ಹೊಂಡಾ ಗ್ರೇಸಿಯಾ 125 BS6 ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ!

By Suvarna News  |  First Published Jun 25, 2020, 7:57 PM IST

ಭಾರತದಲ್ಲಿನ ಪ್ರತಿ ಆಟೋಮೊಬೈಲ್ ಕಂಪನಿಗಳು ತನ್ನ ವಾಹನಗಳನ್ನು BS6 ಎಂಜಿನ್‌ಗೆ ಅಪ್‌ಗ್ರೇಡ್ ಮಾಡುತ್ತಿದೆ. ಇದೀಗ ಹೊಂಡಾ ಗ್ರೇಸಿಯಾ 15 ಸ್ಕೂಟರ್ ಇದೀಗ BS6 ಎಂಜಿನ್ ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಜೂ.25): ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆಯಾಗಿ ಇದೀಗ ಮತ್ತೊಂದು ಲಾಕ್‌ಡೌನ್‌ಗೆ ಕರ್ನಾ ಸೇರಿದಂತೆ ಬಹುತೇಕ ರಾಜ್ಯಗಳು ಚಿಂತನೆ ನಡೆಸುತ್ತಿದೆ. ಲಾಕ್‌ಡೌನ್ ಸಡಿಲಿಕೆಯಲ್ಲಿ ಹಲವು ಆಟೋಮೊಬೈಲ್ ಕಂಪನಿಗಳು ನೂತನ ವಾಹನಗಳನ್ನು ಬಿಡುಗಡೆ ಮಾಡಿದೆ. ಇದೀಗ ಹೊಂಡಾ ಹೊಂಡಾ ಗ್ರೇಸಿಯಾ 125 ಸ್ಕೂಟರ್  BS6 ಬಿಡುಗಡೆ ಮಾಡಿದೆ.

ಹೊಂಡಾ ಡಿಯೋ BS6 ಸ್ಕೂಟರ್ ಲಾಂಚ್; ವಿನ್ಯಾಸದಲ್ಲೂ ಬದಲಾವಣೆ!..

Tap to resize

Latest Videos

undefined

TVS ಎನ್‌ಟಾರ್ಕ್, ಎಪ್ರಿಲಿಯ SR 125, ಸುಜುಕಿ ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಗ್ರೇಸಿಯಾ ಸ್ಕೂಟರ್ ಬಿಡುಗಡೆಯಾಗಿದೆ. ಹೊಂಡಾ ಗ್ರೇಸಿಯಾ ನೂತನ ಬೈಕ್ ಬೆಲೆ 73,336 ರೂಪಾಯಿ(ಎಕ್ಸ್ ಶೋ ರೂಂ). ನೂತನ ಸ್ಕೂಟರ್ ಹಲವು ಬದಲಾವಣೆಯೊಂದಿಗೆ ಬಿಡುಗಡೆ ಮಾಡಲಾಗಿದೆ.

ಹೊಂಡಾ CD 110 ಡ್ರೀಮ್ BS6 ಬೈಕ್ ಬಿಡುಗಡೆ!.

ಹೊಸ LED ಹೆಡ್‌ಲ್ಯಾಂಪ್ಸ್, ಡಿಜಿಟಲ್ ಇನ್ಸು‌ಸ್ಟ್ರುಮೆಂಟ್ ಕ್ಲಸ್ಟರ್, ಎಂಜಿನ್ ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್ ಸೇರಿದಂತೆ ಕೆಲ ಬದಲಾವಣೆಗಳು ಈ ಸ್ಕೂಟರ್‌ನಲ್ಲಿದೆ. ಡಿಸ್ಕ್ ಬ್ರೇಕ್ ಹಾಗೂ ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಸ್ಟಾಂಡರ್ಡ್ ಹಾಗೂ ಡಿಲಕ್ಸ್ ವರ್ಶನ್ ಎರಡು ಸ್ಕೂಟರ್ ಬಿಡುಗಡೆ ಮಾಡಿದೆ. 

ಒಟ್ಟು 6 ವರ್ಷ ವಾರೆಂಟಿ ಕೂಡ ನೀಡಲಾಗಿದೆ. 124cc ಎಂಜಿನ್ ಹೊಂದಿರುವ ನೂತನ ಹೊಂಡಾ ಗ್ರೆಸಿಯಾ BS6 ಸ್ಕೂಟರ್  8.29 Ps ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

click me!