ಕಾರಿಗಿಂತಲೂ ಈ ನಂಬರ್ ಪ್ಲೇಟ್ ಬೆಲೆ ಜಾಸ್ತಿ-ಬರೋಬ್ಬರಿ 132 ಕೋಟಿ!

By Web Desk  |  First Published Dec 25, 2018, 9:59 PM IST

ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ನಾವು ಹೆಚ್ಚೆಂದರೆ 1 ಲಕ್ಷ ರೂಪಾಯಿ ನೀಡಬಹುದು. ಆದರೆ ಇಲ್ಲೊಬ್ಬ ಫ್ಯಾನ್ಸಿ ನಂಬರ್‌ಗಾಗಿ ಬರೋಬ್ಬರಿ 132 ಕೋಟಿ ರೂಪಾಯಿ ನೀಡಿದ್ದಾನೆ. ಇಲ್ಲಿದೆ ಹೆಚ್ಚಿನ ವಿವರ.


ಲಂಡನ್(ಡಿ.25): ಹೊಸ ಕಾರು ಖರೀದಿ ಮಾಡಲು ವರ್ಷವಿಡೀ ಲೆಕ್ಕಚಾರ ಮಾಡುತ್ತೇವೆ. ವಾಹನ ನಂಬರ್ ಯಾವುದಾದರೇನು ಮತ್ತೆ ಹಣ ಕೊಡೋ ಸಂಕಷ್ಟ ಯಾರಿಗೆ ಬೇಕು ಅನ್ನುವವರೇ ಹೆಚ್ಚು. ಇನ್ನು ಫ್ಯಾನ್ಸಿ ನಂಬರ್ ಬೇಕು ಎಂದು 50,000, 1 ಲಕ್ಷ ರೂಪಾಯಿ ನೀಡುವವರೂ ಇದ್ದಾರೆ. ಆದರೆ ಇಂಗ್ಲೆಂಡ್‌ನಲ್ಲೊಬ್ಬ ಫ್ಯಾನ್ಸಿ ನಂಬರ್‌ಗಾಗಿ ಬರೊಬ್ಬರಿ 132 ಕೋಟಿ ರೂಪಾಯಿ ನೀಡಿದ್ದಾನೆ.

Tap to resize

Latest Videos

undefined

ಇದನ್ನೂ ಓದಿ: ಕಾರು, ಬಸ್ಸು, ಟ್ರಕ್‌ಗಳಿಗೆ ಹೊಸ ನಿಯಮ-2019ರಿಂದ ಜಾರಿ-ನಿಮಗಿದು ತಿಳಿದಿರಲಿ!​​​​​​​

F1 ಅನ್ನೋ ನಂಬರ್ ಇಂಗ್ಲೆಂಡ್‌ನಲ್ಲಿ ಬಹುಬೇಡಿಕೆಯ ನಂಬರ್ ಇದೇ ನಂಬರ್ 132 ಕೋಟಿ ರೂಪಾಯಿಗೆ ಬಿಕರಿಯಾಗೋ ಮೂಲಕ ದಾಖಲೆ ಬರೆದಿದೆ. ಇದೇ ನಂಬರ್ ಹಲವು ಬಾರಿ ಹರಾಜಾಗಿದೆ. ಪ್ರತಿ ಭಾರಿಯೂ ದಾಖಲೆ ಮೊತ್ತಕ್ಕೆ ಸೇಲಾಗಿದೆ. ದುಬಾರಿ ಕಾರುಗಳಾದ ಬುಗಾಟಿ, ಮೆಕ್‌ಲಾರೆನ್ ಸೇರಿದಂತೆ ಹಲವು ಕಾರುಗಳಲ್ಲಿ ಈ ನಂಬರ್ ಬಳಕೆಯಾಗಿತ್ತು. 

ಇದನ್ನೂ ಓದಿ: ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಕಾರು- ಸ್ವಿಫ್ಟ್‌ಗೆ ಅಗ್ರಸ್ಥಾನ!

2008ರಲ್ಲಿ ಈ ನಂಬರ್ 4 ಕೋಟಿಗೆ ಸೇಲಾಗಿತ್ತು. ಅಂತಿಮವಾಗಿ ಈ ನಂಬರ್ 132 ಕೋಟಿ ರೂಪಾಯಿಗೆ ಹರಾಜಾಗೋ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು D5 ಸಂಖ್ಯೆಯ ನಂಬರ್ ಪ್ಲೇಟನ್ನ ಭಾರತ ಮೂಲದ ದುಬೈ ಉದ್ಯಮಿ ಬಲ್ವಿಂದರ್ ಸಹಾನಿ 67 ಕೋಟಿ ರೂಪಾಯಿಗೆ ಖರೀದಿಸಿದ್ದರು. ಇದೇ ಗರಿಷ್ಠವಾಗಿತ್ತು. 

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!