ಲಡಾಖ್ ಬಿಕ್ಕಟ್ಟಿನ ಬಳಿಕ ಮೇಡ್ ಇನ್ ಇಂಡಿಯಾ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಭಾರತದ ಜೆಮೊಪೈ ಮಿಸೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. 44,000 ರೂಪಾಯಿ ಬೆಲೆಯ ಈ ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ಕಂಪನಿ ಹೇಳಿದೆ. ಸ್ಕೂಟರ್ ವಿವರ ಇಲ್ಲಿದೆ.
ನವದೆಹಲಿ(ಜೂ.26): ಗೊರೀನ್ ಇ ಮೊಬಿಲಿಟಿ ಹಾಗೂ ಒಪೈ ಜಂಟಿಯಾಗಿ ನೂತನ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಸ್ಕೂಟರ್ ಬೆಲೆ 44,000 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಜುಲೈ 15ರೊಳಗೆ ಈ ಸ್ಕೂಟರ್ ಬುಕ್ ಮಾಡಿದರೆ 2,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಅಂದರೆ ಸ್ಕೂಟರ್ ಬೆಲೆ 42,000 ರೂಪಾಯಿ ಆಗಲಿದೆ.
10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!.
ಸಂಪೂರ್ಣ ಚಾರ್ಜ್‌ಗೆ 75 ಕಿ.ಮೀ ಮೈಲೇಜ್ ನೀಡಲಿದೆ. 2 ಗಂಟೆಯಲ್ಲಿ ಶೇಕಡ 90 ರಷ್ಟು ಚಾರ್ಜ್ ಆಗಲಿದೆ. ಈ ಸ್ಕೂಟರ್ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದೆ. ಬ್ಯಾಟರಿ ಸೆಲ್ಸ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಬ್ಯಾಟರಿ ಸೆಲ್ಸ್ ಹೊರತು ಪಡಿಸಿದರೆ ಸಂಪೂರ್ಣವಾಗಿ ಭಾರತದಲ್ಲಿ ತಯಾರಾಗಿದೆ.
ವಿದ್ಯಾರ್ಥಿ ಆವಿಷ್ಕರಿಸಿದ ನೂತನ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ!
ಜೆಮೊಪೈ ಮಿಸೋ ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮಾಡಲು ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ. ಕಾರಣ ಇದರ ಗರಿಷ್ಠ ವೇಗ 25 ಕಿಲೋಮೀಟರ್ ಪ್ರತಿ ಗಂಟೆಗೆ. ಪ್ರತಿ ಗಂಟೆಗೆ 25 ಕಿ.ಮೀ ವೇಗಕ್ಕಿಂತ ಕಡಿಮೆ ಇದ್ದರೆ ಡ್ರೈವಿಂಗ್ ಲೈಸೆನ್ಸ್ ಅವಶ್ಯಕತೆ ಇಲ್ಲ. ಇಂತಹ ಸ್ಕೂಟರ್ ಅಥವಾ ಬೈಕನ್ನು ಬೈಸಿಕಲ್ ಎಂದು ಪರಿಗಣಿಸಲಾಗುತ್ತದೆ.
ಎಲೆಕ್ಟ್ರಿಕ್ ಸ್ಕೂಟರ್ ದುಬಾರಿಯಾಗಿರುವ ಈ ಸಂದರ್ಭದಲ್ಲಿ ಮಿಸೋ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಮೇಡ್ ಇನ್ ಇಂಡಿಯಾ ಈ ಸ್ಕೂಟರ್ ಭಾರತೀಯ ಎಲೆಕ್ಟ್ರಿಕ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ಕಂಪನಿ ಹೇಳಿದೆ.