ಆಕರ್ಷಕ ಹಾಗೂ ದಕ್ಷತೆಯ ಹೀರೋ Xtreme 160R ಬೈಕ್ ಬಿಡುಗಡೆ!

By Suvarna News  |  First Published Jul 4, 2020, 7:04 PM IST

ವಿಶ್ವದ ಅತೀ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಹೀರೋ ಇದೀಗ ನೂತನ ಹೀರೋ  Xtreme 160R ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ ಹಾಗೂ ವಿಶೇಷತೆ ಮಾಹಿತಿ ಇಲ್ಲಿದೆ.


ಜೈಪುರ(ಜು.04):  ಹೀರೋ ಮೋಟಾರ್‌ಕಾರ್ಪ್‌ನ ಹೊಸ ಬೈಕ್ ಹಿರೋ Xtreme 160R ಬೈಕ್ ಬಿಡುಗಡೆಯಾಗಿದೆ.   ಹೀರೋ Xtreme 160R ಬೈಕ್ ಆರಾಮದಾಯಕ ಹಾಗು ನಿಯಂತ್ರಣದ ಗರಿಷ್ಟ ಮಿಶ್ರಣದೊಂದಿಗೆ ತನ್ನ  ಕಾರ್ಯಕ್ಷಮತೆ ತೋರಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಹಲವು ವಿಶೇಷತೆ ಹಾಗೂ ಹೆಚ್ಚುವರಿ ಫೀಚರ್ಸ್ ಒಳಗೊಂಡಿದೆ.  

ಹೀರೋ ಮೋಟಾರ್ ಸಂಪೂರ್ಣ ಡಿಜಿಟಲ್, ವಾಹನ ಖರೀದಿಗೆ ಸುಲಭ ಮಾರ್ಗ!.

Tap to resize

Latest Videos

undefined

ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಹಾಗು ಸ್ಕೂಟರ್ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನ ಬಹುನಿರೀಕ್ಷಿತ  Xtreme 160R ಬೈಕ್  ವಿನೂತನ ಶೈಲಿಯಿಂದ ಎಲ್ಲರ ಗಮನಸೆಳೆಯುತ್ತಿದೆ. Xtreme 160R  ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 99,950 ರೂಪಾಯಿ(ಎಕ್ಸ್ ಶೋರೂಂ) ನಿಂದ ಆರಂಭಗೊಳ್ಳುತ್ತಿದೆ.

ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!..

ಫ್ರಂಟ್ ಡಿಸ್ಕ್ ಹಾಗೂ ಸಿಂಗಲ್ ಚಾನೆಲ್ ABS ಬ್ರೇಕ್: 99,950 ರೂಪಾಯಿ(ಎಕ್ಸ್ ಶೋ ರೂಂ)
ಡಬಲ್ ಡಿಸ್ಕ್ ಹಾಗೂ ಸಿಂಗಲ್ ಚಾನೆಲ್ ABS ಬ್ರೇಕ್: 1,03,500 ರೂಪಾಯಿ(ಎಕ್ಸ್ ಶೋ ರೂಂ)

ಹೀರೋ Xtreme 160R ಬೈಕ್ BS6 ಎಮಿಶನ್ ಎಂಜಿನ್ ಹೊಂದಿದೆ. 160cc,ಏರ್ ಕೂಲ್ಡ್, X ಸೆನ್ಸ್ ಟೆಕ್ನಾಲಜಿ ಹಾಗೂ ಫ್ಯುಯೆಲ್ ಇಂಜೆಕ್ಷನ್ ಹೊಂದಿದೆ. 15hp ಪವರ್ ಸಾಮರ್ಥ್ಯ ಹೊಂದಿದೆ. 0 ಯಿಂದ 60 ಕಿ.ಮೀ ವೇಗಕ್ಕೆ ಈ ಬೈಕ್ 4.7 ಕಿ.ಮೀ ಸಮಯ ತೆಗೆದುಕೊಳ್ಳಲಿದೆ. 

click me!