
ಚೆನ್ನೈ(ಮೇ.16): 2019ರಲ್ಲಿ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಸದ್ಯ ವಾಹನ ಮಾರಾಟ ಕುಸಿತ ಕಂಡಿದ್ದರೂ ಅಪಡೇಟೆಡ್ ನ್ಯೂ ಜನರೇಶನ್, ಫೇಸ್‌ಲಿಫ್ಟ್ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ ದುಬಾರಿ ಹಾಗೂ ಐಷಾರಾಮಿ BMW ಕಾರು ಕಂಪನಿ ನೂತನ ಕಾರು ಬಿಡುಗಡೆ ಮಾಡಿದೆ. BMW X5 ನೂತನ ಕಾರು ಹಲವು ವಿಶೇಷತೆ ಹಾಗೂ ಅಪ್‌ಡೇಟ್ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಬ್ರಿಟೀಷ್ ಕಾರು ಅನಾವರಣ-ಟಾಟಾ ಹ್ಯಾರಿಯರ್, ಜೀಪ್‌ಗೆ ನಡುಕ!
2019ರಲ್ಲಿ BMW ನೂತನ 12 ಮಾಡೆಲ್ ಕಾರುಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಇದೀಗ ಈ 12 ಕಾರುಗಳ ಪೈಕಿ BMW X5 ಮೊದಲ ಕಾರು ಬಿಡುಗಡೆಯಾಗಿದೆ. ನೂತನ BMW X5 ಕಾರಿನ ಬೆಲೆ 72.90 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ. ಗರಿಷ್ಠ ಬೆಲೆ 82. 40 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) .
ಇದನ್ನೂ ಓದಿ: 30 ನಿಮಿಷ ಚಾರ್ಜ್, 201 ಕಿ.ಮಿ ಮೈಲೇಜ್- ಬರುತ್ತಿದೆ ಹೊಂಡಾ ಜಾಝ್ ಎಲೆಕ್ಟ್ರಿಕ್ ಕಾರು!
ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳಲ್ಲಿ ಕಾರು ಬಿಡುಗಡೆಯಾಗಿದೆ. ಆದರೆ ಪೆಟ್ರೋಲ್ ಮಾಡೆಲೆ 2019ರ ಅಂತ್ಯದಲ್ಲಿ ಮಾರಾಟ ಆರಂಭಗೊಳ್ಳಲಿದೆ.3.0 ಲೀಟರ್ ಟರ್ಬೋ ಡೀಸೆಲ್ ಮೋಟಾರ್ ಹೊಂದಿದ್ದು, 261 bhp ಪವರ್ ಹಾಗೂ 620 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.