ಜಾವಾ ಬೈಕ್ ಮುಂಗಡ ಬುಕಿಂಗ್ ಹಾಗೂ ಟೆಸ್ಟ್ ರೈಡ್ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಆರಂಭಗೊಂಡಿರುವ 3 ಶೋ ರೂಂಗಳಲ್ಲಿ ಬೈಕ್ ಟೆಸ್ಟ್ ರೈಡ್ ಮಾಡಬಹುದಾಗಿದೆ. ಜಾವಾ ಮೋಟರ್ ಬೈಕ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು(ಡಿ.26): ಲೆಜೆಂಡರಿ ಬೈಕ್ ಜಾವ ಮತ್ತೆ ರೋಡಿಗಿಳಿಯುತ್ತಿದೆ ಎಂದು ಸುದ್ದಿ ತಿಳಿದ ತಕ್ಷಣ ಸಾಕಷ್ಟುಬೈಕ್ ಪ್ರಿಯರು ಸಂಭ್ರಮಿಸಿದ್ದರು. ಯಾವಾಗ ಬೈಕ್ ಕೈ ಸೇರುತ್ತದೋ, ಬೈಕ್ ಏರಿ ಯಾವಾಗ ಒಂದು ಸುತ್ತು ಹಾಕುತ್ತೇವೋ ಎಂಬೆಲ್ಲಾ ಕಾತರವನ್ನು ಮನದಲ್ಲೇ ಕಟ್ಟಿಕೊಳ್ಳುತ್ತಿದ್ದರು. ಈಗ ಅದೆಲ್ಲವೂ ಸಾಕಾರವಾಗುವ ಸಮಯ ಬಂದಾಗಿದೆ.
undefined
ಇದನ್ನೂ ಓದಿ: ಕಾರಿಗಿಂತಲೂ ಈ ನಂಬರ್ ಪ್ಲೇಟ್ ಬೆಲೆ ಜಾಸ್ತಿ-ಬರೋಬ್ಬರಿ 132 ಕೋಟಿ!
ತಿಂಗಳ ಹಿಂದೆಯೇ ಪ್ರೀ ಬುಕ್ಕಿಂಗ್ ಆರಂಭಿಸಿದ್ದ ಜಾವ ಇದೀಗ ಬೆಂಗಳೂರಿನ ಮೂರು ಕಡೆಗಳಲ್ಲಿ ಶೋ ರೂಂ ಓಪನ್ ಮಾಡಿದೆ. ಇಲ್ಲಿಯೂ ಪ್ರೀ ಬುಕ್ಕಿಂಗ್ ಸೌಲಭ್ಯವಿದೆ. ಜೊತೆಗೆ ಟೆಸ್ಟ್ ಡ್ರೈವ್‌ಗೂ ಅವಕಾಶವಿದೆ.
ಮೂರು ಕಡೆಗಳಲ್ಲಿ ಶುರು
ಬೆಂಗಳೂರಿನಲ್ಲಿಯೇ ಮೊದಲ ಬಾರಿಗೆ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಜಾವಾ ಡೀಲರ್‌ಶಿಪ್ ಪಡೆದುಕೊಂಡಿದ್ದು, ರಾಜಾಜಿನಗರ, ಬಸವನಗುಡಿ, ಕೋರಮಂಗಲದಲ್ಲಿ ಮೂರು ಹೊಸ ಶೋ ರೂಂಗಳನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: 2018ರಲ್ಲಿ ಸಂಚಲನ ಮೂಡಿಸಿದ ಬೈಕ್-ಜಾವಾಗೆ ಮೊದಲ ಸ್ಥಾನ!
* ಸ್ಕ್ವೈರ್ ಆಟೋ, ಕೃಷ್ಣ ನಗರ ಇಂಡಸ್ಟ್ರಿಯಲ್ ಲೇಔಟ್, ಹೊಸೂರ್ ಮುಖ್ಯ ರಸ್ತೆ, ಫೋರಂ ಮಾಲ್ ಪಕ್ಕ, ಕೋರಮಂಗಲ.
* ಸ್ಕಂದ ಮೋಟಾರ್ಸ್ , ಡಾ. ರಾಜ್ ಕುಮಾರ್ ರಸ್ತೆ, ನಾಲ್ಕನೇ ಬ್ಲಾಕ್, ರಾಜಾಜಿನಗರ.
* ಸೈನೆರ್ಜಿ ಮೋಟಾರ್ಸ್, ಸುಬ್ಬರಾಮ ಚೆಟ್ಟಿರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರ, ಬಸವನಗುಡಿ.
ಇದನ್ನೂ ಓದಿ: ಸೆಪ್ಟೆಂಬರ್ 2019ರ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್!
ಈ ಮೂರು ಕಡೆಗಳಲ್ಲಿ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಹೊಸ ಶೋರೂಂ ತೆರೆದಿದ್ದು ಸದ್ಯ, ಜಾವಾ ಮತ್ತು ಜಾವಾ ಫೋರ್ಟಿ ಟೂ ಬೈಕ್‌ಗಳು ಮುಂಗಡ ಬುಕ್ಕಿಂಗ್ ಮತ್ತು ಟೆಸ್ಟ್ ಡ್ರೈವ್‌ಗೆ ಲಭ್ಯವಿವೆ. ಜಾವಾ ಬೆಲೆ ರು. 1,67,000 ರು. ಮತ್ತು ಜಾವಾ ಫೋರ್ಟಿ ಟೂ ಬೆಲೆ ರೂ. 1,58,000 (ಎಕ್ಸ್ ಶೋ ರೂಂ ಬೆಲೆ, ಬೆಂಗಳೂರು) ಆಗಿದ್ದು ಬುಕ್ಕಿಂಗ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.