ಸಿಯೆರಾ to ಬೋಲ್ಟ್- ಮಿಂಚಿ ಮರೆಯಾದ 10 ಟಾಟಾ ಕಾರು!

By Web DeskFirst Published May 15, 2019, 3:46 PM IST
Highlights

ಟಾಟಾ ಮೋಟಾರ್ಸ್ ಕಾರುಗಳು ಸದ್ಯ  ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಟಾಟಾ ಹ್ಯಾರಿಯರ್, ನೆಕ್ಸಾನ್ ಸೇರಿದಂತೆ ಹಲವು ಕಾರುಗಳು ಮಾರಾಟದಲ್ಲಿ ದಾಖಲೆ ಬರೆಯತ್ತಿದೆ. ಆದರೆ ಆರಂಭದಲ್ಲಿ ಟಾಟಾ ಹಲವು ಕಾರುಗಳು ಬಿಡುಗಡೆಯಾದ ಬೆನ್ನಲ್ಲೇ ಸ್ಥಗಿತಗೊಂಡಿದೆ. ಇಂತಹ 10 ಕಾರುಗಳು ವಿವರ ಇಲ್ಲಿದೆ.

ಭಾರತದ ಅತೀ ದೊಡ್ಡ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ 1945ರಿಂದ ವಾಹನ ನಿರ್ಮಾಣದಲ್ಲಿ ಸಕ್ರಿಯವಾಗಿದೆ. 1988ರಿಂದ ಪ್ಯಾಸೆಂಜರ್ ವಾಹನ ಉತ್ಪಾದನೆ ಆರಂಭವಾಯಿತು.  ಸದ್ಯ ಟಾಟಾ ಹೆಚ್ಚು ಪ್ಯಾಸೆಂಜರ್ ವಾಹನದತ್ತ ಚಿತ್ತ ಹರಿಸಿದ್ದು, ಇತರ ಕಾರು ಕಂಪನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. 1988ರಿಂದ ಟಾಟಾ ಕೆಲ ಕಾರುಗಳನ್ನು ಬಿಡುಗಡೆ ಮಾಡಿತ್ತು. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕಾರುಗಳ ಅಷ್ಟೇ ವೇಗದಲ್ಲಿ ಉತ್ಪಾದನೆ ಕೂಡ ನಿಲ್ಲಿಸಿತು. ಇಂತಹ 10 ಕಾರುಗಳ ವಿವರ ಇಲ್ಲಿದೆ.

1991ರಲ್ಲಿ ಬಿಡುಗಡೆಯಾದ ಟಾಟಾ ಸಿಯಾರೆ ಕಾರು   2000ದಲ್ಲಿ ಕಾರು ಉತ್ಪಾದನೆ ನಿಲ್ಲಿಸಿತು.ಇದು ಭಾರತದ ಮೊತ್ತ ಮೊದಲ SUV ಕಾರು ಅನ್ನೋ ಹಿರಿಮೆಗೆ ಪಾತ್ರವಾಗಿದೆ.

1992ರಲ್ಲಿ ಬಿಡುಗಡೆಯಾದ ಟಾಟಾ ಎಸ್ಟೇಟ್ ಕಾರು 2000ದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿತು. ಮರ್ಸಡೀಸ್ ಬೆಂಝ್ ಕಾರಿನಿಂದ ಪ್ರೇರಿತವಾದ ಈ ಕಾರು ಕಾರು ಪ್ರಿಯರನ್ನು ಮೋಡಿ ಮಾಡುವಲ್ಲಿ  ವಿಫಲವಾಯಿತು.

1998 ರಲ್ಲಿ ಟಾಟಾ ಮೊಬೈಲ್ ಹೆಸರಿನಲ್ಲಿ ಬಿಡುಗಡೆಯಾದ ಪಿಕ್ ಅಪ್, ಬಳಿಕ ಹೊಸ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಸದ್ಯ ಟಾಟಾ ಟೆಲ್ಕೋಲೈನ್ ಪಿಕ್ ಅಪ್ ಲಭ್ಯವಿದೆ. ಆದರೆ ಟಾಟಾ ಮೊಬೈಲ್ 2000 ದಲ್ಲಿ ಅಂತ್ಯಗೊಂಡಿತು.

2000 ಆರಂಭದಲ್ಲಿ ಬಿಡುಗಡೆಯಾದ ಟಾಟಾ ಸಫಾರಿ ಪೆಟ್ರೋಲ್ ಕಾರು ಅಷ್ಟೇ ವೇಗದಲ್ಲಿ ಮರೆಯಾಯಿತು. 

ಸಫಾರಿ ಪೆಟ್ರೋಲ್ ಬಳಿಕ ಬಿಡುಗಡೆಯಾದ ಸಫಾರಿ 3.0 ಡಿಕೊರ್ ಕೂಡ ಮೋಡಿ ಮಾಡುವಲ್ಲಿ ವಿಫಲವಾಯಿತು. ಹೀಗಾಗಿ ಡಿಕೋರ್ 2002ರಲ್ಲಿ ಬಿಡುಗಡೆಯಾಗಿ ಕೆಲ ವರ್ಷಗಳಲ್ಲೇ ನಿಂತುಹೋಯಿತು.

ಟಾಟಾ ಎಸ್ಟೇಟ್ ಕಾರಿನ ಬಳಿಕ ಟಾಟಾ ಇಂಡಿಗೋ ಮರಿನಾ ಕಾರು ಬಿಡುಗಡೆಯಾಯಿತು. ಆದರೆ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಕಾರಣ ಉತ್ಪಾದನೆ ನಿಲ್ಲಿಸಿತು.

ಟಾಟಾ ಇಂಡಿಗೋ XL ಕಾರು ಬಿಡುಗಡೆ ಮಾಡೋ ಮೂಲಕ ಸೆಡಾನ್ ವಿಭಾಗದಲ್ಲಿ ಕೆಲ ವರ್ಷಗಳ ಕಾಲ ಮೋಡಿ ಮಾಡಿತು. ಆದರೆ ಮಾರುತಿ ಪೈಪೋಟಿಯಿಂದ ಇಂಡಿಗೋ ಓಟ ನಿಲ್ಲಿಸಿತು.

2010ರಲ್ಲಿ ಹ್ಯುಂಡೈ ವರ್ನಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮಾನ್ಜಾ ಕಾರು ಬಿಡುಗಡೆಯಾಯಿತು. ಆದರೆ ಮಾರಾಟ ಕುಸಿತ ಕಾರಣ ಮಾನ್ಜಾ ಮರೆಯಾಯಿತು.

ಟಾಟಾ ಸ್ಪೆಸಿಯೋ ಕ್ಯಾನವಾಸ್ ಟಾಪ್ ಕಾರು 2000 ಆರಂಭದಲ್ಲಿ ಬಿಡುಗಡೆಯಾಗಿ ಅಷ್ಟೇ ವೇಗದಲ್ಲಿ ಮರೆಯಾಯಿತು. 

ಇಂಡಿಕಾ ವಿಸ್ತಾ ಕಾರಿನ ಬದಲು ಟಾಟಾ ಬೋಲ್ಟ್ ಬಿಡುಗಡೆಯಾಯಿತು. ಆದರೆ ಬೇಡಿಕೆ ಇಲ್ಲದ ಕಾರಣ ಬೋಲ್ಟ್ ಓಡಲೇ ಇಲ್ಲ.


 

click me!