ಹೆಚ್ಚು ಆಕರ್ಷಕ, ಹಲವು ವಿಶೇಷತೆ; ಜಾವಾ ಪೆರಾಕ್ ಬೈಕ್ ಬಿಡುಗಡೆ!

By Web Desk  |  First Published Nov 15, 2019, 6:29 PM IST

ಅತ್ಯಂತ ಆಕರ್ಷಕ, ಹೆಚ್ಚು ಬಲಿಷ್ಠ ಜಾವಾ ಪೆರಾಕ್ ಬೈಕ್ ಬಿಡುಗಡೆಯಾಗಿದೆ.  ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆ ಬಾಬ್ಬರ್ ಬೈಕ್ ಜಾವಾ ಪೆರಾಕ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬೈಕ್ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ. 
 


ನವದೆಹಲಿ(ನ.15): ಜಾವಾ ಕ್ಲಾಸಿಕ್, ಜಾವಾ 42 ಬಳಿಕ ಇದೀಗ ಜಾವಾ ಪೆರಾಕ್ ಬಾಬ್ಬರ್ ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ಬೈಲೆ 1.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಜಾವಾ ಪೆರಾಕ್ ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಬಾಬ್ಬರ್ ಬೈಕ್ ಅನ್ನೋ ಹಗ್ಗಳಿಕೆಗೆ ಪಾತ್ರವಾಗಿದೆ. 2018ರ ನವೆಂಬರ್ 15ರಂದು ಅನಾವರಣಗೊಂಡಿದ್ದ ಪೆರಾಕ್ ಬೈಕ್, ಸರಿಯಾಗಿ ಒಂದು ವರ್ಷಗಳ ಬಳಿಕ ಬಿಡುಗಡೆಯಾಗಿದೆ.

Latest Videos

undefined

ಇದನ್ನೂ ಓದಿ: ಜಾವಾ 90th ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ!

ಫ್ಲೋಟಿಂಗ್ ಸೀಟ್, ಇಂಟಿಗ್ರೇಟೆಡ್ ಟೈಲ್‌ಲೈಟ್, ಟಿಯರ್ ಡ್ರಾಪ್ ಫ್ಯುಯೆಲ್ ಟ್ಯಾಂಕ್, ಲೋ ಸೀಟ್ ಹಾಗೂ ವೈಡ್ ಹ್ಯಾಂಡ್ಲ್‌ಬಾರ್ ಮೂಲಕ ಮೊದಲ  ನೋಟದಲ್ಲೆ ಪೆರಾಕ್ ಬೈಕ್ ಪ್ರಿಯರ ಮನಗೆಲ್ಲೋದರಲ್ಲಿ ಯಾವುದೇ ಅನುಮಾನವಿಲ್ಲ. 

ಇದನ್ನೂ ಓದಿ: ಶೀಘ್ರದಲ್ಲೇ ಜಾವಾದಿಂದ ಮತ್ತೆ 3 ಹೊಸ ಬೈಕ್ ಬಿಡುಗಡೆ!

ಬುಲೆಟ್ ಶೆಲ್ ಶೇಪ್ ಹೆಡ್‌ಲ್ಯಾಂಪ್ಸ್, ಹೆಚ್ಚು ಉದ್ದವಾಗ ಫೋರ್ಕ್ಸ್ ಹೊಂದಿದ್ದು, ಬೈಕ್‌ನಲ್ಲಿ ಕುಳಿತಾಗ ಆರಾಮದಾಯಕ ಅನುಭವ ನೀಡಲಿದೆ. 1485mm ವ್ಹೀಲ್‌ಬೇಸ್ ಹೊಂದಿದೆ.   ಬೈಕ್ 334 cc ಸಿಂಗಲ್ ಸಿಲಿಂಡರ್, DOHC ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು,   30 bhp ಪವರ್ ಹಾಗೂ 31 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹಾಗೂ BS6 ಎಮಿಶನ್ ಎಂಜಿನ್ ಹೊಂದಿದೆ.

ಸಸ್ಪೆಶನ್ ಕೂಡ ನೂತನ ಜಾವಾ ಪೆರಾಕ್ ಬೈಕ್ ತೂಕ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಇದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ರೇರ್ ಮೊನೊಶಾಕ್  ಯುನಿಟ್ ಹೊಂದಿದೆ. ಟ್ವಿನ್ ಡಿಸ್ಕ್ ಬ್ರೇಕ್ ಹಾಗೂ ಡ್ಯುಯೆಲ್ ಚಾನೆಲ್ ABS ಹೊಂದಿದೆ. 

ನೂತನ ಪೆರಾಕ್ ಬೈಕ್ ಬುಕಿಂಗ್ 2020ರ ಜನವರಿಯಿಂದ ಆರಂಭಗೊಳ್ಳಲಿದೆ. ಬೈಕ್ ಡೆಲಿವರಿ ಎಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿದೆ. 

click me!