ಮಾರುತಿ ಬ್ರೆಜಾ, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಳೆದ ವರ್ಷ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಕಾರು ಒಂದೇ ವರ್ಷದಲ್ಲಿ ದಾಖಲೆ ಬರೆದಿದೆ. ಹ್ಯುಂಡೈ ವೆನ್ಯೂ ಕಾರಿನ ದಾಖಲೆ ವಿವರ ಇಲ್ಲಿದೆ.
ನವದೆಹಲಿ(ಜೂ.26): ಕೊರೋನಾ ವೈರಸ್, ಲಾಕ್‌ಡೌನ್ ಸಂಕಷ್ಟದ ನಡುವೆ ಹ್ಯುಂಡೈ ಕಂಪನಿಗೆ ವೆನ್ಯೂ ಕಾರು ನೆಮ್ಮದಿ ತಂದಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ ಹ್ಯುಂಡೈ ವೆನ್ಯೂ ಕಾರು, ಇದೀಗ 1 ಲಕ್ಷ ಕಾರು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಬಿಡುಗಡೆಯಾದ ಮೊದಲ ವರ್ಷವೇ 1 ಲಕ್ಷ ಗಡಿ ದಾಟಿದ ಸಾಧನೆ ಮಾಡಿದೆ.
ಹ್ಯುಂಡೈ ವೆನ್ಯು ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ!...
ಒಂದು ವರ್ಷದಲ್ಲಿ ವೆನ್ಯೂ ಕಾರು 97,400 ಕಾರುಗಳು ಭಾರತದಲ್ಲಿ ಮಾರಾಟವಾಗಿದೆ. ಇನ್ನು 7,400 ಕಾರುಗಳು ವಿದೇಶಕ್ಕೆ ರಫ್ತಾಗಿದೆ. ಈ ಮೂಲಕ 1 ಲಕ್ಷ ಗಡಿ ದಾಟಿದೆ. ಜನವರಿಯಿಂದ ಮಾರ್ಚ್ 2020ರ ವೇಳೆಗೆ 24,000 ಕಾರುಗಳು ಮಾರಾಟವಾಗಿದೆ.
ಜನವರಿಯಿಂದ ಮಾರ್ಚ್ ವರೆಗೆ ಮಾರಾಟದಲ್ಲಿ ಹ್ಯುಂಡೈ ವೆನ್ಯೂ ಮೊದಲ ಸ್ಥಾನ ಅಲಂಕರಿಸಿದೆ. ಮೊದಲ ಸ್ಥಾನದಲ್ಲಿದ್ದ ಮಾರುತಿ ಬ್ರೆಜಾ 23,085 ಕಾರುಗಳು ಮಾಟಾವಾಗೋ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಟಾಟಾ ನೆಕ್ಸಾನ್ ಕಾರು 10,545 ಕಾರುಗಳು ಮಾರಾಟವಾಗಿದೆ. ಫೋರ್ಡ್ ಇಕೋಸ್ಪೋರ್ಟ್ 10,093 ಹಾಗೂ ಮಹಿಂದ್ರ SUV 300 7862 ಕಾರುಗಳು ಮಾರಾಟವಾಗಿದೆ. 2019-20ರಲ್ಲಿ ಉತ್ತಮ ಕಾರು ಪಟ್ಟಿಯಲ್ಲಿ ಸ್ಥಾನ ಪಡೆದ ಹ್ಯುಂಡೈ ವೆನ್ಯೂ, 1.0 ಟರ್ಬೋ GDI ಎಂಜಿನ್ ಕೂಡ ಲಭ್ಯವಿದೆ.