೀಕ್ಷೆಗಳೊಂದಿಗೆ ಆರಂಭಿಸಿದೆ. ಕಳೆದ ವರ್ಷ(2018) ಮಾರುತಿ ಸುಜುಕಿ ಸಂಸ್ಥೆಗೆ ಭಾರಿ ಪೈಪೋಟಿ ನೀಡಿದ ಹ್ಯುಂಡೈ ಇದೀಗ 2019ರಲ್ಲಿ ಅಗ್ರಸ್ಥಾನ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. ಪ್ರಸಕ್ತ ವರ್ಷದಲ್ಲಿ ಹ್ಯುಂಡೈ 6 ಕಾರುಗಳನ್ನ ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ಹ್ಯುಂಡೈ ಐ10 ಕಾರು ನಿರೀಕ್ಷೆ ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

Latest Videos

undefined

ಹ್ಯುಂಡೈ ಐ10 ಫೇಸ್‌ಲಿಫ್ಟ್


ಹ್ಯುಂಡೈ ಐ10 ಫೇಸ್‌ಲಿಫ್ಟ್ ಕಾರು ಈಗಾಗಲೇ ರೋಡ್ ಟೆಸ್ಟ್ ಪೂರ್ಣಗೊಳಿಸಿದೆ. ವಿನ್ಯಾಸದಲ್ಲಿ ನೂತನ ಐ10 ಕಾರು ಇತ್ತೀಚೆಗೆ ಬಿಡುಗಡೆಗೊಂಡ  ಸ್ಯಾಂಟ್ರೋ ಕಾರಿಗೆ ಹೋಲುತ್ತಿದೆ. ಆದರೆ ಹಳೇ ಐ10 ಕಾರಿಗಿಂತ ಹೆಚ್ಚು ಆಕರ್ಷಕ ವಿನ್ಯಾಸ ಹೊಂದಿದೆ. ಜೊತೆ ಕಾರಿನ ಒಳಭಾಗದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. 2019ರಲ್ಲಿ ಹ್ಯುಂಡೈ ಐ10 ಕಾರು ವರ್ಷದ ಕಾರಾಗಿ ಹೊರಹೊಮ್ಮಲಿದೆ ಅನ್ನೋ ವಿಶ್ವಾಸ ಕಂಪೆನಿ ವ್ಯಕ್ತಪಡಿಸಿದೆ.

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!

ಹ್ಯುಂಡೈ ಸ್ಟೈಕ್ಸ್
ಹ್ಯುಂಡೈ ಕಂಪೆನಿಯ ಕ್ರೆಟಾ SUV ಕಾರು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಮಾರುತಿ ಬ್ರಿಜಾ, ಇಕೋ ಸ್ಪೋರ್ಟ್‌ಗೆ ಪ್ರತಿಸ್ಪರ್ಧಿಯಾಗಿ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲಿದೆ. ಹ್ಯುಂಡೈ ಸ್ಟೈಕ್ಸ್ ಕಾರು 1.0 ಲೀಟರ್ ಎಂಜಿನ್ ಹೊಂದಿದ್ದು, ಹೊಸ ಸಂಚಲು ಮೂಡಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಹ್ಯುಂಡೈ ಎಲಾಂಟ್ರ


ಹ್ಯುಂಡೈ ಎಲಾಂಟ್ರ ಹೊಸ ಅವತಾರದೊಂದಿಗೆ ಬಿಡುಗಡೆಯಾಗುತ್ತಿದೆ. ಹೆಚ್ಚುವರಿ ಫೀಚರ್ಸ್, ವಿನ್ಯಾಸದಲ್ಲಿ ಕೆಲ ಬದಲಾವಣೆಗಳೊಂದಿಗೆ ಎಲಾಂಟ್ರ ಎಂಟ್ರಿಯಾಗಲಿದೆ. ಹೊಂಡಾ ಸಿವಿಕ್ ಹಾಗೂ ಟೊಯೊಟಾ ಕೊರೊಲಾ ಅಟ್ಲಿಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಎಲಾಂಟ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕ ಪ್ರಕಟ-ಬೆಲೆ ಎಷ್ಟು?

ಹ್ಯುಂಡೈ ಎಕ್ಸೆಂಟ್ ಫೇಸ್‌ಲಿಫ್ಟ್
ಹ್ಯುಂಡೈ ಸಂಸ್ಥೆಯ ಸಬ್ ಕಾಂಪಾಕ್ಟ್ ಸೆಡಾನ್ ಕಾರು ಎಕ್ಸೆಂಟ್ 2019ರ ಅಂತ್ಯದಲ್ಲಿ ಬಿಡುಗಡಡೆಯಾಗಲಿದೆ. ಹೊಂಡಾ ಅಮೇಜ್ ರೀತಿಯಲ್ಲಿ ವಿನ್ಯಾಸದಲ್ಲಿ ಮಹತ್ತರ ಬದಲಾವಣೆಯೊಂದಿಗೆ ಎಕ್ಸೆಂಟ್ ರಸ್ತೆಗಿಳಿಯಲಿದೆ.

ಹ್ಯುಂಡೈ ಸ್ಯಾಂಟ fe
ಹ್ಯುಂಡೈ ಸಂಸ್ಥೆಯ ಸ್ಯಾಂಟ fe 7 ಸೀಟರ್ ಕಾರು ಈ ಮೊದಲೇ ಭಾರತದಲ್ಲಿ ಬಿಡುಗಡೆಯಾಗಿತ್ತು. ಆದರೆ ನರೀಕ್ಷಿತ ಮಾರಾಟ ಕಾಣದೆ ಸ್ಥಗಿತಗೊಂಡಿತ್ತು. ಇದೀಗ ಹೊಸ ಅವತಾರ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಮತ್ತೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಕಾರು, ಬಸ್ಸು, ಟ್ರಕ್‌ಗಳಿಗೆ ಹೊಸ ನಿಯಮ-2019ರಿಂದ ಜಾರಿ-ನಿಮಗಿದು ತಿಳಿದಿರಲಿ!

ಹ್ಯುಂಡೈ ಕೋನಾ ಎಲೆಕ್ಟ್ರಿಕ್


ಭಾರತ ಮೊತ್ತ ಮೊದಲ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿರುವು ಹ್ಯುಂಡೇ ಕೋನಾ ಕಾರು, 2019ರ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗಲಿದೆ. ಎಲ್ಲರ ಚಿತ್ತ ಇದೀಗ ಕೋನಾ ಎಲೆಕ್ಟ್ರಿಕ್ ಮೇಲಿದೆ. ಕೋನಾ ಭಾರತದ ಎಲೆಕ್ಟ್ರಿಕ್ ಕಾರುಗಳಿಗೆ ಹೊಸ ಆಯಾಮ ನೀಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
 

click me!