ಗಂಟೆಗೆ 800 ಕಿ.ಮೀ ವೇಗ; ದಾಖಲೆ ಬರೆದ ಬ್ಲಡ್‌ಹೌಂಡ್ ಕಾರು!

By Web Desk  |  First Published Nov 14, 2019, 7:27 PM IST

ವೇಗ 100, 200 ಅಲ್ಲ, ಬರೋಬ್ಬರಿ 800. ಇದು ಕಾರಿನ ವೇಗ ಅಂದರೆ ನಂಬಲು ಕಷ್ಟ. ಆದರೆ ಬ್ಲಡ್‌ಹೌಂಡ್ ಕಾರು ಗಂಟೆಗೆ 800 ಕಿ.ಮೀ ವೇಗದಲ್ಲಿ ಪ್ರಯಾಣಿಸಿ ದಾಖಲೆ ಬರೆದಿದೆ.


ಸೌತ್ ಆಫ್ರಿಕಾ(ನ.14): ಸಾಮಾನ್ಯವಾಗಿ ಕಾರುಗಳು ಹೆದ್ದಾರಿಯಲ್ಲಿ ಗಂಟೆಗೆ 100 ಕಿ.ಮೀ, 140 ಕಿ.ಮೀ, ಕೆಲವೊಮ್ಮೆ 180 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಇನ್ನು ಫಾರ್ಮುಲಾ ಒನ್ ರೇಸ್ ಕಾರುಗಳು ಗರಿಷ್ಠ 375 ಕಿ.ಮೀ(KMPH) ವೇಗದಲ್ಲಿ ಚಲಿಸುತ್ತದೆ. ಆದರೆ ಬ್ಲಡ್‌ಹೌಂಡ್ ಕಾರು ಗಂಟೆಗೆ ಬರೋಬ್ಬರಿ 800 ಕಿ.ಮೀ ವೇಗದಲ್ಲಿ ಚಲಿಸೋ ಮೂಲಕ ಗಿನ್ನಿಸ್ ದಾಖಲೆ ಪುಟ ಸೇರಿಕೊಂಡಿದೆ.

Tap to resize

Latest Videos

ಇದನ್ನೂ ಓದಿ: ಡಿ.1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ; ತಿಳಿದುಕೊಳ್ಳಿ ಡಿಜಿಟಲ್ ಟೋಲ್!

ಸೌತ್ ಆಫ್ರಿಕಾದ ಕಲ್‌ಹ್ಯಾರಿ ಮರಳುಗಾಡಿನ ಟ್ರ್ಯಾಕ್‌ನಲ್ಲಿ ಕಾರಿನ ವೇಗವನ್ನು ಪರೀಕ್ಷಿಸಲಾಯಿತು.   ಪೈಲೆಟ್ ಆ್ಯಂಡಿ ಗ್ರೀನ್ ಕಾರು ಚಲಾಯಿಸಿದರು. ಈ ವೇಳೆ ಕಾರು ಗಂಟೆ 806 ಕಿ.ಮೀ ವೇಗ ದಾಖಲಿಸಿತು. ಈ ಮೂಲಕ ಗಿನ್ನಿಸ್ ಬುಕ್ ಸೇರಿಕೊಂಡಿತು. ಈ ಹಿಂದೆ ಇದೇ ಕಾರನ್ನು ಪರೀಕ್ಷೆ ನಡೆಸಿದಾಗ ಗಂಟೆಗೆ 790 ಕಿ.ಮೀ ವೇಗ ದಾಖಲಿಸಿತ್ತು.

 

The Bloodhound has hit 500mph! But it doesn't stop there! The goal is to beat the land speed record of 763mph 😳 pic.twitter.com/lyK17VV2z3

— Goodwood Road&Racing (@GoodwoodRRC)

ಇದನ್ನೂ ಓದಿ: 10 ಕೋಟಿ ರೂ ಬೆಂಟ್ಲಿ ಮಸ್ಲೇನ್ ಕಾರು ಖರೀದಿಸಿದ ಬೆಂಗಳೂರಿಗ; ಭಾರತದಲ್ಲೇ ಮೊದಲಿಗ!

ಶೀಘ್ರದಲ್ಲೇ ಕೆಲ ಅಪ್‌‌ಗ್ರೇಡ್‌ಗಳೊಂದಿಗೆ ಕಾರಿನ ವೇಗ ಪರೀಕ್ಷೆ ನಡೆಸಲು ಬ್ಲಡ್ ಹೌಂಡ್ ತಂಡ ನಿರ್ಧರಿಸಿದೆ. ಮುಂದಿನ ಬಾರಿ 885 ಕಿ.ಮೀ ವೇಗ ತಲುಪುವ ಗುರಿ ಇಟ್ಟುಕೊಂಡಿದೆ. ಅಂತಿಮ ಪರೀಕ್ಷೆಯಲ್ಲಿ 1,227.9kph ವೇಗ ದಾಖಲಿಸುವ ಗುರಿ ಹೊಂದಿದೆ.

ಬ್ಲಡ್‌ಹೌಂಡ್ ಕಾರು ವಿಶೇಷ ರಚನೆ ಹೊಂದಿದೆ. ವೇಗವಾಗಿ ಪ್ರಯಾಣಕ್ಕೆ ಬೇಕಾದ ಎಲ್ಲಾ ಅನುಕೂಲತೆಗಳು ಈ ಕಾರಿನಲ್ಲಿದೆ.  ವಿಮಾನದಲ್ಲಿರುವಂತೆ ಕಾಕ್‌ಪಿಟ್, ಅಲರಾಂ ಸಿಸ್ಟಮ್‌ ಈ ಕಾರಿನಲ್ಲಿದೆ. 

click me!