ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!

By Web DeskFirst Published Jan 30, 2019, 5:34 PM IST
Highlights

ಕಿಯಾ ಮೋಟಾರ್ಸ್ ನೂತನ ಎಲೆಕ್ಟ್ರಿಕ್ ಕಾರನ್ನ ಆಂಧ್ರಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸಿದೆ. ಈ ಮೂಲಕ ಕಿಯಾ ಮೋಟಾರ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನ ಭಾರತದ ರಸ್ತೆಗಿಳಿಸಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಆಂಧ್ರಪ್ರದೇಶ(ಜ.30): ಸೌಥ್ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಈಗಾಗಲೇ ಆಂಧ್ರಪ್ರದೇಶದಲ್ಲಿ ಕಾರು ಉತ್ವಾದನೆಯಲ್ಲಿ ತೊಡಗಿದೆ. ಇದರ ಬೆನ್ನಲ್ಲೇ  ಎಲೆಕ್ಟ್ರಿಕ್ ಕಾರು ಉತ್ಪಾದಿಸಿರುವ ಕಿಯಾ ಮೋಟಾರ್ಸ್ ನೂತನ ಕಾರನ್ನ ಆಂಧ್ರಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಇದನ್ನೂ ಓದಿ: ಬೆಲೆ ಕಡಿತಕ್ಕೆ ಭಾರತದಲ್ಲೇ ಹ್ಯುಂಡೈ ಕೋನಾ ಕಾರು ಘಟಕ

ಕಿಯಾ ಸೋಲ್ ಇವಿ SUV ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 450 ಕಿ.ಮೀ ಪ್ರಯಾಣ ಮಾಡಬಹುದು. 2018ರ ಅಟೋ ಎಕ್ಸ್ಪೋದಲ್ಲಿ ಈ ಕಾರನ್ನ ಪರಿಚಯಿಸಲಾಗಿತ್ತು. ಇದೀಗ ನೂತನ ಕಾರು ರಸ್ತೆಗಿಳಿಯಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಹೊಸ ಕಾರನ್ನ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಇದನ್ನೂ ಓದಿ: ನೂತನ ಮಹೀಂದ್ರ XUV 300 ಕಾರಿನ ಮೈಲೇಜ್ ಎಷ್ಟಿದೆ?

ಸೋಲ್ ಇವಿ ಕಾರಿನಲ್ಲಿ ಲಿಥಿಯಮಂ ಇಯಾನ್ ಪೊಲಿಮರ್ 64kWh ಬ್ಯಾಟರಿ ಬಳಸಲಾಗಿದೆ. ಇದು 204PS ಪವರ್ ಹಾಗೂ 395Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿಯನ್ನ ಕಿಯಾ ಮೋಟಾರ್ಸ್ ಬಹಿರಂಗ ಪಡಿಸಿಲ್ಲ.


 

click me!