ರಸ್ತೆ ಸುರಕ್ಷತೆ ಪಾಲನೆಯಲ್ಲಿ ಭಾರತೀಯರು ಒಂದು ಹೆಜ್ಜೆ ಹಿಂದೆ. ಇದಕ್ಕೆ ಮುಂಬೈನಲ್ಲಿ ನಡೆದ ಮತ್ತೊಂದು ಘಟನೆ ಸಾಕ್ಷಿ. ಸ್ಕೂಲ್ ಬಸ್ ಚಾಲಕ ಮಾಡಿದ ಯಡವಟ್ಟಿನಿಂದ ಬಂಧನಕ್ಕೊಳಗಾಗಿದ್ದಾನೆ. ಇಲ್ಲಿದೆ ಬಸ್ ಚಾಲಕ ಹಾಗೂ ಮಾಲೀಕರ ಎಡವಟ್ಟು ಮಾಹಿತಿ.
ಮುಂಬೈ(ಫೆ.07): ಡ್ರೈವಿಂಗ್, ರಸ್ತೆ ನಿಯಮ ಪಾಲನೆ, ಸುರಕ್ಷತಾ ವಿಧಾನಗಳನ್ನ ಪಾಲಿಸುವುದರಲ್ಲಿ ಭಾರತೀಯರು ಸ್ವಲ್ಪ ಹಿಂದೆ. ಏನಿದ್ದರೂ ಚಲ್ತಾ ಹೇ ಪಾಲಿಸಿ ನಮ್ಮದು. ಇದೀಗ ಸುರಕ್ಷತೆ ಕುರಿತು ನಿರ್ಲಕ್ಷ್ಯವಹಿಸಿದ ಮುಂಬೈನ ಸ್ಕೂಲ್ ಬಸ್ ಡ್ರೈವರ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!
undefined
ಸಾಂತ ಕ್ರೂಝ್ ಬಳಿಯ ಪೊದಾರ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಪ್ರತಿ ದಿನ ಶಾಲಾ ಮಕ್ಕಳಿಗೆ ಬಸ್ ಸೇವೆ ನೀಡುತ್ತಿದೆ. ಆದರೆ ಈ ಬಸ್‌ನಲ್ಲಿ ಪ್ರಯಾಣಿಸೋ ಮಕ್ಕಳ ಸುರಕ್ಷತೆ ಕುರಿತು ಯಾವುದೇ ಯೋಚನೆ ಮಾಡಿಲ್ಲ. ಇದಕ್ಕೆ ಕಾರಣವಾಗಿದ್ದೇ ಬಸ್. ಶಾಲಾ ಬಸ್‌ನ ಗೇರ್ ಲಿವರ್ ಕಿತ್ತು ಹೋದರೂ ಅದನ್ನ ಸರಿ ಪಡಿಸದೇ ಬಿದಿರಿನ ಕೋಲು ಬಳಸಿ ಶಾಲಾ ಮಕ್ಕಳನ್ನ ಕರೆದೊಯ್ಯಲಾಗುತ್ತಿತ್ತು.
ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!
ಬಸ್ ಚಾಲಾಕ ಒಂದು ವಾರದಿಂದ ಇದೇ ರೀತಿ ಶಾಲಾ ಮಕ್ಕಳನ್ನ ಕರೆದೊಯ್ಯುತ್ತಿದ್ದ. ಆದರೆ ಗೇರ್ ಸರಿಯಾಗಿ ಬೀಳದ ಕಾರಣ BMW ಕಾರಿಗೆ ಗುದ್ದಿ ಅಪಘಾತ ಸಂಭವಿಸಿತ್ತು. ಈ ವೇಳೆ ಅಪಘಾತಕ್ಕೆ ಗೇರ್ ಲಿವರ್ ಇಲ್ಲದಿರುವುದೇ ಕಾರಣ ಅನ್ನೋದು ಬಯಾಲಾಗಿದೆ. ಅಪಘಾತವಾದರೂ ಬಸ್ ಚಾಲಕ ನಿಲ್ಲಿಸೋ ಗೋಜಿಗೆ ಹೋಗಿಲ್ಲ.
ಇದನ್ನೂ ಓದಿ: ಫ್ಯಾನ್ಸಿ ನಂಬರ್‌ಗಾಗಿ 31 ಲಕ್ಷ ರೂಪಾಯಿ ನೀಡಿದ ಉದ್ಯಮಿ!
BMW ಕಾರು ಮಾಲೀಕ ಬಸ್ ಚೇಸ್ ಮಾಡಿ ಅಡ್ಡಗಟ್ಟಿದ್ದಾನೆ. ಈ ವೇಳೆ ಗೇರ್ ಲಿವರ್ ಬದಲೂ ಬಿದಿರಿನ ಕೋಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ದೂರಿನಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ಚಾಲಕನನ್ನ ಬಂಧಿಸಿದ್ದಾರೆ. ಅದೃಷ್ಟವಶಾತ್ ಅಪಘಾತದ ವೇಳೆ ಶಾಲಾ ಮಕ್ಕಳು ಬಸ್‌ನಲ್ಲಿರಲಿಲ್ಲ.