ಹೆಲ್ಮೆಟ್ ಇಲ್ದೆ ಇನ್ನೂ ಪೆಟ್ರೋಲ್ ಸಿಗಲ್ಲ. ಇಷ್ಟೇ ಅಲ್ಲ ಲೈಸೆನ್ಸ್ ಕೂಡ ಕ್ಯಾನ್ಸೆಲ್ ಆಗಲಿದೆ. ನೂತನ ನಿಯಮ ಜೂನ್ 1 ರಿಂದ ಜಾರಿಯಾಗುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಮೇ.16): ಹೊಸ ವರ್ಷದಲ್ಲಿ ಹೊಸ ಹೊಸ ನೀತಿಗಳು ಜಾರಿಯಾಗುತ್ತಿದೆ. ರಸ್ತೆ ಹಾಗೂ ಸಾರಿಗೆ ವಿಭಾಗ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದೀಗ ಹೊಸ ನೀತಿಯೊಂದು ಜೂನ್ 1 ರಿಂದ ಜಾರಿಯಾಗುತ್ತಿದೆ. ಬೈಕ್ ಹಾಗೂ ಸ್ಕೂಟರ್ ಸವಾರರು ಹೆಲ್ಮೆಟ್ ಇಲ್ಲದಿದ್ರೆ, ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗೋದಿಲ್ಲ.
ಇದನ್ನೂ ಓದಿ: ರಸ್ತೆ ನಿಯಮ ಉಲ್ಲಂಘನೆ- ಕಾರು ಮಾಲೀಕನಿಗೆ 1 ರೂ.ಲಕ್ಷ ದಂಡ!
ಹೊಸ ನೀತಿ ಜಾರಿಯಾಗುತ್ತಿರೋದು ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಲ್ಲಿ. ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ದಿಟ್ಟ ಕ್ರಮ ಕೈಗೊಂಡಿದೆ. ಜಿಲ್ಲಾ ಆಡಳಿತ ವಿಭಾಗ ಇದೀಗ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ನೀಡಿದೆ. ಹೆಲ್ಮೆಟ್ ಇಲ್ಲದೆ ಬರೋ ಯಾವುದೇ ಬೇಕ್ ಹಾಗೂ ಸ್ಕೂಟರ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡದಂತೆ ಸೂಚನೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಕುಡಿದು ಅಡ್ಡಾ ದಿಡ್ಡಿ ಸ್ಕೂಟರ್ ರೈಡ್- ಅಡ್ಡಗಟ್ಟಿದ ಪೊಲೀಸ್-ವೀಡಿಯೋ ವೈರಲ್!
ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಬಂಕ್ ತೆರಳೋ ಸವಾರರ ಕುರಿತು ಪೊಲೀಸ್ ವಿಭಾಗ ಮಾಹಿತಿ ಕಲೆ ಹಾಕಲಿದೆ. ಪೆಟ್ರೋಲ್ ಬಂಕ್ ಸಿಸಿಟಿ ದೃಶ್ಯಗಳನ್ನು ಆಧರಿಸಿ ಸವಾರರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಹೆಲ್ಮೆಟ್ ನಿರ್ಲ್ಯಕ್ಷಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ಈ ನಿಯಮ ದೇಶದ ಇತರೆಡಗಳಲ್ಲೂ ಜಾರಿಯಾಗಲಿದೆ.