ಬುಗಾಟಿ ಕಂಪನಿ ಎಲ್ಲಾ ಕಾರುಗಳ ಕೋಟಿ ಕೋಟಿ ರೂಪಾಯಿ. ವಿಶ್ವದ ಅತ್ಯಂದ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಬುಗಾಟಿ ಪಾತ್ರವಾಗಿದೆ. ಬುಗಾಟಿ ಚಿರೊನ್ ವೇರಿಯೆಂಟ್ ಕಾರು ವಿಶ್ವದ ಕೆಲವೇ ಕೆಲವು ಮಂದಿಯಲ್ಲಿದೆ. ಕಾರಣ ಇದರ ದುಬಾರಿ ಬೆಲೆಯಿಂದ ಖರೀದಿ ಅಷ್ಟು ಸುಲಭದ ಮಾತಲ್ಲ. ಈ ದುಬಾರಿ ಕಾರನ್ನು ಖರೀದಿಸಿದ ಏಕೈಕ ಭಾರತೀಯನ ಪರಿಚಯ ಇಲ್ಲಿದೆ.
ನ್ಯೂಯಾರ್ಕ್(ಜು.05): ಶ್ರೀಮಂತರಿಗೆ, ಉದ್ಯಮಿಗಳಿಗೆ ಸೇರಿದಂತೆ ಹಲವರಿಗೆ ಬುಗಾಟಿ ಕಾರು ಖರೀದಿಸಬೇಕು ಅನ್ನೋದು ಅವರ ಕನಸಾಗಿರುತ್ತೆ. ಆದರೆ ಬುಗಾಟಿ ಕಾರಿನ ಬೆಲೆ ನೋಡಿ ಬಹುತೇಕರು ಹಿಂದೆ ಸರಿಯುತ್ತಾರೆ. ವಿಶ್ವದಲ್ಲಿ ಹಲವು ಬುಗಾಟಿ ಕಾರಿನ ಮಾಲೀಕರಿದ್ದಾರೆ. ಭಾರತದಲ್ಲೂ ಬುಗಾಟಿ ಕಾರಿನಲ್ಲಿ ಓಡಾಡುವವರಿದ್ದಾರೆ. ಆದರೆ ಬುಗಾಟಿ ಚಿರೊನ್ ವರ್ಶನ್ ಕಾರು ಹೊಂದಿದವರ ಸಂಖ್ಯೆ ಬೆರಳೆಣಿಕೆ ಮಂದಿ. ಅದರಲ್ಲೂ ಚಿರೊನ್ ಕಾರು ಹೊಂದಿದ ಏಕೈಕ ಭಾರತೀಯ ಅನ್ನೋ ಹೆಗ್ಗಳಿಕೆಗೆ ಮಯೂರ್ ಶ್ರೀ ಪಾತ್ರರಾಗಿದ್ದಾರೆ.
ಬುಗಾಟಿ ಚಿರೋನ್- ಇದು ವಿಶ್ವದ ಅತ್ಯಂತ ದುಬಾರಿ ಕಾರು!.
ಆಗರ್ಭ ಶ್ರೀಮಂತರಲ್ಲಿ ಬುಗಾಟಿ ವೆಯ್ರೊನ್ ಕಾರು ಕಾಣಬಹುದು. ಆದರೆ ಬುಗಾಟಿ ಚಿರೊನ್ ಕಾರು ವಿರಳ. ಬುಗಾಟಿ ಚಿರೊನ್ ದುಬಾರಿ ಕಾರು ಖರೀದಿಸಿರುವ ಭಾರತದ ಮೂಲಕ ಅಮೆರಿಕ ನಿವಾಸಿ ಮಯೂರ್ ಶ್ರೀ, ಕಳೆದೆರಡು ವರ್ಷದಿಂದ ಚಿರೊನ್ ಕಾರಿನಲ್ಲಿ ಓಡಾಡುತ್ತಿದ್ದಾರೆ.
ದುಬಾರಿ ಬುಗಾಟಿ ಡಿವೋ ಕಾರಿನ 5 ಅಂಶಗಳು ನಿಮಗೆ ಗೊತ್ತಿರಲೇಬೇಕು
ಬುಗಾಟಿ ಚಿರೊನ್ ಕಾರಿನ ಬೆಲೆ 21 ಕೋಟಿ ರೂಪಾಯಿ. ಯಾವುದೇ ಕಸ್ಟಮೈಸೇಶನ್ ಮಾಡದೇ ಬರಿ ಕಾರಿಗೆ 21 ಕೋಟಿ ರೂಪಾಯಿ. ವಿಶೇಷ ಅಂದರೆ ಈ ಕಾರಿನಲ್ಲಿ ಗ್ರಾಹಕರ ಬೇಡಿಕೆಯಂತೆ ಬದಲಾವಣೆಗಳನ್ನು ಮಾಡಲಾಗುತ್ತದೆ. ಹೀಗೆ ಮಾಡಿದಲ್ಲಿ ಇದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.
ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!.
ಮಯೂರ್ ಶ್ರೀ ಬಳಿ ಬುಗಾಟಿ ಚಿರೊನ್ ಕಾರು ಮಾತ್ರವಲ್ಲ, ಇತರ ದುಬಾರಿ ಕಾರುಗಳಾದ ಪೊರ್ಶೆ GT RS2, ಮೆಕ್ಲರೆನ್ 720S, ರೋಲ್ಸ್ ರೋಯ್ಸ್ ಡ್ರಾಪ್ ಹೆಡ್ ಕೂಪ್, ಲ್ಯಾಂಬೋರ್ಗಿನಿ ಅವೆಂಟಡೊರ್ SVh, ಪೊರ್ಶನೆ GT rs3 ಸೇರಿದಂತೆ ಕೆಲ ದುಬಾರಿ ಕಾರುಗಳನ್ನು ಹೊಂದಿದ್ದಾರೆ.