ಹೊತ್ತಿ ಉರಿಯಿತು ಚಲಿಸುತ್ತಿದ್ದ ಬೈಕ್ - ತನಿಖೆಗೆ ಮುಂದಾದ ಕಂಪೆನಿ!

By Web DeskFirst Published Feb 8, 2019, 1:01 PM IST
Highlights

ಚಲಿಸುತ್ತಿದ್ದ ಬೈಕ್ ಇದ್ಕಕ್ಕಿದ್ದಂತೆ ಹೊತ್ತಿ ಉರಿದಿದ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ಬೆಂಕಿ ಬೈಕ್ ಮುಂಭಾಗದಲ್ಲಿ ಆವರಿಸಿಕೊಂಡು ಅಪಾಯದ ಸಂದರ್ಭ ಸೃಷ್ಟಿಯಾಗಿತ್ತು.  ಇಲ್ಲಿದೆ ಹೆಚ್ಚಿನ ಮಾಹಿತಿ.

ಹೈದರಾಬಾದ್(ಫೆ.08):  ಚಲಿಸುತ್ತಿದ್ದ ಬೈಕ್ ಹೊತ್ತಿ ಉರಿದ ಘಟನೆ ಹೈದರಾಬಾದ್‌ನ ಹಿಮಾಯತ್ ನಗರದಲ್ಲಿ ನಡೆದಿದೆ. ಬಜಾಜ್ ಪಲ್ಸರ್ 220 ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದಿಢೀರ್ ಆಗಿ ಬೈಕ್ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿ ಉರಿದುಕೊಂಡಿದೆ.

ಇದನ್ನೂ ಓದಿ: ಗೇರ್ ಲಿವರ್ ಬದಲು ಬಿದಿರಿನ ಕೋಲು ಬಳಕೆ- ಸ್ಕೂಲ್ ಬಸ್ ಚಾಲಕ ಬಂಧನ!

ತಕ್ಷಣವೇ ಸವಾರ ಬೈಕ್‌ನಿಂದ ಎಸ್ಕೇಪ್ ಆಗಿದ್ದಾನೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ಆದರೆ ಬಹುತೇಕ ಬೈಕ್ ಹೊತ್ತಿ ಉರಿದಿದೆ. ಮೂರು ತಿಂಗಳ ಹಿಂದೆ ಖರೀದಿಸಿದ ಹೊಸ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸಿಯಾಝ್ ಡೀಸೆಲ್ ಕಾರು!

ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಿಕ್ ವಯರ್ ಅಥವಾ ಬ್ಯಾಟರಿ ಸಮಸ್ಯೆಯಿಂದ ಹೀಗಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಇದೀಗ ಬಜಾಜ್ ಈ ಕುರಿತು ತನಿಖೆಗೆ ಮುಂದಾಗಿದೆ ಎನ್ನಲಾಗ್ತಿದೆ.

click me!