ಶೀಘ್ರದಲ್ಲೇ ಬಿಡುಗಡೆಯಾಗಲಿಗೆ 4 ಹ್ಯಾಚ್‌ಬ್ಯಾಕ್ ಕಾರು-ನಿಮ್ಮ ಆಯ್ಕೆ ಯಾವುದು?

By Web DeskFirst Published Dec 14, 2018, 3:57 PM IST
Highlights

2019ರ ಆರಂಭದಲ್ಲಿ ಪ್ರಮುಖ 4 ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಯಾಗಲಿದೆ. ಈ ಕಾರುಗಳು ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲಿದೆ. ಹಾಗಾದರೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕಾರುಗಳು ಯಾವುದು? ಇಲ್ಲಿದೆ ವಿವರ.

ಬೆಂಗಳೂರು(ಡಿ.14): ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ ಹೊಸ ವರ್ಷದಲ್ಲಿ ಹಲವು ಕಾರುಗಳು ಬಿಡುಗಡೆಯಾಗಲಿದೆ. ಈ ಮೂಲಕ ಭಾರತದ ಆಟೋಮೊಬೈಲ್ ಕ್ಷೇತ್ರ ಹೊಸ ದಿಕ್ಕಿನತ್ತ ಸಂಚರಿಸಲಿದೆ. 2019ರ ಆರಂಭದಲ್ಲೇ 4 ಹ್ಯಾಚ್‌ಬ್ಯಾಕ್ ಕಾರುಗಳು ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!

2018ರಲ್ಲಿ ನೂತನ ಮಾರುತಿ ಸಿಫ್ಟ್, ಹ್ಯುಂಡೈ ಸ್ಯಾಂಟ್ರೋ ಸೇರಿದಂತೆ ಹಲವು ಹ್ಯಾಚ್‌ಬ್ಯಾಕ್ ಕಾರುಗಳು ಬಿಡುಗಡೆಯಾಗಿತ್ತು. ಇದೀಗ 2019ರಲ್ಲಿ ಟಾಟಾ, ಮಾರುತಿ, ಫೋರ್ಡ್ ಸೇರಿದಂತೆ ಹಲವು ಕಂಪೆನಿಗಳು ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ ಮಾಡುತ್ತಿದೆ.

ಟಾಟಾ 45X
ಟಾಟಾ 45X ಕಾರು 2019ರ ಜನವರಿಯಲ್ಲಿ ಬಿಡುಗಡೆಯಾಗೋ ಸಾಧ್ಯತೆ ಇದೆ. ಹ್ಯುಂಡೈ ಐ20, ಮಾರುತಿ ಬಲೆನೊ ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ಟಾಟಾ 45X ಕಾರು, 1.5 ಲೀಟರ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊರತರುವ ಸಾದ್ಯತೆ ಇದೆ. 2018ರ ಆಟೋ ಎಕ್ಸ್ಪೋದಲ್ಲಿ ಆಕರ್ಷಕ ವಿನ್ಯಾಸದಿಂದಲೇ ಗಮನ ಸೆಳೆದ ಟಾಟಾ 45X ಮೋಡಿ ಮಾಡುವುದರಲ್ಲಿ  ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಅಡ್ಡಾ ದಿಡ್ಡಿ ವಾಹನ ಓಡಿಸುವದರಲ್ಲಿ ಈ ನಗರದವರೇ ಮುಂದು!

ಮಾರುತಿ ಸುಜುಕಿ ವ್ಯಾಗನ್ಆರ್
ಹೊಸ ವಿನ್ಯಾಸ, ಗಾತ್ರದಲ್ಲೂ ಹೆಚ್ಚಳ ಹಾಗೂ ಹೆಚ್ಚು ಬಲಿಷ್ಠ ಎಂಜಿನ್‌ನೊಂದಿಗೆ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಬಿಡುಗಡೆಯಾಗಲಿದೆ. 2019ರ ಆರಂಭದಲ್ಲೇ ವ್ಯಾಗನ್ಆರ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಈಗಾಗಲೇ ರೋಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನ ವ್ಯಾಗನ್ಆರ್ ಯಶಸ್ವಿಯಾಗಿ ಮುಗಿಸಿದೆ. ಇಷ್ಟೇ ಅಲ್ಲ ವ್ಯಾಗನ್ಅರ್ ಎಲೆಕ್ಟ್ರಿಕ್ ಕಾರು ಕೂಡ ಬಿಡುಗಡೆಯಾಗುತ್ತಿದೆ.

ಫೋರ್ಡ್ ಫಿಗೋ ಫೇಸ್‌ಲಿಫ್ಟ್
2018ರಲ್ಲಿ ಫೋರ್ಡ್ ಫಿಗೋ ಆ್ಯಸ್ಪೈರ್ ಫೇಸ್‌ಲಿಫ್ಟ್ ಬಿಡುಗಡೆ ಮಾಡಿತ್ತು. ಇದೀಗ ಫಿಗೋ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಲಿದೆ. ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಹಾಗೂ 1.5 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆಯಾಗಲಿದೆ.  ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಕೂಡ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರು-ನಿಮ್ಮ ಆಯ್ಕೆ ಯಾವುದು?

ಮರ್ಸಡೀಸ್ ಬೆಂಚ್ ಎ ಕ್ಲಾಸ್
ನ್ಯೂ ಜನರೇಶನ್ ಎ ಕ್ಲಾಸ್ ಕಾರು ಬಿಡುಗಡೆಗೆ ಮರ್ಸಡೀಸ್ ಮುಂದಾಗಿದೆ. 2019ರ ಆರಂಭದಲ್ಲಿ ಈ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಹಿಂದಿನ ಕಾರಿಗಿಂತ 300mm ಲಾಂಗ್ ವೀಲ್ಹ್‌ಬೇಸ್, 10.3 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವಿಶೇಷತೆಗಳನ್ನ ಒಳಗೊಂಡಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!