ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್!

By Web Desk  |  First Published Jan 25, 2019, 10:28 AM IST

ಹೊಸ ಬಸ್ ಆವಿಷ್ಕರಿಸಲಾಗಿದೆ. 300 ವಿದ್ಯಾರ್ಥಿಗಳ ಸತತ ಪ್ರಯತ್ನಕ್ಕೆ ಇದೀಗ ವಿಶ್ವದಲ್ಲೆ ಮೆಚ್ಚುಗೆ ವ್ಯಕ್ತವಾಗಿದೆ. ನೂತನ ಬಸ್ ಪೆಟ್ರೋಲ್, ಡೀಸೆಲ್, ವಿದ್ಯುತ್ ಯಾವುದೇ ಬೇಡ. ಇಷ್ಟೇ ಅಲ್ಲ ಡ್ರೈವರ್ ಇಲ್ಲದೇ ಸ್ವಯಂ ಚಾಲಿತ ಬಸ್ ವಿಶೇಷತೆ ಏನು ? ಇಲ್ಲಿದೆ ವಿವರ.
 


ಪಂಜಾಬ್(ಜ.25): ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿದೆ. ಇದೀಗ ಭಾರತದ ವಿದ್ಯಾರ್ಥಿಗಳು ಹೊಸ ಬಸ್ ನಿರ್ಮಿಸಿದ್ದಾರೆ. ಈ ಬಸ್‌ಗೆ ಡ್ರೈವರ್ ಬೇಕಾಗಿಲ್ಲ, ಪೆಟ್ರೋಲ್, ಡೀಸೆಲ್ ಕೂಡ ಬೇಡ. ಇನ್ನು ಚಾರ್ಜ್ ಮಾಡಲು ವಿದ್ಯುತ್ ಕೂಡ ಬೇಡ. ಕಾರಣ ಇದು ಸೋಲಾರ್ ಬಸ್.

ಇದನ್ನೂ ಓದಿ: ಟಾಟಾ ಹರಿಯರ್ SUV ಕಾರು ಬಿಡುಗಡೆ-ಇತರ ಕಾರಿಗಿಂತ ಬೆಲೆ ಕಡಿಮೆ!

Latest Videos

undefined

ಈ ಬಸ್ ಬೆಲೆ 15 ಲಕ್ಷ ರೂಪಾಯಿ. ಸೋಲಾರ್‌ ಚಾಲಿತ ಬಸ್ ಇದೀಗ ಆಟೋಮೊಬೈಲ್ ದಿಗ್ಗಜರನ್ನೇ ಬೆರಗುಗೊಳಿಸಿದೆ. ಪಂಜಾಬ್‌ನ ಪಗ್ವಾರ ನಗರದಲ್ಲಿನ ಲವ್ಲಿ ಪ್ರೋಫೆಶನಲ್ ಯುನಿವರ್ಸಿಟಿ ವಿದ್ಯಾರ್ಥಿಗಳು ಈ ಬಸ್ ನಿರ್ಮಿಸಿದ್ದಾರೆ. 

ಇದನ್ನೂ ಓದಿ: ತಂದೆ ಹುಟ್ಟುಹಬ್ಬಕ್ಕೆ ಮಗನಿಂದ ಆಡಿ ಕಾರು ಸರ್ಪ್ರೈಸ್ ಗಿಫ್ಟ್!

ಸೆನ್ಸಾರ್ ಮೂಲಕ  ಸ್ವಯಂ ಚಾಲಿತವಾಗೋ ಈ ಬಸ್ 6 ಆ್ಯಸಿಡ್ ಬ್ಯಾಟರಿ ಹೊಂದಿದೆ. ಸೋಲಾರ್ ಮೂಲಕ ಚಾರ್ಜ್ ಆಗೋ ಈ ಬ್ಯಾಟರಿ ಒಂದು ಚಾರ್ಜ್‌ಗೆ 70 ಕಿ.ಮೀ ಪ್ರಯಾಣಸಬಹುದು. ಐವರು ಉಪನ್ಯಾಸಕರ ಮಾರ್ಗದರ್ಶನದಲ್ಲಿ 300 ವಿದ್ಯಾರ್ಥಿಗಳು  ಈ ಬಸ್ ಆವಿಷ್ಕರಿಸಿದ್ದಾರೆ. 1500 ಕೆ.ಜಿ ತೂಕವಿರುವ ಈ ಬಸ್‌ನಲ್ಲಿ 15 ಮಂದಿ ಪ್ರಯಾಣಿಸಬಹುದು. 

click me!