ಶೀಘ್ರದಲ್ಲಿ KTM 790 ಡ್ಯೂಕ್ ಬೈಕ್ ಬಿಡುಗಡೆ-ಬೆಲೆ ಎಷ್ಟು?

Published : Jan 23, 2019, 09:41 PM IST
ಶೀಘ್ರದಲ್ಲಿ KTM 790 ಡ್ಯೂಕ್ ಬೈಕ್ ಬಿಡುಗಡೆ-ಬೆಲೆ ಎಷ್ಟು?

ಸಾರಾಂಶ

Suzuki GSX-S750 ಹಾಗೂ Kawasaki Z900 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಇದೀಗ KTM 790 ಡ್ಯೂಕ್ ಬೈಕ್ ಬಿಡುಗಡೆಯಾಗುತ್ತಿದೆ. ಹೆಚ್ಚುವರಿ ಫೀಚರ್ಸ್, ಅತ್ಯಾಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶಿಷ್ಠತೆಗಳು ಈ ಬೈಕ್‌ನಲ್ಲಿದೆ.

ನವದೆಹಲಿ(ಜ.23): ಯುವಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿರುವ KTM ಡ್ಯೂಕ್ ಇದೀಗ ಬಲಿಷ್ಠ ಎಂಜಿನ್ ಹಾಗೂ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. 799 ಸಿಸಿ ಎಂಜಿನ್ ಹೊಂದಿರುವ ನೂತನ KTM 790 ಡ್ಯೂಕ್ ಬೈಕ್ ಮಾರ್ಚ್, 2019ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಒಂದು ವಾರದಲ್ಲಿ 12 ಸಾವಿರ Maruti WagonR ಕಾರು ಬುಕ್!

ನೂತನ KTM 790 ಡ್ಯೂಕ್ ಬೈಕ್ ಬೆಲೆ 8 ರಿಂದ 8.5 ಲಕ್ಷ ರೂಪಾಯಿ(ಆನ್ ರೋಡ್) ಎಂದು ಅಂದಾಜಿಸಲಾಗಿದೆ. ಈ ಮೂಲಕ Suzuki GSX-S750 ಹಾಗೂ Kawasaki Z900 ಬೈಕ್‌ಗಳಿ ಪೈಪೋಟಿ ನೀಡಲು ರೆಡಿಯಾಗಿದೆ. ಈ ಎರಡು ಬೈಕ್ ಬೈಕ್ ಬೆಲೆ  7.46 ಲಕ್ಷ ರೂಪಾಯಿ ಹಾಗೂ  7.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

ನೂತನ KTM 790 ಡ್ಯೂಕ್ ಬೈಕ್ ಭಾರತದಲ್ಲಿ ನಿರ್ಮಾಣವಾಗುವುದಿಲ್ಲ. ಬಿಡಿಭಾಗಗಳನ್ನ ಆಮದು ಮಾಡಿಕೊಂಡು ಇಲ್ಲಿ ಜೋಡಿಸಲಾಗುತ್ತೆ. 2017 EICMA ಮೋಟಾರ್ ಶೋನಲ್ಲಿ KTM 790 ಡ್ಯೂಕ್ ಪರಿಚಯಿಸಲಾಗಿತ್ತು. ಇನ್ನೆರಡು ತಿಂಗಳಲ್ಲೇ ಭಾರತದ ರಸ್ತೆಗಿಳಿಯಲಿದೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ