ರೋಲ್ಸ್ ರಾಯ್ಸ್ TO ವಿಹಾರ ನೌಕೆ-ಎಲ್ಲವನ್ನೂ ಕಳೆದುಕೊಂಡ ಮಲ್ಯ!

By Web Desk  |  First Published Dec 13, 2018, 4:05 PM IST

ಐಷಾರಾಮಿ ಜೀವನದಲ್ಲಿದ್ದ ವಿಜಯ್ ಮಲ್ಯ ಇದೀಗ ಶೂನ್ಯದಿಂದ  ಬದುಕು ಆರಂಭಿಸೋ ಕಾಲ ದೂರವಿಲ್ಲ. ಮಲ್ಯ ಬಳಿ ಇದ್ದ ದುಬಾರಿ ಕಾರುಳು, ವಿಹಾರ ನೌಕೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ.


ಲಂಡನ್(ಅ.20): ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ನಲ್ಲಿ ಹಾಯಾಗಿದ್ದ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಮಲ್ಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲ ಸಾಲ ವಸೂಲಾತಿಗೆ ಮಲ್ಯ ಆಸ್ತಿ ಮುಟ್ಟುಗೋಲಿಗೆ ಭಾರತೀಯ ಬ್ಯಾಂಕ್‌ಗಳು ತುದಿಗಾಲ್ಲಿ ನಿಂತಿದೆ.

ಇದನ್ನೂ ಓದಿ: 1 ಲೀಟರ್‌ನಲ್ಲಿ 250 ಕೀ.ಮಿ ಮೈಲೇಜ್-ದಾಖಲೆ ಬರೆದ ಕಾರು!

Tap to resize

Latest Videos

undefined

ವಿಜಯ್ ಮಲ್ಯ ಬಳಿ ಐಷಾರಾಮಿ ಕಾರು, ವಿಹಾರ ನೌಕೆ ಸೇರಿದಂತೆ ಬರೋಬ್ಬರಿ 30 ಕೋಟಿ ಮೌಲ್ಯದ ವಾಹನಗಳಿದೆ.  ಲಂಡನ್‌ನಲ್ಲಿ ವಿಜಯ್ ಮಲ್ಯ ಬಳಿ 15 ಕ್ಕೂ ಹೆಚ್ಚು ಕಾರುಗಳಿವೆ. ಇದರಲ್ಲಿ 6 ದುಬಾರಿ ಕಾರುಗಳನ್ನ  ಹರಾಜು ಹಾಕಲು ಕೋರ್ಟ್ ಸೂಚಿಸಿದೆ. ಕೋರ್ಟ್ ಆದೇಶದ ಪ್ರಕಾರ, 2016 ಮಿನಿ ಕೂಪರ್, 2012 ಮೇಬ್ಯಾಚ್ 62, 2006 ಫೆರಾರಿF430, ಲ್ಯಾಂಡ್ ರೋವರ್ ರೇಂಜ್ ರೋವರ್ ಹಾಗೂ ಪೋರ್ಶೆ ಕಾರನ್ನ ಹರಾಜಿಗೆ ಇಡಲಾಗಿದೆ.

ಇದನ್ನೂ ಓದಿ: ಈ ನಗರದಲ್ಲಿದ್ದಾರೆ ಅತ್ಯಂತ ಬ್ಯಾಡ್ ಡ್ರೈವರ್ಸ್: ಇವರಿಗೆ ಅಪ್ಲೈ ಆಗಲ್ಲ ರೂಲ್ಸ್!

ಮಲ್ಯರ ಬಹುತೇಕ ಕಾರುಗಳನ್ನ ಕಸ್ಟಮೈಸ್ ಮಾಡಲಾಗಿದೆ. ಕೋಟಿ ಕೋಟಿ ಹಣ ಸುರಿದು ಫ್ಯಾನ್ಸಿ ನಂಬರ್ ಕೂಡ ಮಾಡಿಸಿದ್ದಾರೆ.  ಮೇಬ್ಯಾಚ್ 62 ಕಾರಿನ ನಂಬರ್ VJM1, ಫೆರಾರಿF430 ಕಾರಿನ ನಂಬರ್ BO55 VJM(ಅರ್ಥ: ಬಾಸ್ ವಿಜಯ್ ಮಲ್ಯ), ರೇಂಜ್ ರೋವರ್ ನಂಬರ್ F1VJM(ಅರ್ಥ :ಫಾರ್ಮುಲಾ ಒನ್ ವಿಜಯ್ ಮಲ್ಯ) ಪೊರ್ಶೆ ಕಾರಿನ ನಂಬರ್ 0007 VJM(ಅರ್ಥ: ಜೇಮ್ಸ್ ಬಾಂಡ್ ಮೂವಿ)

ಇದನ್ನೂ ಓದಿ: ಕಾರಿನ ಹೆಡ್ ಲೈಟ್ ಮಾಡಿಫೈ ಮಾಡಿದರೆ ಎಚ್ಚರ-ದಾಖಲಾಗುತ್ತೆ ಕೇಸ್!

ಐಷಾರಾಮಿ ಜೀವನದಲ್ಲಿದ್ದ ವಿಜಯ್ ಮಲ್ಯ ಇದೀಗ ಎಲ್ಲವನ್ನೂ ಕಳೆದುಕೊಳ್ಳಲಿದ್ದಾರೆ. ಕಾರು ಬಂಗಲೆ, ಆಸ್ತಿ ಅಂತಸ್ತು ಯಾವುದು ಉಳಿಯಲ್ಲ. ಕಾರಣ ಇದೆಲ್ಲವನ್ನೂ ಹರಾಜು ಹಾಕಿಗರೂ ಬ್ಯಾಂಕ್ ಸಾಲ ತೀರಿಸುವುದು  ಕಷ್ಟ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!