ಟೋಲ್‌ಗೇಟ್ ಸಂಪೂರ್ಣ ಡಿಜಿಟಲೀಕರಣವಾಗುತ್ತಿದೆ. ಡಿಸೆಂಬರ್ 1 ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ. ಫಾಸ್ಟ್ ಇಲ್ಲದಿದ್ದರೆ ಟೋಲ್‌ಗೇಟ್ ದಾಟಲು ಸಾಧ್ಯವಿಲ್ಲ. ನೂತನ ನಿಯಮ ಹಾಗೂ ಫಾಸ್ಟ್‌ಟ್ಯಾಗ್ ಅಳವಡಿಸುವುದು ಹೇಗೆ? ಇಲ್ಲಿದೆ ವಿವರ.
ನವದೆಹಲಿ(ನ.14): ಭಾರತ ಡಿಜಿಟಲೀಕರಣವಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಡಿಜಿಟಲ್ ವ್ಯವಸ್ಥೆ ಜಾರಿಗೆ ಬರುತ್ತಿದೆ. ಡಿಮಾನಿಟೈಸೇಶನ್ ಬಳಿಕ ನಗದು ವ್ಯವಹಾರ ಕಡಿಮೆಯಾಗಿದೆ. ರಸ್ತೆ ಮತ್ತು ಸಾರಿಗೆ ಇಲಾಖೆ ಕೂಡ ಇದಕ್ಕೆ ಹೊರತಾಗಿಲ್ಲ. ಕಾರಮ ಡಿ.1, 2019ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿದೆ.
ಇದನ್ನೂ ಓದಿ: ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!
undefined
ಇಷ್ಟು ದಿನ ಟೋಲ್ ಸಂಗ್ರಹ ಸ್ಥಳಗಳಲ್ಲಿ ವಾಹನ ಸವಾರರು ನಗದು ನೀಡಿ ರಸೀದಿ ಪಡೆದು ಮುಂದೆ ಹೋಗುತ್ತಿದ್ದರು. ಹೊಸ ವಾಹನಗಳು ಅಥವಾ ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿರುವ ವಾಹನಗಳು, ಫಾಸ್ಟ್‌ಟ್ಯಾಗ್ ಲೇನ್ ಮೂಲಕ ಸಾಗುತ್ತಿತ್ತು. ಟ್ಯಾಗ್ ವ್ಯಾಲೆಟ್ ಅಥಲಾ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ನಿಗದಿತ ಟೋಲ್ ಹಣ ಕಡಿತವಾಗುತ್ತಿತ್ತು. ಇನ್ಮುಂದೆ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳಬೇಕು.
ಇದನ್ನೂ ಓದಿ: ಮಾರುತಿ ಜಿಪ್ಸಿಗೆ ರೋಲ್ಸ್ ರಾಯ್ಸ್ ಲುಕ್; ಹೊಸ ನಿಯಮದಿಂದ ಕಾರು ಮಾರಾಟಕ್ಕೆ!
ಟೋಲ್ ಬಳಿ ನಗದು ನೀಡಿ ರಸೀದಿ ಪಡೆಯುವ ವ್ಯವಸ್ಥೆ ಡಿಸೆಂಬರ್ 1 ರಿಂದ ಇರುವುದಿಲ್ಲ. ವಾಹನ ಸವಾರರ ಸಮಯ ಉಳಿತಾಯ ಹಾಗೂ ಭ್ರಷ್ಟಾಚಾರ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಕಾರಿನ ಮುಂಭಾಗದ ವಿಂಡ್‌ಶೀಲ್ಡ್(ಗಾಜು) ಮೇಲೆ ಫಾಸ್ಟ್‌ಟ್ಯಾಗ್ ಅಂಟಿಸಿ, ರಿಚಾರ್ಜ್ ಮಾಡಿದರೆ ಆರಾಮ ಪ್ರಯಾಮ ನಿಮ್ಮದಾಗಲಿದೆ.
ಫಾಸ್ಟ್‌ಟ್ಯಾಗ್ ಅಳವಡಿಕೆ ಹಾಗೂ ಲಭ್ಯತೆ:
ಸರ್ಕಾರದಿಂದ ಮಾನ್ಯತೆ ಪಡೆದಿರುವ HDFC ಬ್ಯಾಂಕ್, ICICI ಬ್ಯಾಂಕ್, ಪೇಟಿಂ ಹಾಗೂ ಈಕ್ವಿಟಾಸ್ ಫಾಸ್ಟ್‌ಟ್ಯಾಗ್ ಸೇವೆ ನೀಡುತ್ತಿದೆ. ಇದರಲ್ಲಿ ನಿಮಗೆ ಅನುಕೂಲವಾದ ಫಾಸ್ಟ್‌ಟ್ಯಾಗ್ ಸೇವೆಯನ್ನು ಪಡೆದುಕೊಳ್ಳಬಹುದು. ಸುಮಾರು 100 ರೂಪಾಯಿಗಳಿಗೆ ಕಾರು, ಜೀಪು ವಾಹನಗಳ ಫಾಸ್ಟ್‌ಟ್ಯಾಗ್ ಸಿಗಲಿದೆ.(ಕಮರ್ಶಿಯಲ್, ಬಸ್, ಟ್ರಕ್ ಫಾಸ್‌ಟ್ಯಾಗ್ ಬೆಲೆ ಸುಮಾರು 500 ರೂ) ನಿಮ್ಮ ಮೊಬೈಲ್ ನಂಬರ್‌ಗೆ ಟ್ಯಾಗ್ ಲಿಂಕ್ ಮಾಡಿಕೊಳ್ಳಬೇಕು.
ಬಳಿಕ ಫಾಸ್ಟ್‌ಟ್ಯಾಗ್ ಸ್ಟಿಕ್ಕರನ್ನು ಮುಂಭಾಗದ ಗಾಜಿನ ಒಳಭಾಗದಲ್ಲಿ ಅಂಟಿಸಬೇಕು. ಇನ್ನು ಆನ್‌ಲೈನ್ ಮೂಲಕ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗೆ ಹಣ ರಿಚಾರ್ಜ್ ಮಾಡಬೇಕು. ಅಥವಾ ಫಾಸ್ಟ್‌ಟ್ಯಾಗ್‌ಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ರವಿಶಂಕರ್ ಪ್ರಸಾದ್ to ಗಂಭೀರ್; 18 ರಾಜಕಾರಣಿಗಳಿಂದ ಟ್ರಾಫಿಕ್ ರೂಲ್ಸ್ ಬ್ರೇಕ್!
ಟೋಲ್‌ಗಳಲ್ಲಿ ಸದ್ಯ ಫಾಸ್ಟ್‌ಟ್ಯಾಗ್ ಇರುವ ವಾಹನಗಳಿಗೆ ಬೇರೆ ಲೇನ್ ಹಾಕಲಾಗಿದೆ. ಈ ಮೂಲಕ ಸಾಗಿದರೆ ಟ್ಯಾಗ್ ಮೇಲಿರುವ ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ನಂಬರ್ ರೀಡ್ ಮಾಡಲಿದೆ. ಇಷ್ಟೇ ಅಲ್ಲ ನಿಗದಿತ ಟೋಲ್ ಮೊತ್ತವು ವ್ಯಾಲೆಟ್‌ನಿಂದ ಸಂದಾಯವಾಗಲಿದೆ.
ನಿಗಧಿತ ಫಾಸ್ಟ್‌ಟ್ಯಾಗ್ ಸೇವೆ ನಿಮಗೆ ಇಷ್ಟವಾಗದಿದ್ದಲ್ಲಿ, ಮತ್ತೊಂದು ಸೇವೆಗೆ ಬದಲಾಯಿಸಬಹುದು. ಊದಾಹರಣೆಗೆ HDFC ಬ್ಯಾಂಕ್ ಫಾಸ್ಟ್‌ಟ್ಯಾಗ್ ಬೇಡ ಎಂದೆನಿಸಿದರೆ, ICICI ಫಾಸ್ಟ್‌ಟ್ಯಾಗ್‌ಗೆ ವರ್ಗಾವಣೆಯಾಗಬಹುದು. ಮೊದಲಿದ್ದ HDFC ಬ್ಯಾಂಕ್ ಟ್ಯಾಗ್ ಕ್ಯಾನ್ಸಲ್ ಮಾಡಿ ICICI ಫಾಸ್ಟ್‌ಟ್ಯಾಗ್ ಬಳಕೆ ಮಾಡಬಹುದು.
ಎದುರಾಗಬಹುದಾದ ಸಮಸ್ಯೆ
ಕೆಲವು ಸಂದರ್ಭಗಳಲ್ಲಿ ಟೋಲ್ ಬಳಿ ಹಾಕಲಾಗಿರುವ ಫಾಸ್ಟ್‌ಟ್ಯಾಗ್ ರೀಡರ್ ಸಮಪರ್ಕವಾಗಿ ಕಾರ್ಯನಿರ್ವಹಿಸದೇ ಇರಬಹುದು. ಈ ವೇಳೆ ಟೋಲ್ ಬಳಿ ನಿಯೋಜನೆಗೊಂಡಿರವು ಕೆಲಸಗಾರರು, ರೀಡರ್ ಮಾಪಕದ ಮೂಲಕ ನಿಮ್ಮ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡೋ ಮೂಲಕ ಟೋಲ್ ಚಾರ್ಜಸ್ ಪಡೆದುಕೊಳ್ಳುತ್ತಾರೆ. ಇದು ಒಂದೆರೆಡು ನಿಮಿಷ ತೆಗೆದುಕೊಳ್ಳುತ್ತದೆ. ಅಧೀಕೃತ ಫಾಸ್ಟ್‌ಟ್ಯಾಗ್ ಇದ್ದಲ್ಲಿ, ಯಾವುದೇ ಟೋಲ್ ಗೇಟ್‌ಬಳಿಕ ನಗದು ಹಣ ಸಂದಾಯ ಮಾಡಬೇಕಿಲ್ಲ. ಒಂದು ವೇಳೆ ಟೋಲ್ ಸಂಗ್ರಹದಾರರ ಯಾವುದೇ ರೀಡರ್ ಕೆಲಸ ಮಾಡದೇ ಇದ್ದಲ್ಲಿ, ಫಾಸ್ಟ್‌ಟ್ಯಾಗ್ ಪ್ರಯಾಣಿಕರು ಹಣ ಸಂದಾಯ ಮಾಡದೇ ಮುಂದೆ ತೆರಳಬಹುದು.
ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ