ವಿಶ್ವದ ಸ್ಟೈಲೀಶ್ ಬೈಕ್ - ಟ್ರಿಯಂಪ್ ರಾಕೆಟ್ III TFC ಅನಾವರಣ!

Published : Jan 25, 2019, 11:10 AM IST
ವಿಶ್ವದ ಸ್ಟೈಲೀಶ್ ಬೈಕ್ - ಟ್ರಿಯಂಪ್ ರಾಕೆಟ್ III TFC ಅನಾವರಣ!

ಸಾರಾಂಶ

ಅತ್ಯಂತ ಆಕರ್ಷಕ ವಿನ್ಯಾಸದ ಟ್ರಿಯಂಪ್ ರಾಕೆಡ್ ಲಿಮಿಟೆಡ್ ಎಡಿಶನ್ ಬೈಕ್ ಅನಾವರಣವಾಗಿದೆ.  ವಿಶೇಷ ಅಂದರೆ ಈ ಬೈಕ್ ಭಾರತದಲ್ಲೂ ಬಿಡುಗಡೆಯಾಗುತ್ತಿದೆ. ಈ ಬೈಕ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಲಂಡನ್(ಜ.25): ಬ್ರಿಟೀಷ್ ಮೂಲದ ಟ್ರಿಯಂಪ್(Triumph) ಮೋಟಾರ್ ಸೈಕಲ್ ಇದೀಗ ನೂತನ ಲಿಮಿಟೆಡ್ ಎಡಿಶನ್ ಟ್ರಿಯಂಪ್ ಫ್ಯಾಕ್ಟರಿ ಕಸ್ಟಮ್(TFC) ಕಾನ್ಸೆಪ್ಟ್ ಬೈಕ್ ಅನಾವರಣ ಮಾಡಿದೆ. 2019ರ ಟ್ರಿಯಂಪ್ III ಪವರ್ ಬೈಕ್ ಇದೇ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್!

2.3 ಲೀಟರ್ longitudinal triple ಎಂಜಿನ್ ಹೊಂದಿರುವ ಟ್ರಿಯಂಪ್ ರಾಕೆಟ್ III TFC ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. 2004ರಲ್ಲಿ ಬಿಡುಗಡೆಯಾದ ಎಂಜಿನ್ ಅಪ್‌ಗ್ರೇಡ್ ಮೂಲಕ ರಸ್ತೆಗಿಳಿಯಲಿದೆ. 

ಇದನ್ನೂ ಓದಿ: ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು ಬಿಡುಗಡೆ- ಬೆಂಗಳೂರಲ್ಲಿ ಮೊದಲ ಖರೀದಿ!

ನೂತನ ಬೈಕ್ ಎಂಜಿನ್ 180 bhp ಪವರ್ ಹಾಗೂ  230 Nm ಪೀಕ್ ಟಾರ್ಕ್ ಉತ್ವಾದಿಸಬಲ್ಲ ಸಾಮಾರ್ಥ್ಯಹೊಂದಿದೆ. ಈ ಲಿಮಿಟೆಡ್ ಎಡಿಶನ್ ಬೈಕ್ 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ವಿಶೇಷ ಅಂದರೆ ಈ ಬೈಕ್ 2019ರ ಅಂತ್ಯದಲ್ಲಿ ಭಾರದಲ್ಲೂ ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಕುರಿತು ಯಾವುದೇ ಮಾಹಿತಿಯನ್ನ ಕಂಪನಿ ಬಹಿರಂಗ ಪಡಿಸಿಲ್ಲ.

PREV
click me!

Recommended Stories

50 ಸಾವಿರ ರೂ.ಗೆ ಎಲೆಕ್ಟ್ರಿಕ್ ಸ್ಕೂಟರ್.. ದಿನಾ ಚಿಂತೆಯಿಲ್ಲದೆ ಕಾಲೇಜು, ಆಫೀಸ್‌ಗೆ ಹೋಗ್ಬೋದು!
Mahindra XUV 7XO: ಡಾಲ್ಬಿ ವಿಷನ್, ಅಟ್ಮಾಸ್ ಸೌಂಡ್! ಭಾರತದಲ್ಲೇ ಮೊದಲ ಬಾರಿಗೆ ಬಂದ ಕಾರಿದು!