ಪೊಲೀಸರ ನೋಡಿ ಕದ್ದ ಕಾರಿನ ವೇಗ ಹೆಚ್ಚಿಸಿದ ಕಳ್ಳ, ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ!

By Suvarna NewsFirst Published Jul 4, 2020, 8:22 PM IST
Highlights

ಚಾಲಾಕಿ ಕಳ್ಳ, ಬೆದರಿಸಿ ವ್ಯಕ್ತಿ ಯೋರ್ವನ ಕಾರನ್ನು ಅಪಹರಿಸಿದ್ದಾನೆ. ಹದ್ದಿನ ಕಣ್ಣಿಟ್ಟಿದ ಪೊಲೀಸ್ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರ ಚೇಸಿಂಗ್ ನೋಡಿದ ಕಳ್ಳ ಕಾರಿನ ವೇಗ ಹೆಚ್ಚಿಸಿದ್ದಾನೆ. ಅಷ್ಟೇ ನೋಡಿ ನಿಯಂತ್ರಣ ತಪ್ಪಿದ ಕಾರು ಸಮುದ್ರಕ್ಕೆ ಬಿದ್ದಿದೆ. ಬಳಿಕ ಏನಾಯ್ತು? ಇಲ್ಲಿದೆ ವಿವರ.

ಸಾಂತಾ ಕ್ರೂಝ್(ಜು.04): ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಕಳ್ಳತನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗಲಿದೆ ಅನ್ನೋ ಸೂಚನೆಯನ್ನು ಪೊಲೀಸ್ ನೀಡಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾಗಿ ಸಾರ್ವಜನಿಕರಲ್ಲಿ ಕೋರಿದೆ. ಇದೀಗ ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಝ್ ಬಳಿ ಹಣಕ್ಕಾಗಿ ಕಳ್ಳತನ ಮಾಡಲು ಹೋಗಿ ತಪ್ಪಿಸಿಕೊಳ್ಳಲು ಸರಣಿ ಕಳ್ಳತನ ಮಾಡಿದ ಘಟನೆ ನಡೆದಿದೆ.

ಖರೀದಿಸಿದ 20 ನಿಮಿಷದಲ್ಲಿ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಕಾರು ಪುಡಿ ಪುಡಿ

ಕಳ್ಳತನ ಮಾಡಿದ ವ್ಯಕ್ತಿ ತಪ್ಪಿಸಿಕೊಳ್ಳಲು, ಸಾಂತಾ ಕ್ರೂಝ್ ಬಳಿ ವ್ಯಕ್ತಿಯನ್ನು ಬೆದರಿಸಿ ಕಾರು ಅಪಹರಿಸಿದ್ದಾನೆ. ಇತ್ತ ಮಾಹಿತಿ ತಿಳಿದ ಪೊಲೀಸರು ಕಳ್ಳನ ಚೇಸ್ ಮಾಡಿದ್ದಾರೆ. ಪೊಲೀಸ್ ಚೇಸ್ ಮಾಡುತ್ತಿದ್ದಾರೆ ಎಂದು ಅರಿತ ಕಳ್ಳ ಕಾರಿನ ವೇಗ ಹೆಚ್ಚಿಸಿದ್ದಾನೆ.

ಹೈವೇಯಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿದ್ದಾನೆ. ಒಂದೆಡೆ ಸಮದ್ರ, ಮತ್ತೊಂದೆಡೆ ರಸ್ತೆಯಿರುವ ಕ್ಯಾಲಿಫೋರ್ನಿಯಾ ಕಡಲ ತೀರದ ಪ್ರಮುಖ ರಸ್ತೆಯಲ್ಲಿ ವೇಗ ಅಪಾಯಕಾರಿ. ಕಾರಣ ಹಲವು ಅಪಾಯಕಾರಿ ತಿರುವುಗಳಿವೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ವೇಗ ಕಡಿಮೆ ಮಾಡಿಲ್ಲ. ನಿಯಂತ್ರಣ ತಪ್ಪಿದ ಚಾಲಕ ಕಾರಿನೊಂದಿಗೆ ಸಮದ್ರಕ್ಕೆ ಬಿದ್ದಿದ್ದಾನೆ.

 

Car (and driver) into the ocean on West Cliff Drive in after carjacking and pursuit hit speeds of 100+ mph, per an SCPD officer. Driver survived, was arrested, and left the scene in an ambunlance. Unknown whether there were any passengers. pic.twitter.com/bmAFbQzjZ3

— Cody 5@1 (@CodyS86)

ಇತ್ತ ಪೊಲೀಸರು ಕಳ್ಳನನ್ನು ರಕ್ಷಿಸಿ ಅರೆಸ್ಟ್ ಮಾಡಿದ್ದಾರೆ. ಬಳಿಕ ಕ್ರೇನ್ ಮೂಲಕ ಸಮುದ್ರದಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಮಳೆಗಾಲವಾದ್ದರಿಂದ ಅಲೆಗಳ ರಭಸ ಹೆಚ್ಚಾಗಿದ್ದ ಕಾರಣ ಪೊಲೀಸರು ಕಾರು ಹೊರತೆಗೆಯಲು ಹರಸಾಹಸವೇ ಮಾಡಿದ್ದಾರೆ. ಇತ್ತ ಬಂಧಿತನ ವಿಚಾರಣೆಯನ್ನ ಕ್ಯಾಲಿಫೋರ್ನಿಯಾ ಪೊಲೀಸರು ನಡೆಸುತ್ತಿದ್ದಾರೆ.

 

click me!