ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಮೂಲಕ ಕೋನಾ ಬೆಲೆ ಕಡಿಮೆಯಾಗಲಿದೆ. ದಕ್ಷಿಣ ಭಾರತದಲ್ಲಿ ಕಾರು ಘಟಕ ತಲೆ ಎತ್ತಲಿದೆ. ಹೀಗಾಗಿ ಸ್ಥಳೀಯರಿಗೆ 1500 ಉದ್ಯೋಗ ಸೃಷ್ಟಿಯಾಗಲಿದೆ. ಈ ಕುರಿತ ಹೆಚ್ಚಿನ ವಿವರ.
ಚೆನ್ನೈ(ಜ.30): ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಲು ಹ್ಯುಂಡೈ ಸಂಸ್ಥೆ ತಯಾರಿ ಆರಂಭಿಸಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ತಯಾರಿಸಲು ಭಾರತದಲ್ಲೇ ನಿರ್ಮಾಣ ಘಟಕ ಆರಂಭಿಸುತ್ತಿದೆ. ಇದಕ್ಕಾಗಿ 7,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
undefined
ಇದನ್ನೂ ಓದಿ: ಬಲೆನೊ RS ಫೇಸ್‌ಲಿಫ್ಟ್ ಕಾರು -ಬೆಲೆ 8.76 ಲಕ್ಷ ರೂಪಾಯಿ!
ತಮಿಳುನಾಡಿನ ಚೆನ್ನೈನಲ್ಲಿ ಹ್ಯುಂಡೈ ಎಲೆಕ್ಟ್ರಿಕ್ ಕಾರು ಘಟಕ ಆರಂಭಗೊಳ್ಳಲಿದೆ. ಕೋನಾ ಕಾರು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾಗಲಿದೆ. ಹೀಗಾಗಿ ಕೋನಾ ಕಾರಿನ ಬೆಲೆಯೂ ಕಡಿಮೆಯಾಗಲಿದೆ. ಜೊತೆಗೆ 1500 ಉದ್ಯೋಗ ಸೃಷ್ಟಿಯಾಗಲಿದೆ.
ಇದನ್ನೂ ಓದಿ: ಅತ್ಯಾಧುನಿಕ ಟೊಯೊಟಾ ಕ್ಯಾಮ್ರಿ - ಹೇಗಿದೆ ಈ ಹೈಬ್ರಿಡ್ ಕಾರು?
ಕೋನಾ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 350 ಕಿ.ಮೀ ಪ್ರಯಾಣ ಮಾಡಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 1 ಗಂಟೆಯಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. 136ps ಪವರ್ ಹಾಗೂ 395nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.